ADVERTISEMENT

ನುಡಿಸಿರಿಯ ಫಲಶ್ರುತಿ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2017, 19:30 IST
Last Updated 6 ಡಿಸೆಂಬರ್ 2017, 19:30 IST

‘ಆಳ್ವಾಸ್ ನುಡಿಸಿರಿ’ಯಲ್ಲಿ ಹುಬ್ಬಳ್ಳಿ ಹುಗ್ಗಿ ಸಿಕ್ತು. ಬುಡಕಟ್ಟಿನ ಸುಡುಗಾಡು ಸಿದ್ಧರು ಕಂಡರು. ಮರೆತುಹೋದ ಕನ್ನಡದ ಸಾವಿರ ವರ್ಷಗಳ ಕಲಾಲೋ
ಕದ ಕುಣಿತ- ಕಾವ್ಯ- ಕೆಚ್ಚಿನ ಸಿರಿಸಂಪತ್ತು ಸಿಕ್ಕಿತು. ನಮ್ಮೊಳಗೆ ನಾವೇ ಕಳೆದುಕೊಂಡ ಗತಕಾಲದ ಸಾಂಸ್ಕೃತಿಕ ಸಾಧನೆಗಳ ಇತಿಹಾಸ ಕಂಡುಕೊಳ್ಳುವುದೇ ನುಡಿಸಿರಿಯ ಎಚ್ಚರ.

ಕೋಟಿಗಟ್ಟಲೆ ರೂಪಾಯಿ ಖರ್ಚು ಮಾಡಿದರೂ ಸಾಧನೆಯಿಲ್ಲದೆ ಸೊರಗಿ ಹೋಗುವ ಕಾರ್ಯಕ್ರಮ ಗಳಿಗಿಂತ ಅಪಾಯದ ಅಂಚಿನಲ್ಲಿರುವ ಬುಡಕಟ್ಟು ಸಂಸ್ಕೃತಿಗೆ ಮರುಜೀವ ತುಂಬಬಲ್ಲ ಇಂಥ ನುಡಿಸಿರಿಗಳು ಕನ್ನಡದ ತಳಸಂಸ್ಕೃತಿಯನ್ನು ಬದುಕಿಸಬಲ್ಲವು. ಜನಪದೀಯ ಕಾವ್ಯ- ನಾಟಕ- ಕಥೆ- ಕ್ರೀಡೆ- ಕೈಗಾರಿಕೆ- ಬಣ್ಣಗಾರಿಕೆಗಳ ಪುನರ್ನವೀಕರಣದ ಮೂಲಕ ವಿಶ್ವಕ್ಕೆ ಕನ್ನಡದ ಕಾಣಿಕೆ ಕೊಡಬಲ್ಲವು.

ಪ್ರೊ.ಜಿ.ಎಚ್. ಹನ್ನೆರಡುಮಠ, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.