ಭತ್ತದ ಕಟಾವಿನ ನಂತರ ಜಮೀನಿನಲ್ಲಿ ತುಂಬೆ ಗಿಡಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಸಾಮಾನ್ಯವಾಗಿ ಚಳಿಗಾಲದಲ್ಲಿ ಹೂ ಬಿಟ್ಟು ಸಂತಾನ ವೃದ್ಧಿಸಿಕೊಳ್ಳುವ ಈ ಗಿಡ ಪಾರಂಪರಿಕ ವೈದ್ಯ ಪದ್ಧತಿಯಲ್ಲೂ ಬಳಕೆಯಾಗುತ್ತಿದೆ.
ಇದರ ಹೂವನ್ನು ದೇವರ ಪೂಜೆಗೂ ಬಳಸುತ್ತಾರೆ. ಈ ಗಿಡವನ್ನು ಹೊಟ್ಟೆನೋವು ಹಾಗೂ ಇತರ ಉದರ ಸಂಬಂಧಿ ಕಾಯಿಲೆಗಳಿಗೆ ಔಷಧಿಯಾಗಿಉಪಯೋಗಿಸುತ್ತಾರೆ. ಅಕ್ಕಿಯನ್ನು ಕೆಡದಂತೆ ಸಂಸ್ಕರಿಸಿ ಇಡಲು ಸಹ ಅಕ್ಕಿ ಚೀಲ ಮತ್ತು ಅಕ್ಕಿ ಮೂಡೆಯಲ್ಲಿ ಸೇರಿಸುತ್ತಾರೆ.
ಗ್ರಾಮೀಣ ಭಾಗದಲ್ಲಿ ಸೊಳ್ಳೆಯನ್ನು ನಿಯಂತ್ರಿಸಲು ತುಂಬೆ ಗಿಡವನ್ನು ಬೆಂಕಿಯಲ್ಲಿ ಹಾಕಿ ಹೊಗೆ ಎಬ್ಬಿಸುತ್ತಿದ್ದರು. ಆ ಹೊಗೆ ವಾಸನೆಗೆ ಸೊಳ್ಳೆಗಳು ಕಡಿಮೆಯಾಗುತ್ತಿದ್ದವು. ಆದರೆ ಈಗ ಇದರ ಬಳಕೆ ಕಡಿಮೆಯಾಗಿದೆ. ಈ ಗಿಡದ ಪ್ರಯೋಜನವನ್ನು ಅರಿತವರು ಮಾತ್ರ ಇಂದಿಗೂ ಅಲ್ಲಲ್ಲಿ ಬಳಸಿಕೊಳ್ಳುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.