ADVERTISEMENT

50 ವರ್ಷಗಳ ಹಿಂದೆ: ಗುರುವಾರ 29.7.1971

​ಪ್ರಜಾವಾಣಿ ವಾರ್ತೆ
Published 28 ಜುಲೈ 2021, 19:30 IST
Last Updated 28 ಜುಲೈ 2021, 19:30 IST
   

ಗಲಭೆ ಗೊಂದಲ ಮಧ್ಯೆ ಸಂವಿಧಾನ ತಿದ್ದುಪಡಿಗೆ ಮಸೂದೆ ಮಂಡನೆ

ನವದೆಹಲಿ, ಜುಲೈ 28– ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವೆ ಬಿಸಿ ಚರ್ಚೆ, ವಾದ–ವಿವಾದ ಮುಂತಾದ ಗಲಭೆ, ಗೊಂದಲದ ನಂತರ ಕಾನೂನು ಸಚಿವ ಎಚ್‌.ಆರ್. ಗೋಖಲೆ ಅವರು ಮೂಲಭೂತ ಹಕ್ಕುಗಳ ಕುರಿತ ಸಂವಿಧಾನ ತಿದ್ದುಪಡಿಗೆ ಎರಡು ಮಸೂದೆಗಳನ್ನು ಇಂದು ಲೋಕಸಭೆಯಲ್ಲಿ ಮಂಡಿಸಿದರು.

ಈ ತಿದ್ದುಪಡಿ ಅಂಗೀಕೃತವಾದರೆ ಸಂವಿಧಾನದಲ್ಲಿ ಮೂಲಭೂತ ಹಕ್ಕು ಕುರಿತ ಅಧ್ಯಾಯದ ತಿದ್ದುಪಡಿಗೆ ಸಂಸತ್ತಿಗೆ ಅಧಿಕಾರ ದೊರೆಯುತ್ತದೆ.

ADVERTISEMENT

ಆಡಳಿತ ಕಾಂಗ್ರೆಸ್ ಸಂಸದೀಯ ಪಕ್ಷದಲ್ಲಿ ಸಾರ್ವತ್ರಿಕ ಬೆಂಬಲ

ನವದೆಹಲಿ, ಜುಲೈ 28– ಸಂವಿಧಾನದ ಯಾವುದೇ ಭಾಗವನ್ನು ತಿದ್ದುಪಡಿ ಮಾಡುವುದಕ್ಕೆ ಹಾಗೂ ಸಾರ್ವಜನಿಕ ಉದ್ದೇಶಕ್ಕಾಗಿ ವಶಪಡಿಸಿಕೊಂಡ ಆಸ್ತಿ–ಪಾಸ್ತಿ ಬಗ್ಗೆ ಪರಿಹಾರದ ಪ್ರಶ್ನೆಯನ್ನು ನ್ಯಾಯಾಂಗ ಪರಿಶೀಲಿಸುವುದನ್ನು ತಡೆಯುವುದಕ್ಕೆ ಸಂಸತ್ತಿಗೆ ಅಧಿಕಾರ ನೀಡುವ ಎರಡು ಮಸೂದೆಗಳಿಗೆ ಇಂದು ಆಡಳಿತ ಕಾಂಗ್ರೆಸ್ ಸಂಸದೀಯ ಪಕ್ಷದ ಸಭೆಯಲ್ಲಿ ಸಾಮಾನ್ಯ ಬೆಂಬಲ ದೊರೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.