ADVERTISEMENT

ಲೋಹದಲ್ಲಿ ಅರಳಿದ ಮಿಶ್ರ ಕಾವ್ಯ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2019, 19:45 IST
Last Updated 8 ಅಕ್ಟೋಬರ್ 2019, 19:45 IST
ಸುನಿಲ್‌ ಮಿಶ್ರಾ
ಸುನಿಲ್‌ ಮಿಶ್ರಾ   

ಕಲಾವಿದ ಸುನಿಲ್‌ ಮಿಶ್ರಾ ರಚಿಸಿದ ವಿನೂತನ ಕಲಾಕೃತಿಗಳ ಪ್ರದರ್ಶನ ಕರ್ನಾಟಕ ಚಿತ್ರಕಲಾ ಪರಿಷತ್‌ ಗ್ಯಾಲರಿ 1ರಲ್ಲಿ ಆರಂಭವಾಗಿದೆ. ಅ.10ರವರೆಗೆ ಬೆಳಿಗ್ಗೆ 10.30ರಿಂದ ಸಂಜೆ 6ಗಂಟೆವರೆಗೆ ಪ್ರದರ್ಶನ ಸಾರ್ವಜನಿಕರ ವೀಕ್ಷಣೆಗೆ ತೆರೆದಿರುತ್ತದೆ.

ಲೋಹ ಮತ್ತು ಮರದಲ್ಲಿ ಅರಳಿದ ಸುನಿಲ್‌ ಮಿಶ್ರಾ ಅವರ ವಿನೂತನ ಕಲಾಕೃತಿಗಳಲ್ಲಿ ಪುರಾತನ ಕಲೆಗಳ ಛಾಯೆ ಕಾಣುತ್ತದೆ.ಚಮಚೆಯಲ್ಲಿ ಒಂದರ ಮೇಲೊಂದು ಅಳವಡಿಸಿದ ಮನುಷ್ಯನ ಆಕೃತಿಯ ಪುಟ್ಟ, ಪುಟ್ಟ ಲೋಹದ ಶಿಲ್ಪಗಳು ಮತ್ತು ಒಣಗಿದ ಎಲೆಯ ತುದಿಗೆ ಇಳಿಬಿದ್ದ ಲೋಹ ಶಿಲ್ಪಗಳು ಕಲಾವಿದನ ತಾಳ್ಮೆ ಮತ್ತು ಕುಸುರಿ ಕೆಲಸದ ಪ್ರತೀಕವಾಗಿವೆ.ಲೋಹ ಮತ್ತು ಮರದಲ್ಲಿ ಕೆತ್ತಿದ ಮನುಷ್ಯ ಆಕೃತಿಯ ಮೂರು ಆಯಾಯಮದ ಪುಟ್ಟ ಶಿಲ್ಪಗಳ ಮೂಲಕ ಮನುಷ್ಯ ಸಹಜ ಸ್ವಭಾವಗಳನ್ನು ಹಿಡಿದಿಟ್ಟಿದ್ದಾರೆ.ವಿಮರ್ಶಕರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT