ADVERTISEMENT

ಇನ್ನೊಂದು ಇತಿಹಾಸ ಬರೆಯುವ ಕಾರ್ಯ?

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2021, 19:30 IST
Last Updated 3 ಸೆಪ್ಟೆಂಬರ್ 2021, 19:30 IST

ಬಿಹಾರದ ಚಾಪ್ರಾದಲ್ಲಿರುವ ಜಯಪ್ರಕಾಶ ನಾರಾಯಣ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರದ ಪಠ್ಯದಲ್ಲಿರುವ ಸಮಾಜವಾದಿ ನಾಯಕರಾದ ಜಯಪ್ರಕಾಶ ನಾರಾಯಣ ಮತ್ತು ರಾಮ ಮನೊಹರ ಲೋಹಿಯಾ ಅವರ ಬಗೆಗಿನ ಪುಟಗಳನ್ನು ತೆಗೆದು, ಅದರ ಬದಲಿಗೆ ದೀನದಯಾಳ್‌ ಉಪಾಧ್ಯಾಯ ಮತ್ತು ನೇತಾಜಿ ಸುಭಾಷ್‌ಚಂದ್ರ ಬೋಸರ ಹೆಸರನ್ನು ಸೇರಿಸುವ ಪ್ರಯತ್ನ ನಡೆದಿದ್ದು, ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರ ಕಟು ವಿರೋಧದಿಂದ ತಡೆಹಿಡಿಯಲಾಗಿದೆಯಂತೆ.

ಬಹುಶಃ ಇತಿಹಾಸವನ್ನು ಅಳಿಸಿ ಇನ್ನೊಂದು ಇತಿಹಾಸವನ್ನು ಬರೆಯವ ಕಾರ್ಯ ನಡೆದಂತಿದೆ. ವಿಪರ್ಯಾಸವೆಂದರೆ, ದೇಶದಲ್ಲಿ ನೆಹರೂ ಕುಟುಂಬದವರ ಹೆಸರನ್ನು ಸುಮಾರು 400ಕ್ಕೂ ಹೆಚ್ಚು ಸ್ಮಾರಕಗಳಿಗೆ, ರಸ್ತೆಗಳಿಗೆ, ಕಟ್ಟಡಗಳಿಗೆ, ಸೇತುವೆ, ಸ್ಟೇಡಿಯಂ ಮತ್ತು ಸಂಸ್ಥೆಗಳಿಗೆ ಇರಿಸಲಾಗಿದೆ ಎಂದು ದಶಕಗಳ ಕಾಲ ಮುಗಿಲೆತ್ತ ರಕ್ಕೆ ಆರೋಪಿಸಿ ಟೀಕಿಸಿದವರೇ ಈ ಬದಲಾವಣೆಯ ಹಿಂದೆ ಇರುವುದು. ಈ ಮೊದಲು ದೇಶದ ಪ್ರತಿಯೊಂದು ನಗರ, ಪಟ್ಟಣಗಳಲ್ಲಿ ಮಹಾತ್ಮ ಗಾಂಧಿ ಹೆಸರಿನ ರಸ್ತೆ ಇರುತ್ತಿತ್ತು. ಈಗ ಸಾವರ್ಕರ್‌, ಭಗತ್‌ ಸಿಂಗ್ ಹೆಸರುಗಳು ಮಿನುಗುತ್ತವೆ.

-ರಮಾನಂದ ಶರ್ಮಾ, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.