ADVERTISEMENT

ಮಾನವೀಯತೆ ಬತ್ತಿಹೋದ ಕಾಲದಲ್ಲಿ...

​ಪ್ರಜಾವಾಣಿ ವಾರ್ತೆ
Published 12 ಮೇ 2021, 19:31 IST
Last Updated 12 ಮೇ 2021, 19:31 IST

ಮುಕ್ಕಾಲು ಗಂಟೆ ಹೊತ್ತು ಒಂದೇ ಸಮನೆ 108ಕ್ಕೆ ಕರೆ ಮಾಡಿದರೂ ಆಂಬುಲೆನ್ಸ್ ಸಿಗದಿದ್ದರಿಂದ ಬೇಸತ್ತ ಶಿವಕುಮಾರ್‌ ಎಂಬುವರು ತಮ್ಮ ಸ್ನೇಹಿತನ ಆಟೊದಲ್ಲೇ ಅಮ್ಮನ ಶವ ಸಾಗಿಸಿದ್ದಾರೆ (ಪ್ರ.ವಾ., ಮೇ 11). ಇಂತಹ ಸಂದಿಗ್ಧ ಪರಿಸ್ಥಿತಿಯು ಸರ್ಕಾರದ ಯೋಜನೆಗಳಿಗೆ ಕನ್ನಡಿ ಹಿಡಿದಂತಿದೆ. ಆಟೊ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಶಿವಕುಮಾರ್, ತಾಯಿಯ ಶವವನ್ನು ಎಡಗೈಯಿಂದ ಬಿಗಿಯಾಗಿ ಅಪ್ಪಿ ಹಿಡಿದಿದ್ದ ದೃಶ್ಯ ಮನಕಲಕುವಂತಿದೆ.

ಮಾನವೀಯತೆಯನ್ನು ಜಗಕ್ಕೆ ಸಾರಿದ ದೇಶದಲ್ಲಿ ಇಂದು ಮಾನವೀಯತೆಗೆ ಕೈಚಾಚುವ ಪರಿಸ್ಥಿತಿ ಬಂದಿದೆ. ಮನುಷ್ಯತ್ವ ಸತ್ತು
ಹೋಗಿರುವುದು ಜನರಲ್ಲಿ ಅಲ್ಲ ಜನಪ್ರತಿನಿಧಿಗಳಲ್ಲಿ. ಕೋವಿಡ್‌ ಮೊದಲನೇ ಅಲೆಯಿಂದ ಪಾಠ ಕಲಿಯದ ಸರ್ಕಾರ, ತೀವ್ರ ಸಂಕಷ್ಟದ ಸಮಯದಲ್ಲಿ ಎಚ್ಚೆತ್ತುಕೊಳ್ಳಲು ಹೋಗಿದೆ. ಸಾಲಗಳ ಕೂಪಕ್ಕೆ ಬಿದ್ದ ಮಧ್ಯಮ ವರ್ಗ, ತೀರಾ ಸಂಕಷ್ಟದಲ್ಲಿರುವ ಕೆಳವರ್ಗ ಮತ್ತು ನಕಾರಾತ್ಮಕ ಚಿಂತನೆಗೆ ಬಿದ್ದಿರುವ ಯುವಜನರಿಗಾಗಿ ಯಾವ ಬಗೆಯ ಯೋಜನೆಗಳನ್ನು ರೂಪಿಸಿದೆ ಎಂಬುದನ್ನು ಸರ್ಕಾರ ತಿಳಿಸಬೇಕು.

–ಸತೀಶ್ ಬಿ.ಆರ್., ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.