ADVERTISEMENT

ಕುವೆಂಪು ಪದ ಸೃಷ್ಟಿ: ಕನ್ನೆಳಲು

​ಪ್ರಜಾವಾಣಿ ವಾರ್ತೆ
Published 14 ಜೂನ್ 2025, 21:10 IST
Last Updated 14 ಜೂನ್ 2025, 21:10 IST
<div class="paragraphs"><p>ಕುವೆಂಪು </p></div>

ಕುವೆಂಪು

   

ಕನ್ನೆಳಲು

‘ಕನ್ನೆ’ ಆದ ಚಿತ್ರಾಂಗದೆ ‘ಕನ್ನೆಲ’ ಅರ್ಥಾತ್ ಹೊಸಭೂಮಿ, ಫಲವತ್ತಾದ ಭೂಮಿ. ಅವಳ ಕನ್ಯಾ ಭಾವದ ಹರ್ಷ ಮಿನುಗನ್ನು ಕುವೆಂಪು ಪ್ರಕೃತಿಯ ‘ಕನ್ನೆಳಲ’ ನಲಿವಿನಲ್ಲಿ ಬಣ್ಣಿಸಿರುವ ರೀತಿ ಮನೋಜ್ಞವಾಗಿದೆ. ಅವರಿಂದ ರೂಪುಗೊಂಡ ಪದ ‘ಕನ್ನೆಳಲು’ ಕನ್ನೆ ಚಿತ್ರಾಂಗದೆಯಂತೆ ಹೊಸತಾದ ನೆಳಲು.

ADVERTISEMENT

‘ಕನ್ನೆಳಲ ಪಸಲೆಯಲಿ

ಹೊನ್ನೀರ ಮಳೆಹೊಯ್ಯಲಲ್ಲಲ್ಲಿ ನೀರುಗಳ್

ಸಣ್ಣಸಣ್ಣಗೆ ತಂಗಿ ಮಿನುಗುವಂತೆ.’

ಕಲಿಧನ್ವಿ

ಕಲಿಧನ್ವಿ (ನಾ). ಶೂರ ಬಿಲ್ಲುಗಾರ

ಮಾಯಾ ಜಿಂಕೆಯನ್ನು ಹಿಡಿದು ತರಲು ಹೊರಟ ಶೂರ ಧನುರ್ಧರ ರಾಮನನ್ನು ‘ಕಲಿಧನ್ವಿ’ ಪದದಿಂದ ಕುವೆಂಪು ಹೀಗೆ ಚಿತ್ರಿಸಿದ್ದಾರೆ:

‘ಸದೃಢ ಜಂಘೆಯ ನಡೆಯ ಕಲಿಧನ್ವಿ’ 

ರವಶವ

ರವಶವ (ನಾ). ಶಬ್ದದ ಹೆಣ

ಸೀತೆಯನ್ನು ರಾವಣನು ಅಪಹರಿಸಿಕೊಂಡು ಹೋದಮೇಲೆ ರಾಮಲಕ್ಷ್ಮಣರು ನಿರಾಶೆಯಿಂದ ಪಂಚವಟಿಯನ್ನು ಬಿಟ್ಟು ಹೋಗುವರು. ನಿಬಿಡ ಕಾಡಿನಲ್ಲಿ ನಡೆಯುವ ರಾಮನಿಗೆ ನೋವು, ಸಂಕಟ, ವ್ಯಸನದಿಂದಾಗಿ ಆ ನಿರ್ಜನ ಮೌನ ವಾತಾವರಣವು ನೇತ್ಯಾತ್ಮಕವಾಗಿ ಕಾಣುತ್ತದೆ. ಅದನ್ನು ಮನಃಶಾಸ್ತ್ರಜ್ಞನಂತೆ ಪರಿಭಾವಿಸಿ ಕುವೆಂಪು ‘ರಣಶವಂ’ ನುಡಿ ರೂಪಿಸಿ ಹೀಗೆ ಬಣ್ಣಿಸಿದ್ದಾರೆ:

‘ಇದು ನಿರ್ಜನತೆಯಲ್ತು:

ನೈರಾಶ್ಯದಾಕಳಿಕೆ! ಇದು ಮೌನಮಲ್ತಲ್ತು:

ರವಶವಂ! 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.