ADVERTISEMENT

ಫ್ಯಾಕ್ಟ್ ಚೆಕ್ : ಹೊಸ ವರ್ಷಕ್ಕೆ ಬ್ಯಾಂಕ್‌ಗಳಿಂದ ಹೆಚ್ಚುವರಿ ಶುಲ್ಕ?

​ಪ್ರಜಾವಾಣಿ ವಾರ್ತೆ
Published 2 ಜನವರಿ 2023, 20:56 IST
Last Updated 2 ಜನವರಿ 2023, 20:56 IST
   

ಹೊಸ ವರ್ಷದ ಖುಷಿಯಲ್ಲಿರುವ ದೇಶದ ಜನರಿಗೆ ಬ್ಯಾಂಕ್‌ಗಳು ಪೆಟ್ಟು ನೀಡಲು ಸಜ್ಜಾಗಿವೆ ಎಂದು ಹೇಳಲಾಗುವ ಸುದ್ದಿವಾಹಿನಿಯ ವಿಡಿಯೊ ತುಣುಕು ಇತ್ತೀಚಿನ ದಿನಗಳಲ್ಲಿ ಹರಿದಾಡುತ್ತಿದೆ. ಚೆಕ್‌ಗಳಿಗೆ ಹಾಗೂ ಇಂಟರ್‌ನೆಟ್ ಬ್ಯಾಂಕಿಂಗ್ ಸೇವೆಗೆ ಹೆಚ್ಚುವರಿ ಶುಲ್ಕ ನೀಡಬೇಕು ಎಂದು ಸುದ್ದಿ ನಿರೂಪಕರು ವಿಡಿಯೊದಲ್ಲಿ ಹೇಳುವುದು ಕೇಳಿಸುತ್ತದೆ. ಬ್ಯಾಂಕ್‌ಗಳು ಇಂತಹ ಹಲವು ನಿಯಮಗಳನ್ನು ರೂಪಿಸಿವೆ. ಇದೇ 20ರಿಂದ ಜಾರಿಗೆ ಬರಲಿವೆ ಎಂಬುದಾಗಿ ವಿಡಿಯೊದಲ್ಲಿ ಹೇಳಲಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ. ಆದರೆ, ಈ ಸುದ್ದಿ ನಿಜವಲ್ಲ. ಇದು ಹಳೆಯ ವಿಡಿಯೊ.

ಬ್ಯಾಂಕ್‌ಗಳು ಹೆಚ್ಚುವರಿ ಶುಲ್ಕ ಹೇರುವ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿರುವ ವಿಡಿಯೊ ಹಳೆಯದು ಎಂದು ‘ದಿ ಕ್ವಿಂಟ್’ ಜಾಲತಾಣ ವರದಿ ಮಾಡಿದೆ. ಈ ವಿಡಿಯೊ ತುಣುಕಿನ ಪೂರ್ಣ ಭಾಗವನ್ನು 2018ರಲ್ಲಿ ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡಲಾಗಿದೆ. ವಿಡಿಯೊದಲ್ಲಿ ವರದಿಯಾಗಿರುವಂತೆ, ಜನವರಿ 20ರಿಂದ ಉಚಿತ ಸೇವೆಗಳನ್ನು ಸ್ಥಗಿತಗೊಳಿಸುವ ಯಾವುದೇ ಪ್ರಸ್ತಾವ ಇಲ್ಲ ಎಂದು ಅಂದಿನ ಹಣಕಾಸು ಕಾರ್ಯದರ್ಶಿ ರಾಜೀವ್ ಕುಮಾರ್ ಅವರು ಜನವರಿ 10ರಂದು ಟ್ವೀಟ್ ಮಾಡಿದ್ದರು. ಈ ವಿಡಿಯೊ ತುಣುಕಿಗೂ, 2023ರ ಹೊಸ ವರ್ಷಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಜಾಲತಾಣ ಸ್ಪಷ್ಟಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT