ADVERTISEMENT

ಬಾಳೆಗೊನೆಗೆ ಆಹಾರ ಪೂರೈಕೆ

ಸುಲಭ ಉಪಾಯ

ಹರ್ಷಿತ ಎಂ.
Published 15 ಅಕ್ಟೋಬರ್ 2018, 19:45 IST
Last Updated 15 ಅಕ್ಟೋಬರ್ 2018, 19:45 IST
ಬಾಳೆಗೊನೆಯ ತುದಿಗೆ ಪೋಷಕಾಂಶವಿರುವ ಕವರ್ ಕಟ್ಟಿರುವ ದೃಶ್ಯ
ಬಾಳೆಗೊನೆಯ ತುದಿಗೆ ಪೋಷಕಾಂಶವಿರುವ ಕವರ್ ಕಟ್ಟಿರುವ ದೃಶ್ಯ   

ಬಾಳೆಗೆ ಬೇರಿನಿಂದ ಕೊಡುವ ಪೋಷಕಾಂಶಗಳು ಗೊನೆಯಲ್ಲಿರುವ ಎಲ್ಲ ಕಾಯಿಗಳಿಗೂ ಸರಿಯಾಗಿ ಸಿಗುವುದಿಲ್ಲ. ಹಾಗಾಗಿ ಗೊನೆಯ ತುದಿಯಲ್ಲಿರುವ ಕಾಯಿಗಳು ಸರಿಯಾಗಿ ಬೆಳವಣಿಗೆಯಾಗುವುದಿಲ್ಲ.

ಹಾಗಾಗಿ ಬಾಳೆಗೊನೆಗೆ ನೇರವಾಗಿ ಪೋಷಕಾಂಶಗಳನ್ನು ಪೂರೈಸುವಂತಹ ವಿಧಾನವೊಂದನ್ನು ತುಮಕೂರು ಭಾಗದ ಕೆಲ ರೈತರು ಅನುಸರಿಸುತ್ತಿದ್ದಾರೆ. ಆ ವಿಧಾನ ಹೀಗಿದೆ.

ಪೋಷಕಾಂಶ ಪೂರೈಕೆ ವಿಧಾನ
1 ಕೆ.ಜಿ. ಸಗಣಿ, 1 ಲೀಟರ್ ಗಂಜಲ ಮತ್ತು 1 ಲೀಟರ್ ನೀರನ್ನು ಮಿಶ್ರಣ ಮಾಡಿ. ಆ ಮಿಶ್ರಣವನ್ನು ಒಂದು ಕವರ್‍ನಲ್ಲಿ ತುಂಬಿ. ಕವರಿನ ಬಾಯಿಯನ್ನು ಗೊನೆಗೆ ಕಟ್ಟಬೇಕು. ಕಟ್ಟುವಾಗ ಗೊನೆಗಳಲ್ಲಿನ ಹೂವನ್ನು ಓರೆಯಾಗಿ ಕತ್ತರಿಸಿ, ಗೊನೆಯ ತುದಿ ಮಿಶ್ರಣ ತುಂಬಿದ ಕವರ್ ಒಳಗೆ ಪೂರ್ತಿ ಮುಳುಗಿಸಿ, ಕವರ್‌ ಬಾಯಿಯನ್ನು ಬಿಗಿಯಾಗಿ ಕಟ್ಟಬೇಕು (ಚಿತ್ರ ನೋಡಿ). ಈ ಮಿಶ್ರಣ ರೂಪದಲ್ಲಿ ಗೊನೆಗಳಿಗೆ ಪೋಷಕಾಂಶ ಪೂರೈಸುವುದರಿಂದ ಕಾಯಿಗಳು ಬೆಳವಣಿಗೆ ಹೊಂದುತ್ತವೆ. ಜತೆಗೆ, ನೋಡಲೂ ಆಕರ್ಷಕವಾಗಿರುತ್ತವೆ ಎನ್ನುವುದು ಈ ಪ್ರಯೋಗ ಬಳಸಿ ನೋಡಿರುವ ರೈತರ ಅಭಿಪ್ರಾಯ. ‘ಕೆಲವು ರೈತರು ಈ ವಿಧಾನ ಅನುಸರಿಸುತ್ತಿದ್ದಾರೆ. ಆದರೆ, ವೈಜ್ಞಾನಿಕವಾಗಿ ಇದು ದೃಢಪಟ್ಟಿಲ್ಲ’ ಎನ್ನುತ್ತಾರೆ ನಿವೃತ್ತ ತೋಟಗಾರಿಕಾ ಇಲಾಖೆ ಹಿರಿಯ ಅಧಿಕಾರಿ ಡಾ.ಎಸ್.ವಿ.ಹಿತ್ತಲಮನಿ.

ಅಂದ ಹಾಗೆ ಮಿಶ್ರಣ ಕಟ್ಟುವ ಮುನ್ನ ಈ ಅಂಶಗಳನ್ನು ಗಮನಿಸಿ; ಮಿಶ್ರಣ ಕಟ್ಟಲು ಆರಿಸಿಕೊಳ್ಳುವ ಗೊನೆಗಳಲ್ಲಿ ಕಾಯಿಗಳು ಬೆಳವಣಿಗೆ ಹಂತದಲ್ಲಿರಬೇಕು.ಗೊನೆಯ ಕೆಳಭಾಗದಲ್ಲಿರುವ ಕಾಯಿಗಳು ಮೇಲ್ಭಾಗದಲ್ಲಿರುವ ಕಾಯಿಗಳಿಗಿಂತ ಕಡಿಮೆ ಬೆಳವಣಿಗೆ ಹೊಂದಿರಬೇಕು. ಇಂಥ ಗೊನೆಯ ತುದಿಗೆ ಮೇಲಿನ ಮಿಶ್ರಣವಿರುವ ಕವರ್ ಕಟ್ಟಬೇಕು ಎಂಬುದು ರೈತರ ಸಲಹೆಯಾಗಿದೆ.

ADVERTISEMENT

ಪ್ರಯೋಗ ಕುರಿತು ಮಾಹಿತಿಗಾಗಿ ರಾಘವೇಂದ್ರ ಬೈಚೇನಹಳ್ಳಿ: 9972206554 (ಸಮಯ: ಸಂಜೆ 5ರ ನಂತರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.