ADVERTISEMENT

ಕುರಿಯ ಪ್ರತಿಷ್ಠಾನದ ತಾಳಮದ್ದಳೆ ಪರ್ವ ಆರಂಭ

​ಪ್ರಜಾವಾಣಿ ವಾರ್ತೆ
Published 18 ಜೂನ್ 2022, 17:07 IST
Last Updated 18 ಜೂನ್ 2022, 17:07 IST
ಬೆಂಗಳೂರು: ಉಜಿರೆಯ ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನದ ರಜತ ಪರ್ವ ಪ್ರಯುಕ್ತ ಬೆಂಗಳೂರು ಮಹಾನಗರದಲ್ಲಿ ನಡೆಯುವ 9 ದಿನಗಳ ತಾಳಮದ್ದಳೆ ಪರ್ವಕ್ಕೆ ಶನಿವಾರ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಚಾಲನೆ ದೊರೆಯಿತು. ಧರ್ಮಸ್ಥಳ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಡಿ.ಸುರೇಂದ್ರ ಕುಮಾರ್, ಉದ್ಯಮಿ ಪಿ.ಟಿ.ಭಟ್, ಹಿರಿಯ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿ, ಸಂಘಟಕ ಉಜಿರೆ ಅಶೋಕ ಭಟ್, ಕಲಾವಿದರು ಉಪಸ್ಥಿತರಿದ್ದರು.

ಬೆಂಗಳೂರು: ಯಕ್ಷಗಾನ ರಂಗದ ದಿಗ್ಗಜ ಕುರಿಯ ವಿಠಲ ಶಾಸ್ತ್ರಿಗಳ ಸ್ಮರಣಾರ್ಥ ಸ್ಥಾಪನೆಗೊಂಡಿರುವ ಉಜಿರೆಯ ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ ಬೆಳ್ಳಿ ಹಬ್ಬ ಪ್ರಯುಕ್ತ ಬೆಂಗಳೂರಿನಲ್ಲಿ ನಡೆಯಲಿರುವ ತಾಳಮದ್ದಳೆ ಪರ್ವಕ್ಕೆ ಶನಿವಾರ ಚಾಲನೆ ದೊರೆಯಿತು.

9 ದಿನಗಳಲ್ಲಿ ವಿವಿಧೆಡೆ 12 ಪ್ರದರ್ಶನಗಳನ್ನು ಆಯೋಜಿಸಲಾಗಿದ್ದು, ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಶನಿವಾರ ಸಂಜೆ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಡಿ.ಸುರೇಂದ್ರ ಕುಮಾರ್ ಅವರು ದೀಪ ಪ್ರಜ್ವಲನೆ ಮಾಡಿ ಸರಣಿಗೆ ಚಾಲನೆ ನೀಡಿದರು.

ಮುಖ್ಯ ಅಭ್ಯಾಗತರಾಗಿ ಹಿರಿಯ ಕಲಾವಿದ ಡಾ.ಎಂ.ಪ್ರಭಾಕರ ಜೋಶಿ, ಬೆಂಗಳೂರಿನ ಉದ್ಯಮಿ ಪಿ.ಟಿ.ಭಟ್ ಉಪಸ್ಥಿತರಿದ್ದರು. ಸಂಘಟಕ, ಕಾರ್ಯಕ್ರಮದ ಸಂಚಾಲಕ ಉಜಿರೆ ಅಶೋಕ ಭಟ್ಟರು ಕಾರ್ಯಕ್ರಮ ನಿರೂಪಿಸಿದರು. ಹೆಸರಾಂತ ಕಲಾವಿದರು ಭಾಗವಹಿಸುವ ತಾಳಮದ್ದಳೆ ಪರ್ವಕ್ಕೆ ಬೆಂಗಳೂರಿನ ಕರ್ನಾಟಕ ಸಾಂಸ್ಕೃತಿಕ ಕಲಾ ಪ್ರತಿಷ್ಠಾನ ಸಹಕಾರ ನೀಡಿದೆ.

ADVERTISEMENT

ಸಭಾ ಕಾರ್ಯಕ್ರಮದ ಬಳಿಕ "ಪಾರ್ಥ ಸಾರಥಿ" ಯಕ್ಷಗಾನ ತಾಳಮದ್ದಳೆ ಜರುಗಿತು. ಹಿಮ್ಮೇಳದಲ್ಲಿ ಪುತ್ತಿಗೆ ರಘುರಾಮ ಹೊಳ್ಳ, ಶ್ರೀಶ ರಾವ್ ನಿಡ್ಲೆ, ಅಕ್ಷಯ ರಾವ್ ವಿಟ್ಲ ಹಾಗೂ ಮುಮ್ಮೇಳದಲ್ಲಿ ಡಾ.ಎಂ.ಪ್ರಭಾಕರ ಜೋಶಿ, ಉಜಿರೆ ಅಶೋಕ ಭಟ್, ರಾಧಾಕೃಷ್ಣ ಕಲ್ಚಾರ್ ವಿಟ್ಲ ಹಾಗೂ ಶಶಾಂಕ ಅರ್ನಾಡಿ ಅವರು ಕಾರ್ಯಕ್ರಮ ನಡೆಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.