ADVERTISEMENT

ಕೂಲಿ..ನಲಿ: ನಾಟಿ ಮಾಡುವಾಗ ಕಂಡ ಚಿತ್ರಗಳ ಸೌಂದರ್ಯ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2023, 23:30 IST
Last Updated 5 ಆಗಸ್ಟ್ 2023, 23:30 IST
ಭತ್ತ ನಾಟಿ
ಭತ್ತ ನಾಟಿ   
ಭತ್ತ ನಾಟಿಗೆ ಹೊರಟೆವು ನಾವು 
ಭತ್ತ ನಾಟಿ
ಭತ್ತ ನಾಟಿ
ಭತ್ತ ನಾಟಿ
ಭತ್ತ ನಾಟಿ ಆಯ್ತು..ಇದು ಚಹಾ ಕುಡಿವ ಸಮಯ...
ಊಟವೂ ಗದ್ದೆಯ ಪಕ್ಕದಲ್ಲೇ...

ಗುಳೆ, ವಲಸೆ ಇಂತಹ ಪದಗಳನ್ನು ನಾವು ಕೇಳಿದ್ದೇವೆ. ಕೆಲವು ತಿಂಗಳ ಮಟ್ಟಿಗೆ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ತಾತ್ಕಾಲಿಕವಾಗಿ ವಲಸೆ ಹೋಗುವವರೂ ಇದ್ದಾರೆ; ಹಕ್ಕಿಗಳು ಋತುಮಾನಕ್ಕೆ ತಕ್ಕಹಾಗೆ ವಲಸೆ ಹೋಗಿ ಬರುತ್ತವಲ್ಲ ಹಾಗೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂಗಾರು ತಲೆಯಿಟ್ಟ ಕೆಲವು ದಿನಗಳವರೆಗೆ ಭತ್ತದ ನಾಟಿಯ ಸಿರಿಗಾಲ. ಇಲ್ಲಿಗೆ ಉತ್ತರ ಕರ್ನಾಟಕದ ಹಲವು ಊರುಗಳಿಂದ ಭತ್ತ ನಾಟಿ ಮಾಡಲೆಂದೇ ರೈತರು ಬರುತ್ತಾರೆ. ಎಕರೆಗೆ ಕಾರ್ಮಿಕರಿಗೆ ₹ 4,500 ಕೂಲಿ. ಅದರಲ್ಲಿ ಮಧ್ಯವರ್ತಿಗಳ ಕೈಸೇರುವುದು ₹ 1,000. ಏನಿಲ್ಲವೆಂದರೂ 3,000 ಎಕರೆಯಲ್ಲಿ ಭತ್ತದ ನಾಟಿ ಮಾಡಿ, ಎರಡು ತಿಂಗಳಲ್ಲಿ ಒಂದಿಷ್ಟು ದುಡಿದುಕೊಂಡು ಹೋಗುತ್ತಾರೆ. ಹೀಗೆ ಕೂಲಿಗೆ ಬರುವ ಎಷ್ಟೋ ಜನರಿಗೆ ಸ್ವಂತ ಜಮೀನಿದೆ. 2011ರಿಂದ ಶುರುವಾದ ಇಂತಹ ಕೂಲಿ ವಲಸೆ ಈ ವರ್ಷವೂ ಮುಂದುವರಿದಿದೆ. ನಾಟಿ ಮಾಡುವಾಗ ಕಂಡ ಚಿತ್ರಗಳು ಸೌಂದರ್ಯ ಕಾಣಿಸಿದರೂ ಬದುಕಿನ ಹುದುಗಿದ ಅರ್ಥವನ್ನೂ ದಾಟಿಸುವಂತಿವೆ. ಕುಂದಾಪುರ, ಕೋಟ, ಸಾಹೇಬ್ರ ಕಟ್ಟೆ, ಉಡುಪಿ, ಮಣಿಪುರ, ರಾಂಪುರ, ಕಾಪು, ಪಡುಬಿದ್ರಿ, ಕಟೀಲು, ಬಜ್ಪೆ, ಕಾವೂರು, ಕಾಸರಗೋಡು ಭಾಗಗಳಲ್ಲಿ ಈಗ ಇಂತಹ ಚಿತ್ರಗಳು ಕಣ್ಣಿಗೆ ಕಟ್ಟುತ್ತವೆ. ಚಿತ್ರಗಳು ಹಾಗೂ ಮಾಹಿತಿ: ಫಕ್ರುದ್ದೀನ್ ಎಚ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.