ADVERTISEMENT

ದಕ್ಷಿಣ ಭಾರತಕ್ಕೆ ಬಂತು ‘ಮುಮುಸೊ’

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2019, 20:00 IST
Last Updated 18 ಫೆಬ್ರುವರಿ 2019, 20:00 IST
shraddha das
shraddha das   

ಜಾಗತಿಕ ಫ್ಯಾಷನ್ ಮತ್ತು ಜೀವನಶೈಲಿಯ ಬ್ರ್ಯಾಂಡ್ ಮುಮುಸೊ ಈಗ ಬೆಂಗಳೂರು ಪ್ರವೇಶಿಸಿದೆ.

ಕಮರ್ಷಿಯಲ್ ರಸ್ತೆಯಲ್ಲಿ ಈಚೆಗೆ ಮುಮುಸೊ ಮಳಿಗೆಯನ್ನು ನಟಿ ಶ್ರದ್ಧಾ ದಾಸ್ ಉದ್ಘಾಟಿಸಿದರು. ಮುಮುಸೊ ಇಂಡಿಯಾದ ಮಾರುಕಟ್ಟೆ ಮುಖ್ಯಸ್ಥ ಅನಿರ್ಬನ್ ಕುಂಡು ಈ ಸಂದರ್ಭದಲ್ಲಿ ಹಾಜರಿದ್ದರು.

ಆರೋಗ್ಯ, ಸೌಂದರ್ಯ, ಫ್ಯಾಷನ್ ಹೋಂ ಆಕ್ಸೆಸರಿಗಳಿಂದ ಹಿಡಿದು ಡಿಜಿಟಲ್ ಉತ್ಪನ್ನಗಳು, ಸ್ಟೇಷನರಿ, ಸಣ್ಣ ಎಲೆಕ್ಟ್ರಾನಿಕ್ ವಸ್ತುಗಳಿಗೆ ಮುಮುಸೊ ಜಾಗತಿಕವಾಗಿ ನಂಬಿಕಾರ್ಹ ಬ್ರ್ಯಾಂಡ್ ಆಗಿದೆ.

ADVERTISEMENT

ಮುಮುಸೊ ‌ಬೆಂಗಳೂರಿನ ಮೂಲಕ ಮೊದಲ ಬಾರಿಗೆ ದಕ್ಷಿಣ ಭಾರತದ ಮಾರುಕಟ್ಟೆಯನ್ನು ಪ್ರವೇಶಿಸಿದೆ. 30ಕ್ಕೂ ಹೆಚ್ಚಿನ ದೇಶಗಳಲ್ಲಿ ಮಳಿಗೆಗಳನ್ನು ಹೊಂದಿರುವ ಮುಮುಸೊ 2022ರ ಹೊತ್ತಿಗೆ ಭಾರತದಲ್ಲಿ 300ಕ್ಕೂ ಹೆಚ್ಚು ಮಳಿಗೆ ಸ್ಥಾಪಿಸುವ ಉದ್ದೇಶ ಹೊಂದಿದೆ. ಭಾರತದಲ್ಲಿ ಮಳಿಗೆಗಳ ಜೊತೆಗೆ ಇ–ವಾಣಿಜ್ಯ ಕ್ಷೇತ್ರಕ್ಕೂ ಮುಮುಸೊ ಪ್ರವೇಶಿಸಲು ಸಿದ್ಧತೆ ನಡೆಸಿದೆ.

ಮುಮುಸೊ ಗುಣಮಟ್ಟದ ಫ್ಯಾಷನ್ ಮತ್ತು ಲೈಫ್‌ಸ್ಟೈಲ್ ಬ್ರ್ಯಾಂಡ್ ಅಗಿದ್ದು ಕೈಗೆಟಕುವ ದರಗಳನ್ನು ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.