ಎಲ್ಲರೂ ಕೂಡಿ ಬಂದಾಯ್ತು
ಕನ್ನಡ ನಾಡಿ ಒಂದಾಯ್ತು
ಚೋ ಹೋ ಚೋ... ಚೋ ಹೋ ಚೋ
ಜಂಗಂ ಜಕ್ಕಂ ಚೋ ಹೋ ಚೋ
ಕುವೆಂಪು ಬೇಂದ್ರೆ ಕಾರಂತ
ಕನ್ನಡವೆಂದೂ ಜೀವಂತ
ಚೋ ಹೋ ಚೋ... ಚೋ ಹೋ ಚೋ
ಮುದ್ದೆ ಗಂಜಿ ಸೀಬೆಲ್ಲ
ಕನ್ನಡ ಎಲ್ಲೂ ಹೋಗೋಲ್ಲ
ಚೋ ಹೋ ಚೋ... ಚೋ ಹೋ ಚೋ
ಪೀರ್ ಗುಬ್ಬಿ ಬಾಳಪ್ಪ
ಕನ್ನಡದಲ್ಲೇ ಆಳ್ರಪ್ಪ
ಚೋ ಹೋ ಚೋ... ಚೋ ಹೋ ಚೋ
ಯಕ್ಷಗಾನಾ ದೊಡ್ಡಾಟ
ಕನ್ನಡ ನೀಡಲಿ ಒಂದೂಟ
ಚೋ ಹೋ ಚೋ... ಚೋ ಹೋ ಚೋ
ಗಂಗೂಬಾಯೀ ಭೀಮ್‌ಸೇನ
ಕನ್ನಡ ಶಕ್ತಿ ತೋರ್ಸೋಣ
ಚೋ ಹೋ ಚೋ... ಚೋ ಹೋ ಚೋ
ಮುತ್ತುರಾಜನ್ ಈ ನಾಡು
ಕನ್ನಡ ಶಾಲೆಯ ಕಾಪಾಡು
ಚೋ ಹೋ ಚೋ... ಚೋ ಹೋ ಚೋ
ಜಾತ್ರೇಲ್ ಎಲ್ರೂ ನಮ್ಮೋರು
ಕನ್ನಡ ತಾಯೇ ನಮ್‌ದೇವ್ರ
ಚೋ ಹೋ ಚೋ... ಚೋ ಹೋ ಚೋ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.