ADVERTISEMENT

ಪಾಳು ನೆಲದೊಳು ಪರಿಪರಿ ಫಸಲು

ದೇವರಾಜ್ ಮ್ಯಾದನೇರಿ ಹೊನಗಡ್ಡಿ
Published 13 ಮೇ 2013, 19:59 IST
Last Updated 13 ಮೇ 2013, 19:59 IST

ಬಳ್ಳಾರಿ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಜಿ.ಎಚ್.ಕ್ಯಾಂಪ್ ಬರಡುಭೂಮಿಗೆ ಪ್ರಸಿದ್ಧಿ. ಇಂಥ ಬರಡು ಜಮೀನಿನಲ್ಲಿ ಬೆಳೆ ಬೆಳೆಯುವುದೆಂದರೆ ಆಗದ ಮಾತು ಎಂದೇ ಅಂದುಕೊಳ್ಳುವವರು ಹಲವರು. ಆದರೆ ಇಲ್ಲೊಂದು ತೋಟದಲ್ಲಿ ಮಾವಿನ ಗಿಡಗಳ ತುಂಬ ಹೂವು ಕಾಯಿಗಳದ್ದೇ ಕಾರುಬಾರು. ಇವುಗಳ ಜೊತೆಗೆ ವೈವಿಧ್ಯಮಯ ಗಿಡಗಳು!

ಕೇಳಲು ಅಚ್ಚರಿ ಎನಿಸಿದರೂ ಇದನ್ನು ಸಾಧಿಸಿ ತೋರಿಸಿದ್ದಾರೆ ರೈತ ಚಿದಾನಂದಪ್ಪ ಕಲಭಾವಿ. ತಮ್ಮ 22 ಎಕರೆ ಬಂಜರು ಜಮೀನದ್ಲ್ಲಲಿ ಫಸಲು ಬೆಳೆದು ಬದುಕು ಹಸನು ಮಾಡಿಕೊಂಡಿದ್ದಾರೆ ಇವರು. ಚಿದಾನಂದಪ್ಪ ಮೂರು ವರ್ಷಗಳಿಂದ ಮಾವು ತೋಟದಲ್ಲಿ ಮಾವು ಮಾತ್ರವಲ್ಲದೇ ಮಿಶ್ರ ಬೆಳೆ ತೆಗೆದಿದ್ದಾರೆ. ಹತ್ತಿ ಸಹ ಬೆಳೆದು ಶ್ರಮದ ಹಾದಿ ತುಳಿದವರು.

ಇವರ ತೋಟ ಹಸಿರಿನಿಂದ ಕಂಗೊಳಿಸುತ್ತಿರುವುದಕ್ಕೆ ಕಾರಣ ಹನಿ ನೀರಾವರಿ. ಇದರ ಯೋಜನೆ ಪಡೆದು ಆರು ಎಕರೆಯ್ಲ್ಲಲಿ ಮಾವು, 4 ಎಕರೆಯ್ಲ್ಲಲಿ ಚಿಕ್ಕ ಸಪೋಟ, ಮೊಸಂಬಿ, ನೇರಳೆ, ನಿಂಬು, ಬೆಳೆಯುತ್ತಿದ್ದಾರೆ. ಜೊತೆಗೆ ದಾಳಿಂಬೆ ನೆಟ್ಟಿದ್ದಾರೆ. ಇಷ್ಟಕ್ಕೇ ಮುಗಿದಿಲ್ಲ. ಜಮೀನಿನಲ್ಲಿ ಶೇಂಗಾ, ಮೆಕ್ಕೆಜೋಳ, ಟೊಮೆಟೊ, ಮೆಣಸಿನ ಕಾಯಿ, ಕೊತ್ತಂಬರಿ ಕೂಡ ಬೆಳೆಯುತ್ತಾರೆ. ಕಳೆದ ವರ್ಷ ಹತ್ತಿ ಬೆಳೆದು 2 ಲಕ್ಷ ಆದಾಯವನ್ನೂ ಗಳಿಸಿದ್ದಾರೆ.

ತೋಟಗಾರಿಕೆ ಇಲಾಖೆಯ ಮಾರ್ಗದರ್ಶನದಲ್ಲಿ ಚಿದಾನಂದಪ್ಪ ಆರು ಎಕರೆಗೆ ಬೇಕಾಗುವ `ಬೇನಿಸ್' ತಳಿ ಮಾವು ಬೆಳೆಸಿದ್ದಾರೆ. ಸದ್ಯ 3 ವರ್ಷದ ಗಿಡಗಳಿವೆ. ಒಮ್ಮೆ ಕಾಯಿ ಬಿಟ್ಟರೆ 65 ರಿಂದ 70ರವರಗೆ ಬಿಡುತ್ತದೆ.

ನಾಟಿ ಮಾಡುವ ವಿಧಾನ
ಇವರು ತಮ್ಮ ನಾಟಿ ವಿಧಾನವನ್ನು ವಿವರಿಸಿದ್ದು ಹೀಗೆ: `ಭೂಮಿಯನ್ನು ಚೆನ್ನಾಗಿ ಉಳುಮೆ ಮಾಡಿ ಮಟ್ಟು ಸಿದ್ಧಪಡಿಸಿಕೊಳ್ಳಬೇಕು. 8-10 ಮೀಟರ್ ಅಂತರದ್ಲ್ಲಲಿ ಒಂದು ಮೀಟರ್ ಗುಂಡಿಗಳನ್ನು ತೆಗೆಯಬೇಕು. ಈ ತರಹದ ಗುಂಡಿಗಳು ಹೊರ ಮಣ್ಣು 20-30 ಕೆ.ಜಿ ಕೊಟ್ಟಿಗೆ ಗೊಬ್ಬರ, ಜೊತೆಗೆ ಅಗತ್ಯ ಇರುವ ಇತರ ಗೊಬ್ಬರ ಹಾಕಬೇಕು. ಗೆದ್ದಲು ಹುಳ ಇರದಂತೆ ನೋಡಿಕೊಳ್ಳಬೇಕು.

ಈ ರೀತಿ ತಯಾರು ಮಾಡಿದ ಗುಂಡಿ ಮಧ್ಯೆ ಭಾಗದ್ಲ್ಲಲಿ ಮಣ್ಣಿನ ಮುದ್ದೆ ಸಹಿತ ನಾಟಿ ಮಾಡಬಹುದು. ಕಸಿ ಮಾಡಿದ ಜಾಗ ಮೇಲಿರುವಂತೆ ಮತ್ತು ಬೇರುಗಳು ಕಾಣಿಸದಂತೆ ಗಿಡವನ್ನು ನೆಡಬೇಕು. ನಾಟಿ ಮಾಡಿದ ತಕ್ಷಣ ನೀರು ಕೊಟ್ಟು ಊರಗೋಲು ಕೊಡಬೇಕು. ಮೊದಲು ಒಂದರಿಂದ ಎರಡು ವರ್ಷಗಳವರೆಗೆ ಬೇಸಿಗೆಯ್ಲ್ಲಲಿ ರಕ್ಷಣಾತ್ಮಕ ನೀರಾವರಿ ಮತ್ತು ನೆರಳನ್ನು ಒದಗಿಸಬೇಕು'.ಸಂಪರ್ಕಕ್ಕೆ: 9945131790.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.