ADVERTISEMENT

25 ವರ್ಷಗಳ ಹಿಂದೆ| ಸೋಮವಾರ 22.7.1996

25 ವರ್ಷಗಳ ಹಿಂದೆ ಸೋಮವಾರ 22.7.1996

​ಪ್ರಜಾವಾಣಿ ವಾರ್ತೆ
Published 21 ಜುಲೈ 2021, 18:52 IST
Last Updated 21 ಜುಲೈ 2021, 18:52 IST
   

ಸೈನಿಕರ ಹತ್ಯೆ: ಎಲ್‌ಟಿಟಿಇ ಸಮರ್ಥನೆ

ಕೊಲಂಬೊ, ಜುಲೈ 21 (ಯುಎನ್ಐ, ಪಿಟಿಐ)– ಶ್ರೀಲಂಕಾದ ಈಶಾನ್ಯ ಕರಾವಳಿ ತೀರದ ಮುಲ್ಲೈತೀವು ಸೇನಾ ನೆಲೆ ಮೇಲೆ ಗುರುವಾರ ದಾಳಿ ನಡೆಸಿದ ಎಲ್‌ಟಿಟಿಇ ಸಂಘಟನೆ ಒಂದು ಸಾವಿರಕ್ಕೂ ಹೆಚ್ಚು ಸೈನಿಕರನ್ನು ಕೊಂದಿರುವುದನ್ನು ಸಮರ್ಥಿಸಿದ್ದು, ಮೃತ ಸೈನಿಕರ ದೇಹಗಳನ್ನು ರೆಡ್‌ಕ್ರಾಸ್ ಸಂಸ್ಥೆ ಮೂಲಕ ಒಪ್ಪಿಸಿದೆ.

ಮುಲ್ಲೈತೀವು ಸೇನಾ ನೆಲೆ ತಲುಪಲು ಸೈನಿಕರಿಗೆ ಅಡ್ಡಿಯೊಡ್ಡಿರುವ ಎಲ್‌ಟಿಟಿಇ ಉಗ್ರಗಾಮಿಗಳು ಇಂದು ಹೆಲಿಕಾಪ್ಟರ್ ಹೊಡೆದುರುಳಿಸಿ 37 ಜನರನ್ನು ಕೊಂದಿರು ವುದಾಗಿ ಹೇಳಿಕೊಂಡಿದ್ದಾರೆ. ನಿನ್ನೆಯಷ್ಟೇ ಎಲ್‌ಟಿಟಿಇ ಆತ್ಮಾಹುತಿ ದಳದ ದೋಣಿಗಳು ಶ್ರೀಲಂಕಾ ನೌಕಾದಳದ ಹಡಗು ‘ರಣವೀರು’ ವನ್ನು ಮುಳುಗಿಸಿದ ಬೆನ್ನಲ್ಲೇ ಹೆಲಿಕಾಪ್ಟರನ್ನು ಹೊಡೆದುರುಳಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.