ADVERTISEMENT

ಒಪೊಸಮ್

​ಪ್ರಜಾವಾಣಿ ವಾರ್ತೆ
Published 25 ಜೂನ್ 2011, 19:30 IST
Last Updated 25 ಜೂನ್ 2011, 19:30 IST
ಒಪೊಸಮ್
ಒಪೊಸಮ್   

ಹೊಟ್ಟೆಚೀಲದ ಪ್ರಾಣಿಗಳು ಎಂದರೆ ನೆನಪಾಗುವ ದೇಶ ಆಸ್ಟ್ರೇಲಿಯಾ. ಸಾಮಾನ್ಯವಾಗಿ ಅಲ್ಲಿಯೇ ಹೊಟ್ಟೆಚೀಲದ ಪ್ರಾಣಿಗಳು ಕಂಡುಬರುವುದು. ಆದರೆ ಆಸ್ಟ್ರೇಲಿಯಾ ಹೊರತುಪಡಿಸಿ ಅಮೆರಿಕಾದಲ್ಲಿ ಕಾಣಸಿಗುವ ಒಂದೇ ಒಂದು ಹೊಟ್ಟೆಚೀಲದ ಪ್ರಾಣಿ ಇದೆ. ಅದೇ ಒಪೊಸಮ್. ಅವು ತಮ್ಮ ವಿಶಿಷ್ಟ ನಟನೆಯಿಂದ ಖ್ಯಾತವಾಗಿವೆ.

ನಾಯಿ, ತೋಳ, ನರಿಗಳು ಎದುರು ಬಂದಾಗ ಒಪೊಸಮ್‌ಗಳು ನೆಲದ ಮೇಲೆ ಬಿದ್ದು ಉಸಿರು ಬಿಗಿ ಹಿಡಿದುಕೊಂಡು ತಮ್ಮ ಕಣ್ಣುಗಳನ್ನು ಮಚ್ಚಿಕೊಳ್ಳುತ್ತವೆ ಅಥವಾ ಕಣ್ಣನ್ನು ಅಗಲವಾಗಿ ಬಿಟ್ಟು ನೆಟ್ಟ ದೃಷ್ಟಿಯಲ್ಲೇ ಇರುತ್ತವೆ. ಅಷ್ಟು ಮಾತ್ರವಲ್ಲ, ತಮ್ಮ ನಾಲಗೆಯನ್ನು ಹೊರಕ್ಕೆ ಚಾಚಿ ಕತ್ತನ್ನು ಕುಸಿದಂತೆ ಮಾಡಿ ಮಲಗುತ್ತವೆ. ಶತ್ರುಗಳು ಅದರ ನಟನೆಯನ್ನು ನಿಜವೆಂದು ತಿಳಿದು ಹೊರಟುಹೋಗುತ್ತವೆ.

ಕೀಟ, ಕಪ್ಪೆ, ಹಕ್ಕಿ, ಹಾವು, ಎರೆಹುಳುಗಳನ್ನು ತಿನ್ನುವ ಒಪೊಸಮ್‌ಗಳ ಬಾಲವನ್ನು ತಿಂದರೆ ಬಂಜೆತನ ನಿವಾರಣೆಯಾಗುತ್ತದೆ ಎಂದು ಕೆಲವು ಪ್ರದೇಶಗಳಲ್ಲಿ ನಂಬಲಾಗಿದೆ. ಅದರ ಕೊಬ್ಬನ್ನು ಕರಗಿಸಿ ಕೆಲವು ಕಾಯಿಲೆಗೆ ಔಷಧ ತಯಾರಿಸಲಾಗುತ್ತದೆ. ಇದಷ್ಟೇ ಅಲ್ಲ, ಅದರ ಮೃದು ತುಪ್ಪಳದ ವ್ಯಾಪಾರ ಲಾಭದಾಯಕ ಎನಿಸಿದೆ. ಇವೆಲ್ಲಾ ಅದಕ್ಕೆ ಕುತ್ತು ತಂದಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.