ADVERTISEMENT

ದೂರವಾದ ಜೆನ್ನಿಫರ್‌–ರೊಡ್ರಿಗಸ್‌ ಜೋಡಿ

ಪಿಟಿಐ
Published 13 ಮಾರ್ಚ್ 2021, 7:42 IST
Last Updated 13 ಮಾರ್ಚ್ 2021, 7:42 IST
ನಟಿ ಜೆನ್ನಿಫರ್ ಲೋಪೆಜ್ ಮತ್ತು ಬೇಸ್‌ಬಾಲ್‌ ಆಟಗಾರ ಅಲೆಕ್ಸ್ ರೊಡ್ರಿಗಸ್
ನಟಿ ಜೆನ್ನಿಫರ್ ಲೋಪೆಜ್ ಮತ್ತು ಬೇಸ್‌ಬಾಲ್‌ ಆಟಗಾರ ಅಲೆಕ್ಸ್ ರೊಡ್ರಿಗಸ್    

ಲಾಸ್‌ ಏಜಂಲೀಸ್‌: ಖ್ಯಾತ ಪಾಪ್‌ ಕಲಾವಿದೆ, ನಟಿ ಜೆನ್ನಿಫರ್ ಲೋಪೆಜ್ ಮತ್ತು ಬೇಸ್‌ಬಾಲ್‌ ಆಟಗಾರ ಅಲೆಕ್ಸ್ ರೊಡ್ರಿಗಸ್ ಅವರು ನಿಶ್ಚಿತಾರ್ಥವಾದ ಎರಡು ವರ್ಷಗಳ ಬಳಿಕ ದೂರವಾಗಿದ್ದಾರೆ.

‘ಜೆನ್ನಿಫರ್ ಲೋಪೆಜ್ ಮತ್ತು ಅಲೆಕ್ಸ್ ರೊಡ್ರಿಗಸ್ ಅವರು ‘ಬ್ರೇಕ್‌ ಅಪ್‌’ ಮಾಡಿಕೊಂಡಿದ್ದಾರೆ. ‘ತಾರಾ ಜೋಡಿ’ ಜೊತೆಗಿಲ್ಲ’ ಎಂದು ಪೇಜ್‌ಸಿಕ್ಸ್‌ ವರದಿ ಮಾಡಿತ್ತು.

ಮಾರ್ಚ್‌ 19 ರಂದು ಜೆನ್ನಿಫರ್ ಲೋಪೆಜ್ ಮತ್ತು ಅಲೆಕ್ಸ್ ರೊಡ್ರಿಗಸ್ ಅವರ ನಿಶ್ಚಿತಾರ್ಥ ನಡೆದಿತ್ತು. ಕೋವಿಡ್‌ನಿಂದಾಗಿ ಈ ಜೋಡಿಯು ಎರಡು ಬಾರಿ ಮದುವೆಯನ್ನು ಮುಂದೂಡಿದ್ದರು.

ADVERTISEMENT

ಸದ್ಯ ರೊಡ್ರಿಗಸ್‌ ಅವರು ಮಿಯಾಮಿಯಲ್ಲಿ ಬೇಸ್‌ಬಾಲ್‌ ಸ್ಪರ್ಧೆಗಾಗಿ ಸಿದ್ಧತೆ ನಡೆಸುತ್ತಿದ್ದರೆ, ಇತ್ತ ಜೆನ್ನಿಫರ್‌ಡೊಮಿನಿಕನ್ ರಿಪಬ್ಲಿಕ್‌ನಲ್ಲಿ ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ಧಾರೆ.

ರೊಡ್ರಿಗಸ್ ಅವರು ಬೋಟ್‌ವೊಂದರಲ್ಲಿ ಇರುವ ಚಿತ್ರವನ್ನು ಶುಕ್ರವಾರ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ‘ನಾನು ಬೋಟಿಂಗ್‌ ಮಾಡುತ್ತಿದ್ದೇನೆ. ನಿಮ್ಮ ವಿಕೇಂಡ್‌ ‍‍ಪ್ಲಾನ್‌ಗಳೇನು?’ ಎಂದು ಅವರು ಬರೆದುಕೊಂಡಿದ್ದಾರೆ.

ಇನ್ನೊಂದೆಡೆ ವಿಡಿಯೊವೊಂದನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಜೆನ್ನಿಫರ್‌, ‘ಇಂದು ನಗಲು ಉತ್ತಮ ಕಾರಣ ಸಿಕ್ಕಿದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.