ADVERTISEMENT

Fact Check | ಹಿಂಡನ್‌ಬರ್ಗ್‌ ಸಂಸ್ಥೆ ಮುಖ್ಯಸ್ಥನ ಜೊತೆ ರಾಹುಲ್?

ಪ್ರಜಾವಾಣಿ ವಿಶೇಷ
Published 20 ಫೆಬ್ರುವರಿ 2023, 22:00 IST
Last Updated 20 ಫೆಬ್ರುವರಿ 2023, 22:00 IST
   

ಹಿಂಡನ್‌ಬರ್ಗ್‌ ರಿಸರ್ಚ್‌ ಸಂಸ್ಥೆಯ ವರದಿ ಪ್ರಕಟವಾದ ಬಳಿಕ, ಉದ್ಯಮಿ ಗೌತಮ್ ಅದಾನಿ ನೇತೃತ್ವದ ಅದಾನಿ ಸಮೂಹವು ಭಾರಿ ನಷ್ಟ ಅನುಭವಿಸಿತು. ವರದಿಯ ಕುರಿತು ದೇಶದಾದ್ಯಂತ ಪರ–ವಿರೋಧದ ಚರ್ಚೆಗಳು ನಡೆಯುತ್ತಿವೆ. ಹಿಂಡನ್‌ಬರ್ಗ್‌ ಸಂಸ್ಥೆಯ ವರದಿಯ ಹಿಂದೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರ ಕೈವಾಡವಿದೆ ಎಂಬ ಆರೋಪ ಇರುವ ಟ್ವೀಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಸಂಸ್ಥೆಯ ಅಧ್ಯಕ್ಷ ನಾಥನ್ ಆ್ಯಂಡರ್ಸನ್ ಅವರ ಜೊತೆ ರಾಹುಲ್ ಗಾಂಧಿ ಇರುವ ಚಿತ್ರವೊಂದು ಹರಿದಾಡುತ್ತಿದೆ. ರಾಹುಲ್ ಅವರು ಅದಾನಿ ವಿರುದ್ಧ ಷಡ್ಯಂತ್ರ ಹೂಡಿದ್ದಾರೆ ಎಂದು ಕೆಲವು ಜಾಲತಾಣ ಬಳಕೆದಾರರು ಆರೋಪಿಸಿದ್ದಾರೆ. ಆದರೆ ಇದು ಸುಳ್ಳು.

ಚಿತ್ರದಲ್ಲಿ ರಾಹುಲ್ ಗಾಂಧಿ ಅವರ ಜೊತೆ ಕಾಣಿಸಿಕೊಂಡಿರುವ ವ್ಯಕ್ತಿ ಹಿಂಡನ್‌ಬರ್ಗ್ ಸಂಸ್ಥೆಯ ಮುಖ್ಯಸ್ಥ ಅಲ್ಲ. 2018ರಲ್ಲಿ ರಾಹುಲ್ ಅವರು ಜರ್ಮನಿ ಪ್ರವಾಸದಲ್ಲಿದ್ದಾಗ ಅಲ್ಲಿನ ಸಚಿವ ನೀಲ್ಸ್ ಆನೆನ್ ಅವರನ್ನು ಭೇಟಿಯಾಗಿದ್ದರು. ಅವರ ಜತೆಗಿನ ಚಿತ್ರವನ್ನೇ ಹಿಂಡನ್‌ಬರ್ಗ್‌ ಮುಖ್ಯಸ್ಥರ ಜೊತೆಗಿನ ಚಿತ್ರ ಎಂದು ತಪ್ಪಾಗಿ ಬಿಂಬಿಸಲಾಗುತ್ತಿದೆ ಎಂದು ಪಿಟಿಐ ಹಾಗೂ ಲಾಜಿಕಲ್ ಇಂಡಿಯನ್ ಫ್ಯಾಕ್ಟ್‌ಚೆಕ್ ಪ್ರಕಟಿಸಿವೆ. ರಾಹುಲ್–ಆನೆನ್ ಅವರ ಭೇಟಿಯ ಚಿತ್ರಗಳನ್ನು ಕಾಂಗ್ರೆಸ್‌ ಐದು ವರ್ಷಗಳ ಹಿಂದೆಯೇ ಟ್ವೀಟ್‌ ಮಾಡಿತ್ತು. ಅನೆನ್ ಅವರೂ ಟ್ವಿಟರ್‌ನಲ್ಲಿ ಈ ಚಿತ್ರ ಹಂಚಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.