ADVERTISEMENT

ಉಪ್ಪಿಗಿಂತ ರುಚಿ ಬೇರೆ ಇಲ್ಲ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2012, 19:30 IST
Last Updated 4 ಆಗಸ್ಟ್ 2012, 19:30 IST

ಉಪ್ಪು ಹೇಗೆ ದೊರೆಯುತ್ತದೆ?
ಕಡಲನೀರು ಆವಿಯಾದರೆ ಉಪ್ಪು ದೊರೆಯುತ್ತದೆ. ಗಣಿಗಾರಿಕೆಯಿಂದ ಕೂಡ ಉಪ್ಪನ್ನು ಪಡೆಯುವುದುಂಟು. ಆಫ್ರಿಕಾದ ಮಸಾಯ್ ಬುಡಕಟ್ಟು ಜನಾಂಗದವರು ಹಸುವಿನ ರಕ್ತದಿಂದ ಒಮ್ಮೆ ಉಪ್ಪಿನಂಶವನ್ನು ಹೊರತೆಗೆದಿದ್ದರು.

ಉಪ್ಪಿಲ್ಲದೆ ಬದುಕಲು ಸಾಧ್ಯವೆ?
ಇಲ್ಲ. ಅದು ಬದುಕಿಗೆ ತುಂಬಾ ಮುಖ್ಯ.

ಅದು ಅಪಾಯಕಾರಿಯಾಗಬಲ್ಲದೆ?
ರಕ್ತದಲ್ಲಿನ ಉಪ್ಪಿನಂಶದ ಪ್ರಮಾಣ ಹೆಚ್ಚಾದರೆ ಅದು ರಕ್ತದೊತ್ತಡ ಏರಲು ಕಾರಣವಾಗುತ್ತದೆ. ಅದರಿಂದ ಹೃದಯಸಂಬಂಧಿ ಕಾಯಿಲೆಗಳು ಬರುತ್ತವೆ.

ADVERTISEMENT

ಅಡುಗೆಯಲ್ಲದೆ ಉಪ್ಪಿನ ಬಳಕೆ ಇನ್ನ್ಲ್ಲೆಲಿ?
ರಾಸಾಯನಿಕ ಉದ್ಯಮ ಕ್ಷೇತ್ರದಲ್ಲಿ ಸೋಡಾ ಆ್ಯಷ್ ತಯಾರಿಸಲು ಉಪ್ಪನ್ನು ಬಳಸುತ್ತಾರೆ. ಗಾಜು ಹಾಗೂ ಸಾಬೂನಿನ ತಯಾರಿಕೆಯಲ್ಲಿ ಸೋಡಾ ಆ್ಯಷ್ ಬೇಕಾಗುತ್ತದೆ.

ಉಪ್ಪನ್ನು ಒಳಗೊಂಡ ಕ್ಲೋರಿನ್ ಹಾಗೂ ಅದರ ಸಂಯುಕ್ತ ರಾಸಾಯನಿಕಗಳನ್ನು ಪ್ಲಾಸ್ಟಿಕ್, ಕಾಗದ, ಸ್ವಚ್ಛಗೊಳಿಸಲು ಬಳಸುವ ದ್ರಾವಣಗಳನ್ನು ತಯಾರಿಸಲು ಉಪಯೋಗಿಸುತ್ತಾರೆ. ಆಹಾರವನ್ನು ಕೆಡದಂತೆ ಸಂರಕ್ಷಿಸಲೂ ಈ ರಾಸಾಯನಿಕ ಬಳಸುತ್ತಾರೆ.

ಹಿಮದ ಮಳೆಯಾಗುವ ದೇಶಗಳಲ್ಲಿ ಉಪ್ಪನ್ನು ಸುರಿದ ಹಿಮದ ಮೇಲೆ ಹಾಕುತ್ತಾರೆ. ಹಿಮದ ಕರಗುವ ಬಿಂದುವನ್ನು ಕಡಿಮೆ ಮಾಡುವ ಗುಣ ಉಪ್ಪಿಗಿರುವುದರಿಂದ ಇದು ಆ ದೇಶಗಳಲ್ಲಿ ಅನಿವಾರ್ಯ. ಹಾಗೆ ನೋಡಿದರೆ ಅಡುಗೆ ಮತ್ತು ಆಹಾರೋತ್ಪನ್ನಗಳ ಉದ್ಯಮದಲ್ಲಿ ಬಳಕೆಯಾಗುವ ಉಪ್ಪಿನ ಪ್ರಮಾಣ ತುಂಬಾ ಕಡಿಮೆ.

ವಿಶ್ವದಲ್ಲೇ ಅತಿ ಹೆಚ್ಚು ಉಪ್ಪು ಉತ್ಪಾದಿಸುವ ದೇಶ ಯಾವುದು?
ಅಮೆರಿಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.