ADVERTISEMENT

ಚಂದ ಪದ್ಯ: ಶಿಶು ಪ್ರಾಸಗಳು

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2011, 19:30 IST
Last Updated 3 ಸೆಪ್ಟೆಂಬರ್ 2011, 19:30 IST

ನಮ್ಮ ಊರ ಹೊಳೆ
ಬರಲು ಶುದ್ಧ ಮಳೆ
ಆಯ್ತು ಹೇಗೆ ಕೊಳೆ
ಮುದ್ದು ಮಗು ಹೇಳೆ!

ನಮ್ಮ ಪುಟ್ಟ ಕಂದ
ನಕ್ಕು ಬಿಟ್ಟರಂದ
ಒಂದು ಹಲ್ಲು ಇಲ್ಲ
ಬಾಯೆ ಚಂದವಲ್ಲ!

ಅಮ್ಮಾ ಒಂದು ಕತೆ ಹೇಳೆ
ನಿದ್ದೆಯ ಮಾಡುವೆ ನಾನು
ಚಿಕ್ಕೆಯ ಚಂದ್ರನ ತಮ್ಮನ ತಂಗಿಯ
ರಕ್ಕಸ ರಾಜನ ರಾಜಕುಮಾರಿಯ
ತಲೆ ತುಂಬಿರುವ ಹೇನು!

ADVERTISEMENT

ಬಾಳೆಯ ಗಿಡದಲಿ
ಹಕ್ಕಿಯು ಕುಳಿತು
ಕರೆಯಿತು ಯಾರನ್ನು?
ಅಣ್ಣನ ತಮ್ಮನ ಗಂಗೆಯ ತಂಗಿಯ
ನನ್ನನು ನಿನ್ನನ್ನು!

ನಮ್ಮ ಊರ ತಿಮ್ಮ
ಕೋಳಿ ಮೊಟ್ಟೆ ತಂದ
ಒಡೆಯದೇನೆ ಅದನ
ಬಾಯಲಿಟ್ಟು ತಿಂದ!

ನಮ್ಮ ಊರ ಸಿದ್ದ
ಕೋಳಿ ಅಂಕ ಗೆದ್ದ
ಪೊಲೀಸಿನವರು ಬರಲು
ಕೆಸರು ಗದ್ದೆಯಲ್ಲಿ
ಸಿದ್ದ ಓಡಿ ಬಿದ್ದ

ಮೈಯ ತುಂಬ ರಾಡಿ
ಮಕ್ಕಳೆಲ್ಲ ಹಾಡಿ
`ಕೋಳಿ ಸಿದ್ದ ಬಂದ
ಕೆಸರು ಗದ್ದೆ ಚಂದ~
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.