ADVERTISEMENT

‘ಗ್ಯಾಂಬ್ಲಿಂಗ್’ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2020, 19:30 IST
Last Updated 26 ಫೆಬ್ರುವರಿ 2020, 19:30 IST
   

ಕಲಾವಿದ ನವೀನ್ ಕುಮಾರ್ ಬಿ., ಅವರ ‘ಗ್ಯಾಂಬ್ಲಿಂಗ್’ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಇದೇ 27ರಿಂದ ಆಯೋಜನೆಗೊಂಡಿದೆ. ಹಿರಿಯ ಕಲಾವಿದರಾದ ಚಂದ್ರನಾಥ್ ಆಚಾರ್ಯ ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಆರ್ಟ್‌ ಪ್ರಮೋಟರ್ ಸಾರಾ ಅರಕ್ಕಲ್‌,ಆನಂದಸಾಯಿ ಶಿವಲಿಂಗನ್ ಭಾಗವಹಿಸುವವರು.

ನವೀನ್ ಕುಮಾರ್ ಬಿ ಕಲಾಕೃತಿಯು ದಿನ ನಿತ್ಯದ ಸಾಮಾಜಿಕ ಹಾಗೂ ರಾಜಕೀಯ ವಿದ್ಯಮಾನಗಳತ್ತ ಸ್ವಯಂ ಅನುಭವದ ಪ್ರತಿಬಿಂಬವಾಗಿದೆ. ಅಸ್ಪಷ್ಟ ಹೇಳಿಕೆಗಳು ಬಣ್ಣ ಮತ್ತು ಕುಂಚಗಳ ಸಮಾಗಮದಿಂದ ಅಧಿಕೃತ ರೂಪವಾಗಿ ಕ್ಯಾನ್‌ವಾಸ್‌ ಮೇಲೆ ನಿರ್ಮಿಸಿದ್ದಾರೆ.

ಕಲಾಕೃತಿಯು ಮನುಷ್ಯನ ಅಸ್ತಿತ್ವ ಹಾಗೂ ಕಲಾವಿದನ ಮನಸ್ಸು ಮತ್ತು ಹೊರ ಜಗತ್ತಿನ ಘರ್ಷಣೆಗಳನ್ನು ಒಂದು ಚೌಕಟ್ಟಿನಲ್ಲಿ ಮೂಡಿಸಿದ್ದ ಕಲಾಕೃತಿಗಳು ದೃಶ್ಯಾತ್ಮಕ ಚರ್ಚೆಯಾಗಿವೆ.

ADVERTISEMENT

ಇವರ ಕಲಾಕೃತಿಗಳು ಪ್ರಸ್ತುತ ರಾಜಕೀಯದ ವಿಡಂಬನಾತ್ಮಕ ಚಿತ್ರಣವನ್ನು ವ್ಯಾಖ್ಯಾನಿಸುತ್ತಿವೆ.

ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ ಕುಮಾರ ಕೃಪ ರಸ್ತೆ, ಸಂಜೆ 5 ಗಂಟೆಗೆ ಮಾರ್ಚ್‌ 1ರವರೆಗೆ ಪ್ರದರ್ಶನವಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.