ADVERTISEMENT

ಕಿರುತೆರೆ ಹಿರಿಯ ನಟಿ ತರ್ಲಾ ಜೋಶಿ ನಿಧನ

ಪಿಟಿಐ
Published 7 ಜೂನ್ 2021, 10:24 IST
Last Updated 7 ಜೂನ್ 2021, 10:24 IST
ತರ್ಲಾ ಜೋಶಿ ಅವರೊಂದಿಗೆಯಿರುವ ಚಿತ್ರವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ನಟಿ ನಿಯಾ ಶರ್ಮಾ                          –ಟ್ವಿಟರ್‌ ಚಿತ್ರ
ತರ್ಲಾ ಜೋಶಿ ಅವರೊಂದಿಗೆಯಿರುವ ಚಿತ್ರವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ನಟಿ ನಿಯಾ ಶರ್ಮಾ                          –ಟ್ವಿಟರ್‌ ಚಿತ್ರ   

ಮುಂಬೈ: ಕಿರುತೆರೆಯ ಹಿರಿಯ ನಟಿ ತರ್ಲಾ ಜೋಶಿ (90) ಅವರು ಹೃದಯಾಘಾತದಿಂದ ಭಾನುವಾರ ಬೆಳಿಗ್ಗೆ ನಿಧನರಾದರು.

ಈ ಬಗ್ಗೆ ಸ್ಟಾರ್‌ಪ್ಲಸ್‌ ಶೋ ‘ಏಕ್‌ ಹಜಾರೋ ಮೆ ಮೇರಿ ಬೆಹೆನಾ ಹೇ’ ಧಾರವಾಹಿಯಲ್ಲಿ ಜೋಶಿಯ ಸಹ ನಟಿ ಅಂಜು ಮಹೇಂದ್ರೂ ಅವರು ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.

‘ಏಕ್‌ ಹಜಾರೋ ಮೆ ಮೇರಿ ಬೆಹೆನಾ ಹೇ’ ಧಾರವಾಹಿಯಲ್ಲಿ ತರ್ಲಾ ಜೋಶಿ ಅವರು ಅಜ್ಜಿಯ ಪಾತ್ರವನ್ನು ಅಭಿನಯಿಸಿದ್ದರು. ಗುಜರಾತಿ ಭಾಷೆಯ ಹಲವು ಸಿನಿಮಾಗಳಲ್ಲೂ ನಟಿಸಿದ್ದರು.

ADVERTISEMENT

ತರ್ಲಾ ಜೋಶಿ ಅವರು ‘ಸಾರಾಭಾಯಿ ವರ್ಸರ್ಸ್‌ ಸಾರಾಭಾಯಿ’,‘ಬಾಂದಿನಿ’ ಧಾರಾವಾಹಿಗಳ ಮೂಲಕ ಜನಪ್ರಿಯತೆ ಪಡೆದಿದ್ದರು.

‘ಏಕ್‌ ಹಜಾರೋ ಮೆ ಮೇರಿ ಬೆಹೆನಾ ಹೇ’ ಧಾರವಾಹಿಯಲ್ಲಿ ಮೊಮ್ಮಗಳ ಪಾತ್ರದಲ್ಲಿ ನಟಿಸಿದ್ದ ನಿಯಾ ಶರ್ಮಾ ಅವರುಇನ್‌ಸ್ಟಾಗ್ರಾಂನಲ್ಲಿ ಸಂತಾಪ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.