ADVERTISEMENT

ಕುಂಚದಲ್ಲಿ ಮೈದಳೆದ ಅಧ್ಯಾತ್ಮ

ಕಲಾಪ

​ಪ್ರಜಾವಾಣಿ ವಾರ್ತೆ
Published 14 ಜುಲೈ 2013, 19:59 IST
Last Updated 14 ಜುಲೈ 2013, 19:59 IST
ಕುಂಚದಲ್ಲಿ ಮೈದಳೆದ ಅಧ್ಯಾತ್ಮ
ಕುಂಚದಲ್ಲಿ ಮೈದಳೆದ ಅಧ್ಯಾತ್ಮ   

ಕಲಾವಿದರಿಗೆ ಈ ಜಗತ್ತೇ ಒಂದು ಕಲಾ ಲೋಕ. ಪ್ರತಿ ಕ್ಷಣವೂ ಬದಲಾಗುವ ನಿಸರ್ಗ ಅವರ ಕಲೆಗೆ ಪ್ರೇರಣೆ. ಕಲೆ ಕಲಾವಿದರ ಮನಸ್ಸಿನ ಕೈಗನ್ನಡಿ. ಕಲಾವಿದರು ತಮ್ಮ ಮನಸ್ಸಿನೊಳಗೆ ಮೂಡಿದ ಕಲ್ಪನೆಗಳು ಮತ್ತು ನಿಸರ್ಗವನ್ನು ತಮ್ಮಿಷ್ಟದ ಬಣ್ಣಗಳನ್ನು ಬಳಸಿ ತೈಲಚಿತ್ರಗಳ ಮೂಲಕ ಪ್ರದರ್ಶಿಸುವುದೆಂದರೆ ಅವರಿಗೆ ಅತ್ಯಂತ ಇಷ್ಟವಾದ ಸಂಗತಿ. ಖ್ಯಾತ ಕಲಾವಿದ ವಿನೋದ್ ಬನೈಕ್ ಅವರು ರಚಿಸಿರುವ `ಕಾಸ್ಮಿಕ್' ಸರಣಿಯೂ ಇದನ್ನೇ ಪ್ರತಿಬಿಂಬಿಸುತ್ತದೆ.

ಅಂದಹಾಗೆ, ಲ್ಯಾವೆಲ್ಲೆ ರಸ್ತೆಯಲ್ಲಿರುವ ಗ್ಯಾಲರಿ-ಜಿ ಕಲಾ ವೇದಿಕೆಯಲ್ಲಿ ಜುಲೈ 17ರಿಂದ ವಿನೋದ್ ಬನೈಕ್ ಅವರ ಏಕವ್ಯಕ್ತಿ ಚಿತ್ರಕಲಾಕೃತಿಗಳ ಪ್ರದರ್ಶನ `ಇನ್ಫಿನಿಟಿ-ಡಿವೈನಿಟಿ' ಆರಂಭಗೊಳ್ಳಲಿದೆ. 76 ವರ್ಷದ ಹಿರಿಯ, ಅನುಭವಿ ಕಲಾವಿದರಾದ ವಿನೋದ್ ಬನೈಕ್ ಅವರ ಅದ್ಭುತ ಕಲೆಗೆ ನಿಸರ್ಗವೇ ಸ್ಫೂರ್ತಿ. ಪ್ರಕೃತಿಯ ಪ್ರೇರಣೆಯೊಂದಿಗೆ ಅವರ ಕುಂಚದಲ್ಲಿ ಸುಂದರ ಕಲಾಕೃತಿಗಳು ಮೈದಳೆದಿವೆ.

ಈ ಎಲ್ಲ ತೈಲಚಿತ್ರಗಳು ಪ್ರದರ್ಶನದಲ್ಲಿ ವೀಕ್ಷಣೆಗೆ ಲಭ್ಯ. ಅದೂ ಅಲ್ಲದೇ, ಒಂದು ವಾರ ನಡೆಯಲಿರುವ ಪ್ರದರ್ಶನದ ಮೊದಲ ದಿನ, (ಜುಲೈ 17) ಬೆಳಿಗ್ಗೆ 11ಕ್ಕೆ `ಗ್ಯಾಲರಿ-ಜಿ'ಯಲ್ಲಿ ಕಲಾವಿದ ವಿನೋದ್ ಬನೈಕ್ ಅವರೊಂದಿಗೆ ಸಂವಾದ ಕಾರ್ಯಕ್ರಮವೂ ಇರುತ್ತದೆ.

ಸ್ಥಳ: ಗ್ಯಾಲರಿ-ಜಿ, ಲ್ಯಾವೆಲ್ಲೆ ರಸ್ತೆ, ಜುಲೈ 17-24ರವರೆಗೆ ಬೆಳಿಗ್ಗೆ 11ರಿಂದ ಸಂಜೆ 7.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.