ADVERTISEMENT

ತಿಪ್ಪೆ ಮಾಡುವ ಮುನ್ನ...

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2019, 19:45 IST
Last Updated 4 ಮಾರ್ಚ್ 2019, 19:45 IST
   

* ವಾಸದ ಮನೆಯಿಂದ ಅಥವಾ ಕೊಟ್ಟಿಗೆಯಿಂದ ತುಸು ದೂರದಲ್ಲಿ ತಿಪ್ಪೆ ಮಾಡಿ.

*ತಿಪ್ಪೆ ಮಾಡುವ ಜಾಗದಲ್ಲಿ ಮೊದಲು ಹೊಂಗೆ, ಬೇವು ಅಥವಾ ಚೆರ‍್ರಿ ಹಣ್ಣಿನ ಮರಗಳನ್ನು ಬೆಳೆಸಿ. ಅದರ ನೆರಳಲ್ಲಿ ತಿಪ್ಪೆ ಮಾಡಿ‌.

* ಕೊಟ್ಟಿಗೆಯಲ್ಲಿ ಸಗಣಿ, ಗಂಜಲ ನಿಲ್ಲದಂತೆ ಹರಿದು ಹೋಗಲು ನೆಲಕ್ಕೆ ಚಪ್ಪಡಿಗಳನ್ನು ಹಾಕಿಸಿ, ಇಳಿಜಾರು ಮಾಡಿ.

ADVERTISEMENT

* ಪ್ರತಿ ದಿನ ಬೇಲಿಯಲ್ಲಿ ಬೆಳೆದಿರುವ ಗ್ಲಿರಿಸೀಡಿಯಾ (ಗೊಬ್ಬರದ ಗಿಡ) ಸೊಪ್ಪು ತಂದು ಕೊಟ್ಟಿಗೆಯಲ್ಲಿ ಹರಡಿ. ಗ್ಲಿರಿಸೀಡಿಯಾ ಸಿಗದಿದ್ದರೆ ತಂಗಡಿ ಸೊಪ್ಪು ಹಾಕಬಹುದು. ದನಗಳಿಗೆ ಮಲಗಲು ಮೃದುವಾಗಿರುತ್ತವೆ. ಮರುದಿನ ಬೆಳಿಗ್ಗೆ ಹೊತ್ತಿಗೆ ಗಂಜಲ, ಸಗಣಿ ಬೆರೆತು ಉತ್ಕೃಷ್ಟ ಗೊಬ್ಬರವಾಗಿರುತ್ತದೆ‌.

* ಬೆಳಿಗ್ಗೆ ಸಗಣಿಯ ಜತೆಯಲ್ಲಿ ಈ ಸಾವಯವ ತ್ಯಾಜ್ಯಗಳನ್ನು ತಿಪ್ಪೆಗೆ ಹಾಕಿ.

* ಪ್ರತಿ‌ದಿನ ತಿಪ್ಪೆಗೆ ಕೊಟ್ಟಿಗೆಯ ಸಗಣಿ, ಗೊಂತಲ್ಲಿ‌ ಅಳಿದುಳಿದ ಮೇವು, ಕಸ ಕಡ್ಡಿ ಹಾಕಿದ ಮೇಲೆ, ಮೇಲ್ಭಾಗದಲ್ಲಿ ತೆಳುವಾಗಿ ಮಣ್ಣನ್ನು‌ ಹರಡಿ.

* ನಿಮ್ಮ ಅನುಕೂಲ ಹಾಗೂ ಉತ್ಪತ್ತಿಯಾಗುವ ಸಗಣಿಗೆ ತಕ್ಕಂತೆ ಅಗಲ ಉದ್ದವನ್ನು ನಿರ್ಧರಿಸಿ.

* ತಿಪ್ಪೆ ಗೊಬ್ಬರ ಉತ್ಕೃಷ್ಟವಾಗಬೇಕೆಂದರೆ ರಾಕ್ ಫಾಸ್ಪೇಟ್, ಬೇವು, ಕಡಲೆ, ಹರಳು, ಹೊಂಗೆ ಯಾವುದಾದರೂ ಹಿಂಡಿಯನ್ನು 15 ದಿನಗಳಿಗೊಮ್ಮೆ ತೆಳಯವಾಗಿ ಹರಡಿ‌.

* ಮನೆಯಲ್ಲಿ ಅಡುಗೆ ಮಾಡಿ ಉಳಿದ ಅನ್ನ, ಸಾರು ಹಾಗೂ ಗಾಜು, ಕ್ರಿಮಿನಾಶಕ‌ ಸೇರದಂಥ ಸಾವಯವ ತ್ಯಾಜ್ಯಗಳನ್ನು ತಿಪ್ಪೆಗೆ ಸೇರಿಸಿ.

ತಿಪ್ಪೆಯ ಗೊಬ್ಬರ ಉತ್ಕೃಷ್ಟವಾಗಬೇಕೆಂದರೆ ಹೀಗೆ ಮಾಡಿ:

* ಜೈವಿಕ‌ಗೊಬ್ಬರಗಳಾದ ಅಜೋಸ್ಪಿರಲ, ಅಜೋಲಾ, ನೀಲಿ ಹಸಿರು ಪಾಚಿ, ಸುಡೊಮಾನಸ್, ಆಸ್ಪರಾಲಿಜಸ್, ಇಂಥವುಗಳನ್ನೆಲ್ಲ ಸೇರಿಸಿ, ಒಂದು ಬಕೆಟ್ ನೀರಿಗೆ ಒಂದು ಕೆ.ಜಿ. ಬೆಲ್ಲ ಹಾಕಿ. 15 ದಿನಗಳಿಗೊಮ್ಮೆ ತಿಪ್ಪೆ ಮೇಲೆ ಚಿಮುಕಿಸಿ.

* ತಿಪ್ಪೆ ಮೂರ್ನಾಲ್ಕು ಅಡಿ ಎತ್ತರವಾಗುವ ವರೆಗೂ ನಿಮ್ಮ ಸಂಗ್ರಹದ ಕೆಲಸ ಮುಂದುವರಿಸಿ. ನಂತರ ಅದರ ಮೇಲೆ ಮೂರ್ನಾಕು ಇಂಚು ಕೆರೆ ಗೋಡು ಹರಡಿಸಿ.

* ಐದಾರು ತಿಂಗಳಲ್ಲಿ ಉತ್ಕೃಷ್ಟ ಸಾವಯವ ಗೊಬ್ಬರ‌ ಸಿದ್ಧವಾಗುತ್ತದೆ.

* ಚೆರ‍್ರಿ ಗಿಡಗಳನ್ನು ಹಾಕುವುದರಿಂದ ಅವು‌ ಬೇಗ ಬೆಳೆಯುತ್ತವೆ. ಕೆನಾಪಿ‌ ಬೇಗ ಹರಡುತ್ತದೆ. ನೆರಳು ಸೃಷ್ಟಿಯಾಗುತ್ತದೆ. ಜತೆಗೆ ಯಥೇಚ್ಚವಾಗಿ ಹಣ್ಣು ಕೊಡುತ್ತದೆ. ಹಣ್ಣನ್ನು ತಿನ್ನಲು ಹೆಚ್ಚು ಪಕ್ಷಿಗಳು ಬರುತ್ತವೆ. ಮರದ‌ ಮೇಲೆ ಕುಳಿತು ಹಣ್ಣು ತಿನ್ನುವ ಪಕ್ಷಿಗಳು ತಿಪ್ಪೆ ಮೇಲೆ ಹಿಕ್ಕೆ ಹಾಕುತ್ತವೆ. ಹಿಕ್ಕೆಗಳು ತಿಪ್ಪೆ ಗೊಬ್ಬರದಲ್ಲಿರುವ ಸೂಕ್ಷ್ಮಾಣು ಜೀವಿಗಳ ವೃದ್ಧಿಗೆ ಕಾರಣವಾಗುತ್ತವೆ. ಗೊಬ್ಬರದ ಉತ್ಕೃಷ್ಟತೆಯೂ‌ ಹೆಚ್ಚಾಗುತ್ತದೆ.

(ಮಾಹಿತಿ: ‘ಇದು ಸಹಜ ಕೃಷಿ’ ಪುಸ್ತಕದಿಂದ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.