ಬೀದರ್: ಬೀದರ, ಹುಮನಾಬಾದ್, ಬಸವಕಲ್ಯಾಣ, ಭಾಲ್ಕಿ ಮತ್ತು ಔರಾದ್ ತಾಲ್ಲೂಕುಗಳಲ್ಲಿ ಇರುವ ತೋಟಗಾರಿಕೆ ಇಲಾಖೆಯ ಫಾರ್ಮ್ ನರ್ಸರಿಗಳಲ್ಲಿ ತರಕಾರಿ ಸಸಿಗಳು ಮಾರಾಟಕ್ಕೆ ಲಭ್ಯ ಇವೆ.
ಮಾವು, ಲಿಂಬೆ, ಕರಿಬೇವು, ನುಗ್ಗೆ, ತೆಂಗಿನ ಉತ್ತಮ ತಳಿಯ ಸಸಿ,ಕಸಿ ಗಿಡಗಳನ್ನು ಮೊದಲಿನಿಂದಲೂ ತಯಾರಿಸಿ ರೈತರಿಗೆ ಇಲಾಖೆ ನಿಗದಿಪಡಿಸಿದ ದರಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಅದರಂತೆ ರೈತರ ಹೆಚ್ಚಿನ ಅನುಕೂಲಕ್ಕಾಗಿ ಪ್ರಸಕ್ತ ವರ್ಷದಿಂದ ಬೀದರ್ ಹಳೆಯ ಬಸ್ ನಿಲ್ದಾಣದ ಬಳಿಯ ಜಿಲ್ಲಾ ನರ್ಸರಿ, ಹುಮನಾಬಾದ್ ರಿಂಗ್ ರೋಡ್ ಪಕ್ಕದಲ್ಲಿರುವ ಸೀತಾಫಲ್ ಫಾರ್ಮ್, ಭಾಲ್ಕಿ ತಾಲ್ಲೂಕಿನ ದಾಡಗಿ ಫಾರ್ಮ್‌ನಲ್ಲಿ ಮತ್ತು ಬಸವಕಲ್ಯಾಣ ತಾಲ್ಲೂಕಿನ ಹೈದರಾಬಾದ್ -ಪುಣೆ ರಾಷ್ಟ್ರೀಯ ಹೆದ್ದಾರಿ ಹಾಗೂ ಹಳ್ಳಿ ಗ್ರಾಮದ ಪಕ್ಕದಲ್ಲಿರುವ ಹಳ್ಳಿ ಫಾರ್ಮ್‌ನಲ್ಲಿ ತರಕಾರಿ ಸಸಿಗಳನ್ನು ಮಾರಾಟಕ್ಕೆ ಇಡಲಾಗಿದೆ.
ಟೊಮೆಟೊ, ಮೆಣಸಿನಕಾಯಿ, ಬದನೆಯ ಉತ್ತಮ ತಳಿಯ ಸಸಿಗಳನ್ನು ರೈತರ ಬೇಡಿಕೆ ಆಧಾರದ ಮೇಲೆ ತಯಾರಿಸಿ ಇಲಾಖೆ ನಿಗದಿಪಡಿಸಿದ ದರಗಳಲ್ಲಿ ವಿತರಿಸಲಾಗುತ್ತದೆ. ಆಸಕ್ತ ರೈತರು ಒಂದು ತಿಂಗಳು ಮುಂಗಡವಾಗಿ ತಮಗೆ ಬೇಕಾದ ತರಕಾರಿ ಸಸಿಗಳ ಬಗ್ಗೆ ಸಂಬಂಧಿಸಿದ ತಾಲ್ಲೂಕಿನ ಫಾರ್ಮ್ ನರ್ಸರಿಗಳ ಮುಖ್ಯಸ್ಥರಿಗೆ ಖುದ್ದಾಗಿ ಭೇಟಿಯಾಗಿ ಸಸಿಗಳನ್ನು ತಯಾರಿಸಿಕೊಡಲು ತಿಳಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಬೀದರ್ ಜಿಲ್ಲಾ ನರ್ಸರಿಯ ತೋಟಗಾರಿಕೆ ಸಹಾಯಕರು: ಮಾರುತಿ, 8722107058, ಹುಮನಾಬಾದ್ ಸೀತಾಫಲ ಫಾರ್ಮ್ ತೋಟಗಾರಿಕೆ ಸಹಾಯಕಿ: ಸಾವಿತ್ರಿ, 9880498720, ಬಸವಕಲ್ಯಾಣ ತಾಲ್ಲೂಕಿನ ಹಳ್ಳಿ ಫಾರ್ಮ್ ತೋಟಗಾರಿಕೆ ಸಹಾಯಕ: ನಾಗಶೆಟ್ಟಿ, 9980739132, 9341882739, ಭಾಲ್ಕಿ ತಾಲ್ಲೂಕಿನ ಬಸವರಾಜ ಪಾಟೀಲ 9449626045 ಅವರನ್ನು ಸಂಪರ್ಕಿಸಬೇಕು ಎಂದು ಬೀದರ್ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಜಯಶ್ರಿ ಕಳ್ಳಿಹಾಳ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.