ADVERTISEMENT

ಹೂಡಾ ವಿರುದ್ಧ ಸಿಬಿಐ ಆರೋಪಪಟ್ಟಿ ಸಲ್ಲಿಕೆ

ಪಿಟಿಐ
Published 2 ಫೆಬ್ರುವರಿ 2018, 19:30 IST
Last Updated 2 ಫೆಬ್ರುವರಿ 2018, 19:30 IST
ಭೂಪಿಂದರ್ ಸಿಂಗ್ ಹೂಡಾ
ಭೂಪಿಂದರ್ ಸಿಂಗ್ ಹೂಡಾ   

ನವದೆಹಲಿ : ಮನೇಸರ್‌ ಭೂ ಅವ್ಯವಹಾರ ಪ್ರಕರಣ ಸಂಬಂಧ ಹರಿಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಸೇರಿ 33 ಮಂದಿ ಮೇಲೆ ಸಿಬಿಐ ಶುಕ್ರವಾರ ಆರೋಪಪಟ್ಟಿ ಸಲ್ಲಿಸಿದೆ.

‘ಭ್ರಷ್ಟಾಚಾರ ತಡೆ ಕಾಯ್ದೆ ಮತ್ತು ಅಪರಾಧ ಪಿತೂರಿ ಮತ್ತು ವಂಚನೆ ಸೆಕ್ಷನ್‌ನಲ್ಲಿ ಸಿಬಿಐ ಆರೋಪಪಟ್ಟಿ ಸಲ್ಲಿಸಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ. 

ಎಕರೆಗೆ ₹4 ಕೋಟಿಗೂ ಅಧಿಕ ಮಾರುಕಟ್ಟೆ ಮೌಲ್ಯದ 400 ಎಕರೆ ಭೂಮಿಯನ್ನು ಸರ್ಕಾರಿ ಅಧಿಕಾರಿಗಳೊಂದಿಗೆ ಶಾಮೀಲಾಗಿ ಖಾಸಗಿ ಬಿಲ್ಡರ್‌ ಮತ್ತು ಇತರರು ಭೂಮಾಲೀಕರಿಂದ ಒಟ್ಟು ₹100 ಕೋಟಿಗೆ ಖರೀದಿ ಮಾಡಿದ ವಂಚನೆ ನಡೆದಿದೆ ಎಂದು ಎಫ್‌ಐಆರ್‌ನಲ್ಲಿ ಸಿಬಿಐ ಆರೋಪಿಸಿದೆ.

ADVERTISEMENT

ಗುಡ್‌ಗಾಂವ್‌ನ ಮನೇಸರ, ನೌರಂಗ್‌ಪುರ, ಲಕ್ನೋಲಾ ಗ್ರಾಮದ ಭೂಮಾಲೀಕರು ₹1,500 ಕೋಟಿ ನಷ್ಟ ಅನುಭವಿಸಿದ್ದಾರೆ ಎಂದು ಅದು ಹೇಳಿದೆ. 

ಖಾಸಗಿ ಬಿಲ್ಡರ್‌ಗಳು ಸರ್ಕಾರದ ಅಧಿಕಾರಿಗಳೊಂದಿಗೆ ಶಾಮೀಲಾಗಿ ಕಡಿಮೆ ಬೆಲೆಗೆ ಖರೀದಿಸಿದ್ದಾರೆ ಜತಗೆ ಭೂ ಸ್ವಾಧೀನ ಮಾಡಿಕೊಳ್ಳುವ ಬೆದರಿಕೆಯನ್ನು ಒಡ್ಡಿದ್ದಾರೆ ಎನ್ನುವ ಆರೋಪ ಮೇಲೆ ಸಿಬಿಐ 2015ರ ಸೆಪ್ಟೆಂಬರ್‌ ನಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.