ADVERTISEMENT

ರಾಜ್ಯದ ವಿವಿಧೆಡೆ 1000 ಬಸ್‌ಗಳಲ್ಲಿ 30 ಸಾವಿರ ವಲಸೆ ಕಾರ್ಮಿಕರ ಸ್ಥಳಾಂತರ

​ಪ್ರಜಾವಾಣಿ ವಾರ್ತೆ
Published 4 ಮೇ 2020, 16:24 IST
Last Updated 4 ಮೇ 2020, 16:24 IST
ವಲಸೆ ಕಾರ್ಮಿಕರಿಗೆ ಹಾಗೂ ವಿದ್ಯಾರ್ಥಿಗಳು ಸ್ವಂತ ಊರುಗಳಿಗೆ ತೆರಳಲು ಭಾನುವಾರ ಕೆಎಸ್‌ಆರ್‌ಟಿಸಿ ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಲಾಗಿತ್ತು. (ಪ್ರಜಾವಾಣಿ ಚಿತ್ರ. ಅನೂಪ್ ರಾಘ ಟಿ.)
ವಲಸೆ ಕಾರ್ಮಿಕರಿಗೆ ಹಾಗೂ ವಿದ್ಯಾರ್ಥಿಗಳು ಸ್ವಂತ ಊರುಗಳಿಗೆ ತೆರಳಲು ಭಾನುವಾರ ಕೆಎಸ್‌ಆರ್‌ಟಿಸಿ ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಲಾಗಿತ್ತು. (ಪ್ರಜಾವಾಣಿ ಚಿತ್ರ. ಅನೂಪ್ ರಾಘ ಟಿ.)   
""
""
""
""

ಬೆಂಗಳೂರು: ವಲಸೆ ಕಾರ್ಮಿಕರನ್ನು ಸ್ವಂತ ಊರುಗಳಿಗೆ ತಲುಪಿಸಲು ಕೆಎಸ್‌ಆರ್‌ಟಿಸಿ ಸೋಮವಾರ ಒಟ್ಟು 1000 ಬಸ್‌ಗಳನ್ನು ಓಡಿಸಿತು. ಸುಮಾರು 30 ಸಾವಿರ ಕಾರ್ಮಿಕರು ಬಸ್‌ಗಳ ಮೂಲಕ ಸ್ವಂತ ಊರುಗಳನ್ನು ತಲುಪಿದರು.

ಬೆಂಗಳೂರಿನಿಂದ 800 ಬಸ್ಸುಗಳು, ರಾಜ್ಯದ ಇತರಭಾಗಗಳಿಂದ 200 ಬಸ್ಸುಗಳನ್ನು ಓಡಿಸಲಾಗಿದೆ.ಕಳೆದ ಮೂರು ದಿನಗಳಿಂದ ಒಟ್ಟು59,880 ಕಾರ್ಮಿಕರನ್ನು ಸ್ಥಳಾಂತರಿಸಲಾಗಿದೆ.

ನಿನ್ನೆ ಮತ್ತು ಇಂದು ಸಂಜೆ 6 ಗಂಟೆಯವರೆಗೆ ಮಾತ್ರ ಬಸ್ಸುಗಳ ಕಾರ್ಯಚರಣೆ ಇರಲಿದೆ ಎಂಬಮಾಹಿತಿಯನ್ನು ಮೊದಲೇ ನೀಡಲಾಗಿತ್ತು. ಆದರೆ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ನಿಲ್ದಾಣಕ್ಕೆ ಬಂದ ಕಾರಣರಾತ್ರಿ 11 ಗಂಟೆಯವರೆಗೆ ಬಸ್‌ಗಳನ್ನು ಓಡಿಸಲಾಯಿತು.ನಿನ್ನೆ ರಾತ್ರಿ 11.10ಕ್ಕೆ ಗಂಗಾವತಿಗೆ ಕೊನೆಯ ಬಸ್‌ ಹೊರಟಿತು.

ADVERTISEMENT
ಮೆಜೆಸ್ಟಿಕ್‌ನಲ್ಲಿ ಜನಸಂದಣಿ (ಪ್ರಜಾವಾಣಿ ಚಿತ್ರ. ಅನೂಪ್ ರಾಘ ಟಿ.)

ಹುಬ್ಬಳ್ಳಿ:ಬಸ್‌ಗಳಲ್ಲಿ‌ ತವರೂರಿಗೆ ಮರಳಿದ 198 ಜನ

ಹುಬ್ಬಳ್ಳಿ: ರಾಜ್ಯದ ಇತರಸ್ಥಳಗಳಿಂದ ಹುಬ್ಬಳ್ಳಿ ಮಹಾನಗರಕ್ಕೆ ಆಗಮಿಸಿ ದುಡಿಯುತ್ತಿದ್ದ ವಲಸೆ ಕಾರ್ಮಿಕರು ಸೇರಿದಂತೆ, ಪ್ರವಾಸಿಗರು, ಯಾತ್ರಿಗಳು ಹಾಗೂ ವಿದ್ಯಾರ್ಥಿಗಳಿಗೆ ಅವರವರ ತವರೂರುಗಳಿಗೆ ತೆರಳಲು ಜಿಲ್ಲಾಡಳಿತದಿಂದ ವಿಶೇಷ ಬಸ್ ಸೌಲಭ್ಯ ಕಲ್ಪಿಸಲಾಗಿದೆ.

ಹುಬ್ಬಳ್ಳಿ ಹೊಸ ಬಸ್ ನಿಲ್ದಾಣದಿಂದ ಒಟ್ಟು 7 ಬಸ್ ಗಳಲ್ಲಿ198 ಜನರು ತಮ್ಮ ಊರುಗಳಿಗೆ ಮರಳಿದರು. ಬೆಂಗಳೂರು, ಕಲಬುರ್ಗಿ, ಬೀದರ್, ಅಫಜಲಪುರ, ಮಂಗಳೂರು, ರಾಯಚೂರು ಮಾರ್ಗಗಳಲ್ಲಿ ವಿಶೇಷಬಸ್ ಮೂಲಕ ಪ್ರಯಾಣಿಕರನ್ನು ಕಳುಹಿಸಲಾಗಿದೆ.

ಉಪವಿಭಾಗಾಧಿಕಾರಿ ಮಹಮದ್ ಜುಬೇರ್ ತಹಸೀಲ್ದಾರರಾದ ಶಶಿಧರ ಮಾಡ್ಯಾಳ, ಪ್ರಕಾಶ ನಾಶಿ, ವಾಕರಸಾಸಂ ಅಧಿಕಾರಿಗಳಾದ ಹೆಚ್ ಆರ್ ರಾಮನಗೌಡರ,ಅಶೋಕ ಪಾಟೀಲ ಮತ್ತಿತರರು ಹೊರ ಜಿಲ್ಲೆಗಳ ಪ್ರಯಾಣಿಕರನ್ನು ಕಳುಹಿಸುವ ಕಾರ್ಯ ನಿರ್ವಹಣೆ ಮಾಡಿದರು.

ಕಾರ್ಮಿಕರಿಗಾಗಿ‌ ನಾಳೆ ಬೆಳಗ್ಗೆ 9 ಗಂಟೆಯಿಂದ 6 ಗಂಟೆಯವರೆಗೆ ಬಸ್ಸುಗಳ ಕಾರ್ಯಚರಣೆಯ ವ್ಯವಸ್ಥೆ ಇರುತ್ತದೆ‌.

ಮಕ್ಕಳನ್ನು ಸಂತೈಸುವುದು ತಾಯಂದಿರಿಗೆ ಸವಾಲಾಗಿತ್ತು (ಪ್ರಜಾವಾಣಿ ಚಿತ್ರ: ಅನೂಪ್ ರಾಘ ಟಿ.)
ವಲಸೆ ಕಾರ್ಮಿಕರಿಗೆ ಸ್ವಂತ ಊರುಗಳಿಗೆ ತೆರಳಲುಕೆಎಸ್‌ಆರ್‌ಟಿಸಿವಿಶೇಷ ಬಸ್‌ಗಳ ವ್ಯವಸ್ಥೆ ಮಾಡಲಾಗಿತ್ತು. ಬಸ್‌ ಏರಿದ ನಂತರ ದಾನಿಗಳು ನೀಡುತ್ತಿದ್ದ ಆಹಾರ ಪೊಟ್ಟಣಕ್ಕೆ ಕೈಚಾಚಿದ ಪ್ರಯಾಣಿಕರು (ಪ್ರಜಾವಾಣಿ ಚಿತ್ರ – ಕೃಷ್ಣಕುಮಾರ್ ಪಿ.ಎಸ್.)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.