ADVERTISEMENT

ಆಪೇಶಿ ರಾಜ

ಗಿರೀಶ ಚಂದ್ರಕಾಂತ ಜಕಾಪುರೆ
Published 7 ನವೆಂಬರ್ 2015, 19:32 IST
Last Updated 7 ನವೆಂಬರ್ 2015, 19:32 IST

ಟ್ರುಬ್ಯಾಂ ಟ್ರುಬ್ಯಾಂ ಟ್ರುಬ್ಯಾಂ
ದರ್ವೇಶಿ ಊರಿನ
ಆಪೇಶಿ  ರಾಜನ ಹತ್ರ
ಇತ್ತು ಒಂದು ಎಮ್ಮೆ ...!
ಒಂದು ಬಣಿವೆ ಹುಲ್ಲು
ತಿನ್ನುತ್ತಿತ್ತು ಒಮ್ಮೆ ...!
ಅದು ಕೊಡ್ತಿರಲಿಲ್ಲ ಹಾಲು
ಕೊಟ್ಟಿಗೆ ತುಂಬ ಸೆಗಣಿ ಸಾಲು...!
ಟ್ರುಬ್ಯಾಂ ಟ್ರುಬ್ಯಾಂ ಟ್ರುಬ್ಯಾಂ

ಖರ್ ಖರ್ ಖರ್ ಖರ್
ದರ್ವೇಶಿ ಊರಿನ
ಆಪೇಶಿ ರಾಜನ ಹತ್ರ
ಇತ್ತು ಒಂದು ಖುರ್ಚಿ...!
ಕಾಲು ಇಲ್ಲ... ಕೈಯೂ ಇಲ್ಲ..
ಬರೀ ಫಳಿ... ಫರ್ಶಿ...!
ಆದರೂ ರಾಜನ ಡೌಲು
ಕಿರಿಟಕ್ಕೊಂದು ನವಿಲು...!
ಖರ್ ಖರ್ ಖರ್ ಖರ್

ಬೌ ಬೌ ಬೌ ಬೌ
ದರ್ವೇಶಿ ಊರಿನ
ಆಪೇಶಿ ರಾಜನ ಹತ್ರ
ಇತ್ತು ಒಂದು ನಾಯಿ...!
ವಂಕ ಅದರ ಬಾಯಿ...!
ಕಳ್ಳರು ಬಂದ್ರೂ ಬೊಗಳೊದಿಲ್ಲ
ಕದ್ಕೊಂಡು ಹೋದ್ರೂ ಕಚ್ಚೋದಿಲ್ಲ...!
ರಾಜನ ಬೆನ್ನು ಬಿಡೋದಿಲ್ಲ...!
ಬೌ ಬೌ ಬೌ ಬೌ

ADVERTISEMENT

ಖಡರ್ ಖಡರ್ ಖಡರ್ ಖಡರ್
ದರ್ವೇಶಿ ಊರಿನ
ಆಪೇಶಿ ರಾಜನ ಹತ್ರ
ಇತ್ತು ಒಂದು ಖಡ್ಗ ...!
ಅದ್ಕೂ ಹತ್ತಿತ್ತು ಜಂಗ...!
ಅಯ್ಯೋ ಎಂಥಾ ಮೊಂಡು ?
ಬಾಳೆಗೊನೆ ಕತ್ತರಿಸೋದಿಲ್ಲ...!
ಇಲಿಯೂ ಅದಕ್ಕೆ ಹೆದರೋದಿಲ್ಲ...!
ಖಡರ್ ಖಡರ್ ಖಡರ್ ಖಡರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.