ADVERTISEMENT

ದಾಹ ತಣಿಸಲು ಹೆಸರುಕಾಳು ತಂಪು, ಎಳ್ಳು ಹನಿ

ಶ್ವೇತಾ ಹೆಗಡೆ ಹೊನ್ನಾವರ
Published 2 ಏಪ್ರಿಲ್ 2021, 19:30 IST
Last Updated 2 ಏಪ್ರಿಲ್ 2021, 19:30 IST
ರಾಗಿ ಪಾನಕ
ರಾಗಿ ಪಾನಕ   

ರಾಗಿ ಪಾನಕ

ಬೇಕಾಗುವ ಸಾಮಗ್ರಿಗಳು: ರಾಗಿ- ¼ ಕಪ್, ಬೆಲ್ಲ - ರುಚಿಗೆ ಬೇಕಾದಷ್ಟು, ಏಲಕ್ಕಿ- 1, ತುರಿದ ತೆಂಗಿನಕಾಯಿ - 2 ಟೇಬಲ್ ಚಮಚ

ತಯಾರಿಸುವ ವಿಧಾನ: ಮೊದಲು ಕಾಲು ಕಪ್ ರಾಗಿಯನ್ನು ಚೆನ್ನಾಗಿ ತೊಳೆದು ಸಂಪೂರ್ಣವಾಗಿ ನೀರನ್ನು ತೆಗೆದು ಬಾಣಲೆಯಲ್ಲಿ ಹುರಿಯಿರಿ, ಸಣ್ಣ ಉರಿಯಲ್ಲಿ ಹಸಿವಾಸನೆ ಹೋಗಿ ಕಂದುಬಣ್ಣಕ್ಕೆ ಬರುವವರಿಗೆ ಹುರಿದುಕೊಳ್ಳಿ. ಹುರಿದ ರಾಗಿ ತಣ್ಣಗಾದ ಮೇಲೆ ಒಂದು ಮಿಕ್ಸಿ ಜಾರಿಗೆ ಹಾಕಿ ಪುಡಿಮಾಡಿಕೊಳ್ಳಿ, ನಂತರ ಅದೇ ಮಿಕ್ಸಿ ಜಾರಿಗೆ ಬೆಲ್ಲ, ಏಲಕ್ಕಿ, ತುರಿದ ತೆಂಗಿನಕಾಯಿ, ಸ್ವಲ್ಪ ನೀರು ಸೇರಿಸಿ ಸಾಧ್ಯವಾದಷ್ಟು ನುಣ್ಣಗೆ ರುಬ್ಬಿಕೊಳ್ಳಿ, ರುಬ್ಬಿದ ರಾಗಿ ಮಿಶ್ರಣಕ್ಕೆ ಪಾನಕದ ಹದಕ್ಕೆ ನೀರು ಸೇರಿಸಿ ಜಾಲರಿಯಲ್ಲಿ ಸೋಸಿಕೊಂಡು ರಾಗಿ ಹನಿ ಕುಡಿಯಿರಿ. ಬೇಕಾದರೆ ತಣ್ಣಗಿನ ನೀರು ಅಥವಾ ಐಸ್‌ತುಂಡು ಸೇರಿಸಿ ಕುಡಿಯಬಹುದು. ಬೇಸಿಗೆಯ ಬಿಸಿಲಿಗೆ ಎಷ್ಟು ತಂಪೋ ಅಷ್ಟೇ ರುಚಿಯೂ, ಆರೋಗ್ಯಕರವೂ ಹೌದು.

ADVERTISEMENT

**


ಎಳ್ಳು ಹನಿ

ಬೇಕಾಗುವ ಸಾಮಗ್ರಿಗಳು: ಎಳ್ಳು - 2 ಟೇಬಲ್ ಚಮಚ, ಬೆಲ್ಲ - ರುಚಿಗೆ ಬೇಕಾದಷ್ಟು, ಏಲಕ್ಕಿ - 1, ತುರಿದ ತೆಂಗಿನಕಾಯಿ - 2 ಟೇಬಲ್ ಚಮಚ

ತಯಾರಿಸುವ ವಿಧಾನ: ಮೊದಲು ಎರಡು ಟೇಬಲ್ ಚಮಚ ಎಳ್ಳನ್ನು ಚೆನ್ನಾಗಿ ತೊಳೆದು ಸಂಪೂರ್ಣವಾಗಿ ನೀರನ್ನು ತೆಗೆದು ಬಾಣಲೆಯಲ್ಲಿ ಹುರಿಯಿರಿ, ಸಣ್ಣ ಉರಿಯಲ್ಲಿ ಎಳ್ಳು ಚಟಪಟ ಅಂತ ಸಿಡಿಯುವ ತನಕ ಹುರಿದುಕೊಳ್ಳಿ. ಹುರಿದ ಎಳ್ಳು ತಣ್ಣಗಾದ ಮೇಲೆ ಒಂದು ಮಿಕ್ಸಿ ಜಾರಿಗೆ ಎಳ್ಳು, ಏಲಕ್ಕಿ, ತುರಿದ ತೆಂಗಿನಕಾಯಿ ಸೇರಿಸಿ ಪುಡಿ ಮಾಡಿಕೊಳ್ಳಿ. ನಂತರ ಅದೇ ಮಿಕ್ಸಿ ಜಾರಿಗೆ ರುಚಿಗೆ ಬೇಕಾದಷ್ಟು ಬೆಲ್ಲ, ಸ್ವಲ್ಪನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬಿದ ಎಳ್ಳಿನ ಮಿಶ್ರಣಕ್ಕೆ ಪಾನಕದ ಹದಕ್ಕೆ ನೀರು ಸೇರಿಸಿ ಜಾಲರಿಯಲ್ಲಿ ಸೋಸಿಕೊಂಡು ಎಳ್ಳಿನ ಹನಿ ಕುಡಿಯಿರಿ. ಬೇಕಾದರೆ ತಣ್ಣಗಿನ ನೀರು ಅಥವಾ ಐಸ್‌ತುಂಡು ಸೇರಿಸಿ ಕುಡಿಯಬಹುದು. ಬೇಸಿಗೆಯ ಬಿಸಿಲಿಗೆ ತಂಪಾದ, ಆರೋಗ್ಯಕರವಾದ ಎಳ್ಳು ಹನಿ ನಿಮ್ಮ ದಾಹ ತಣಿಸುತ್ತದೆ.

**


ಹೆಸರುಕಾಳು ತಂಪು

ಬೇಕಾಗುವ ಸಾಮಗ್ರಿಗಳು: ಹೆಸರುಕಾಳು- ¼ ಕಪ್, ಬೆಲ್ಲ - ರುಚಿಗೆ ಬೇಕಾದಷ್ಟು, ಏಲಕ್ಕಿ- 1, ತುರಿದ ತೆಂಗಿನಕಾಯಿ- 2 ಟೇಬಲ್ ಚಮಚ

ತಯಾರಿಸುವ ವಿಧಾನ: ಮೊದಲು ಕಾಲು ಕಪ್ ಹೆಸರುಕಾಳನ್ನು ಚೆನ್ನಾಗಿ ತೊಳೆದು ಸಂಪೂರ್ಣವಾಗಿ ನೀರನ್ನು ತೆಗೆದು ಬಾಣಲೆಯಲ್ಲಿ ಸಣ್ಣ ಉರಿಯಲ್ಲಿ ಹುರಿಯಿರಿ. ಹಸಿವಾಸನೆ ಹೋಗಿ, ಕಂದುಬಣ್ಣ ಬಂದು, ಪರಿಮಳ ಬರುವವರೆಗೆ ಹುರಿದುಕೊಳ್ಳಿ. ಹುರಿದ ಹೆಸರುಕಾಳು ತಣ್ಣಗಾದ ಮೇಲೆ ಒಂದು ಮಿಕ್ಸಿ ಜಾರಿಗೆ ಹಾಕಿ ಪುಡಿ ಮಾಡಿಕೊಳ್ಳಿ, ನಂತರ ಅದೇ ಮಿಕ್ಸಿ ಜಾರಿಗೆ ಬೆಲ್ಲ, ಏಲಕ್ಕಿ, ತುರಿದ ತೆಂಗಿನಕಾಯಿ, ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ, ರುಬ್ಬಿದ ಹೆಸರುಕಾಳಿನ ಮಿಶ್ರಣಕ್ಕೆ ಪಾನಕದ ಹದಕ್ಕೆ ನೀರು ಸೇರಿಸಿ ಜಾಲರಿಯಲ್ಲಿ ಸೋಸಿಕೊಂಡು ಹೆಸರುಕಾಳು ಪಾನಕ ಕುಡಿಯಿರಿ. ಬೇಕಾದರೆ ತಣ್ಣಗಿನ ನೀರು ಅಥವಾ ಐಸ್‌ತುಂಡು ಸೇರಿಸಿ ಕುಡಿಯಬಹುದು. ಬಿಸಿಲ ಉರಿಗೆ ದೇಹಕ್ಕೆ ತಂಪಾಗಿಸುವ, ರುಚಿಯಾದ, ಆರೋಗ್ಯಕರವಾದ ಹೆಸರುಕಾಳು ಪಾನಕ ನೀವು ಸುಲಭವಾಗಿ ಮಾಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.