ADVERTISEMENT

ಭಾರತ–ಸೌದಿ ವಿದೇಶಾಂಗ ಸಚಿವರ ಸಭೆ: ಅಫ್ಗಾನಿಸ್ತಾನ ಬೆಳವಣಿಗೆ ಬಗ್ಗೆ ಚರ್ಚೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2021, 19:31 IST
Last Updated 19 ಸೆಪ್ಟೆಂಬರ್ 2021, 19:31 IST
ಕಾಬೂಲ್‌ ವಿಮಾನ ನಿಲ್ದಾಣ
ಕಾಬೂಲ್‌ ವಿಮಾನ ನಿಲ್ದಾಣ   

ನವದೆಹಲಿ: ವಿದೇಶಾಂಗ ಸಚಿವ ಎಸ್.ಜೈಶಂಕರ್‌ ಅವರು ಸೌದಿ ಅರೇಬಿಯಾದ ವಿದೇಶಾಂಗ ಸಚಿವ ಫೈಸಲ್‌ ಬಿನ್‌ ಫರ‍್ಹಾನ್‌ ಅಲ್‌ ಸೌದ್‌ ಅವರೊಂದಿಗೆ ಭಾನುವಾರ ಸಭೆ ನಡೆಸಿದ್ದು, ಅಫ್ಗಾನಿಸ್ತಾನದಲ್ಲಿನ ಬೆಳವಣಿಗೆಗಳ ಬಗ್ಗೆ ಪ್ರಮುಖವಾಗಿ ಚರ್ಚಿಸಿದ್ದಾರೆ.

ಇದೇ ವೇಳೆಗೆ ರಕ್ಷಣೆ, ವಾಣಿಜ್ಯ, ಹೂಡಿಕೆ ಹಾಗೂ ಇಂಧನ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರವನ್ನು ವಿಸ್ತರಿಸುವ ಬಗ್ಗೆಯೂ ಚರ್ಚಿಸಲಾಯಿತು ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆಯ ಪ್ರಕಟಣೆ ತಿಳಿಸಿದೆ. ಕೋವಿಡ್‌–19 ಸಾಂಕ್ರಾಮಿಕದ ಸಂದರ್ಭದಲ್ಲಿ ಭಾರತೀಯರಿಗೆ ಸೌದಿ ಅರೇಬಿಯಾ ನೆರವಾಗಿದ್ದನ್ನು ಶ್ಲಾಘಿಸಿದ ಜೈಶಂಕರ್‌, ಭಾರತದಿಂದ ಗಲ್ಫ್‌ ದೇಶಗಳಿಗೆ ಪ್ರಯಾಣಿಸುವವರ ಮೇಲಿನ ನಿರ್ಬಂಧಗಳಲ್ಲಿ ಇನ್ನಷ್ಟು ಸಡಿಲಿಕೆ ಮಾಡುವಂತೆ ಗ್ರಹಿಸಿದರು.

ಸೌದ್‌, ಭಾರತದಲ್ಲಿ ಮೂರು ದಿನಗಳ ಪ್ರವಾಸದಲ್ಲಿದ್ದು ಶನಿವಾರ ದೆಹಲಿಗೆ ಬಂದಿದ್ದಾರೆ. ಇಬ್ಬರೂ ಸಚಿವರು ಅಫ್ಗಾನಿಸ್ತಾನದಲ್ಲಿನ ಬೆಳವಣಿಗೆಗಳು, ಪರಸ್ಪರ ಹಿತಾಸಕ್ತಿಯ ಪ್ರಾದೇಶಿಕ ಹಾಗೂ ಅಂತರರಾಷ್ಟ್ರೀಯ ವಿಷಯಗಳಿಗೆ ಸಂಬಂಧಿಸಿದ ಚರ್ಚೆ ನಡೆಸಿದರು ಎಂದು ಸಚಿವಾಲಯದ ಪ್ರಕಟಣೆ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.