ADVERTISEMENT

ಪದಕ ಗೆಲುವಿನ ಗುಟ್ಟು ಬಿಚ್ಚಿಟ್ಟ ಪ್ರಿಯಾ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2021, 20:13 IST
Last Updated 7 ಸೆಪ್ಟೆಂಬರ್ 2021, 20:13 IST
ಕೋಚ್ ಅರ್ಜುನ್ ಅಜಯ್ ಮತ್ತು ಪ್ರಿಯಾ ಮೊಹನ್
ಕೋಚ್ ಅರ್ಜುನ್ ಅಜಯ್ ಮತ್ತು ಪ್ರಿಯಾ ಮೊಹನ್   

ಬೆಂಗಳೂರು: ನೈರೋಬಿಯಲ್ಲಿ ಈಚೆಗೆ ನಡೆದ ವಿಶ್ವ ಯೂತ್ ಅಥ್ಲೆಟಿಕ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ ಬೆಂಗಳೂರಿನ ಪ್ರಿಯಾ ಮೋಹನ್ ತಮ್ಮ ಯಶಸ್ಸಿನ ಹಿಂದಿನ ಗುಟ್ಟು ಬಿಚ್ಚಿಟ್ಟದ್ದಾರೆ.

ಅವರು ಕಳೆದ 11 ತಿಂಗಳುಗಳಿಂದ ಸಕ್ಕರೆ ಇಲ್ಲದ ಕೋಲ್ಡ್ ಕಾಫಿ ಮತ್ತು ಚೀಸ್ ಲೇಪಿಸದ ಸ್ಯಾಂಡ್‌ವಿಚ್‌ಗಳನ್ನು ತಿನ್ನುತ್ತಿದ್ದರು. ಇದೀಗ ಕೂಟವನ್ನು ಮುಗಿಸಿ ಬೆಂಗಳೂರಿಗೆ ಮರಳಿದ ನಂತರ ಮತ್ತೆ ಸಕ್ಕರೆಯುಕ್ತ ಕಾಫಿ ಮತ್ತು ಸ್ಯಾಂಡ್‌ವಿಚ್ ಸೇವಿಸಿ ಖುಷಿಪಟ್ಟಿದ್ದಾರೆ.

ನೈರೋಬಿಯಲ್ಲಿ ನಡೆದಿದ್ದ 4X400 ಮೀ ಮಿಶ್ರ ರಿಲೆಯಲ್ಲಿ ಪ್ರಿಯಾ ಅವರಿದ್ದ ತಂಡವು ಕಂಚಿನ ಪದಕ ಗೆದ್ದಿತ್ತು. ಕೋಚ್ ಅರ್ಜುನ್ ಅಜಯ್ ಅವರ ಮಾರ್ಗದರ್ಶನದಲ್ಲಿ ಪ್ರಿಯಾ ಈ ಸಾಧನೆ ಮಾಡಿದ್ದಾರೆ. ‘ನೈರೋಬಿಯು ಎತ್ತರದ ಪ್ರದೇಶದಲ್ಲಿದೆ. ಆ ವಾತಾವರಣಕ್ಕೆ ಹೊಂದಿ ಕೊಳ್ಳಲು ಸಿದ್ಧತೆ ಮಾಡಿಕೊಂಡಿದ್ದೆ. ಅದಕ್ಕಾಗಿ ಉದಕಮಂಡಲದಲ್ಲಿ 35 ದಿನಗಳವರೆಗೆ ಅಭ್ಯಾಸ ಮಾಡಿದ್ದೆ. ಉದಕಮಂಡಲವು ಸಮುದ್ರಮಟ್ಟಕ್ಕಿಂತ ಸುಮಾರು 2240 ಮೀ. ಎತ್ತರದಲ್ಲಿದೆ’ ಎಂದು ಪ್ರಿಯಾ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.