ADVERTISEMENT

ಬೆಂಗಳೂರಿನಲ್ಲಿ 150 ವರ್ಷಗಳಲ್ಲೇ ಗರಿಷ್ಠ ತಾಪಮಾನ

ಜ.30ರಂದು ಬೆಂಗಳೂರಿನಲ್ಲಿ 33.4 ಡಿಗ್ರಿ ಉಷ್ಣಾಂಶ

​ಪ್ರಜಾವಾಣಿ ವಾರ್ತೆ
Published 31 ಜನವರಿ 2020, 20:15 IST
Last Updated 31 ಜನವರಿ 2020, 20:15 IST
   

ಬೆಂಗಳೂರು: ನಗರದಲ್ಲಿ ಗುರುವಾರ 33.4 ಡಿಗ್ರಿ ತಾಪಮಾನ ದಾಖಲಾಗಿತ್ತು. ಇದು ಬೆಂಗಳೂರಿನಲ್ಲಿ ಜನವರಿಯಲ್ಲಿ ದಾಖಲಾದ ಗರಿಷ್ಠ ತಾಪಮಾನ. ಕಳೆದ ಒಂದೂವರೆ ಶತಮಾನದಲ್ಲಿ ಇಷ್ಟು ತಾಪಮಾನ ಈ ಅವಧಿಯಲ್ಲಿದಾಖಲಾಗಿರಲಿಲ್ಲ.

ಭಾರತೀಯ ಹವಾಮಾನ ಇಲಾಖೆ (ಐಎಂಡಿ) ನಗರದ ತಾಪಮಾನ ದಾಖಲು ಮಾಡಿಕೊಳ್ಳುತ್ತಿದ್ದ ದಿನದಿಂದ ಈವರೆಗೆ ನಗರದಲ್ಲಿ ಜನವರಿಯಲ್ಲಿ ಯಾವತ್ತೂ ಇಷ್ಟು ಉಷ್ಣಾಂಶ ದಾಖಲಾಗಿರಲಿಲ್ಲ.

32.8 ಡಿಗ್ರಿ:2000 ಇಸ್ವಿ ಜ.24ರಂದು ದಾಖಲಾಗಿದ್ದ ಗರಿಷ್ಠ ತಾಪಮಾನ

ADVERTISEMENT

4 ಡಿಗ್ರಿ:2020ರ ಜ.30 ಸಾಮಾನ್ಯ ತಾಪಮಾನಕ್ಕಿಂತ ಹೆಚ್ಚಿನ ಉಷ್ಣಾಂಶ ದಾಖಲು

ಬೆಚ್ಚನೆಯ ಚಳಿಗಾಲ!

‘ಇದು ಚಳಿಗಾಲದ ತಿಂಗಳಾದರೂ ಈ ವರ್ಷ ಬೆಚ್ಚನೆಯ ಅನುಭವವಾಗುತ್ತಿದೆ. ಸಾಮಾನ್ಯವಾಗಿ ಜನವರಿಯಲ್ಲಿ ತಂಪಾದ ಗಾಳಿ ಬೀಸುತ್ತದೆ. ಆದರೆ, ಈ ವರ್ಷ ಇಂತಹ ಅನುಭವವಾಗಲಿಲ್ಲ’ ಎಂದು ಐಎಂಡಿ ವಿಜ್ಞಾನಿ ಸಿ.ಎಸ್. ಪಾಟೀಲ ಹೇಳುತ್ತಾರೆ.

‘ಮುಂದಿನ ಬೇಸಿಗೆ ಸಾಮಾನ್ಯಕ್ಕಿಂತ ಹೆಚ್ಚು ಉಷ್ಣಾಂಶ ಹೊಂದಿರುತ್ತದೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ’ ಎಂದೂ ಅವರು ಹೇಳುತ್ತಾರೆ.

‍ಫೆಬ್ರುವರಿಯಲ್ಲಿಯೂ ಗರಿಷ್ಠ ತಾಪಮಾನ ?

ಈ ಫೆಬ್ರುವರಿಯ ಕೊನೆಯ ವಾರದಲ್ಲಿ ಗರಿಷ್ಠ 35ರಿಂದ 36 ಡಿಗ್ರಿ ತಾಪಮಾನ ದಾಖಲಾಗುವ ಸಾಧ್ಯತೆ ಇದೆ. ಇದು ಸಾಮಾನ್ಯಕ್ಕಿಂತ 3ರಿಂದ 5 ಡಿಗ್ರಿ ಹೆಚ್ಚಾಗಿರುತ್ತದೆ ಎಂದು ಐಎಂಡಿ ಮೂಲಗಳು ಹೇಳುತ್ತವೆ.

ಈ ವರ್ಷದ ಕಳೆದ ಕೆಲವು ವಾರಗಳಲ್ಲಿ ರಾಜ್ಯದಲ್ಲಿ ದಾಖಲಾಗಿರುವ ಗರಿಷ್ಠ ಮತ್ತು ಕನಿಷ್ಠ ತಾಪಮಾನ ಸಾಮಾನ್ಯಕ್ಕಿಂತಲೂ ಹೆಚ್ಚಾಗಿದೆ.
– ಜಿ.ಎಸ್. ಶ್ರೀನಿವಾಸ ರೆಡ್ಡಿ, ಕೆಎಸ್‌ಎನ್‌ಡಿಎಂಸಿ ನಿರ್ದೇಶಕ ‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.