ADVERTISEMENT

‘ದಿ ಥಿಂಕರ್‌’ ಪ್ರತಿಮೆ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2019, 20:09 IST
Last Updated 16 ಮಾರ್ಚ್ 2019, 20:09 IST
Man
Man   

‘ದಿ ಥಿಂಕರ್‌’ ಎಂಬುದು ಫ್ರಾನ್ಸ್‌ನ ಕಲಾವಿದ ಆಗಸ್ಟ್‌ ರೋಡಿನ್‌ ಕಂಚಿನಿಂದ ನಿರ್ಮಿಸಿರುವ ಒಂದು ಕಲಾಕೃತಿ. ಕೆಲವು ವಿಶೇಷ ಕಾರಣಗಳಿಗಾಗಿ ಈ ಕಲಾಕೃತಿಯು ಜಗದ್ವಿಖ್ಯಾತವಾಗಿದೆ.

1880ರಲ್ಲಿ ಈ ಕಲಾಕೃತಿಯ ನಿರ್ಮಾಣ ಆರಂಭವಾಗಿತ್ತು. ಆ ಕಾಲದಲ್ಲಿ ನಿರ್ಮಾಣವಾಗುತ್ತಿದ್ದ ಬೇರೊಂದು ಬೃಹತ್‌ ಪ್ರತಿಮೆಯ ಮೇಲೆ ಇಡುವ ಸಲುವಾಗಿ ಈ ಮೂರ್ತಿ ನಿರ್ಮಾಣ ಕಾರ್ಯವನ್ನು ಆರಂಭಿಸಲಾಗಿತ್ತು. ಮೂಲ ಯೋಜನೆಯ ಪ್ರಕಾರ ಕವಿ ಡಾಂಟೆ ಅವರು ಮುಂದಕ್ಕೆ ಬಾಗಿ ನರಕವನ್ನು ನೋಡುತ್ತಿರುವ ಆಕಾರದಲ್ಲಿ 70 ಸೆಂ.ಮೀ. ಎತ್ತರದ ಮೂರ್ತಿ ನಿರ್ಮಾಣ ಆಗಬೇಕಾಗಿತ್ತು. ಆದರೆ ಇದರ ನಿರ್ಮಾಣ ಆರಂಭಿಸಿದ ಕಲಾವಿದ ರೋಡಿನ್‌, 1888ರಲ್ಲಿ ಸಣ್ಣ ಮೂರ್ತಿ ನಿರ್ಮಿಸುವ ಬದಲು ದೊಡ್ಡದಾದ ಪ್ರತಿಮೆ ನಿರ್ಮಿಸಿ ಅದನ್ನು ಪ್ರತ್ಯೇಕವಾಗಿ ಸ್ಥಾಪಿಸಲು ತೀರ್ಮಾನಿಸಿದ. ಅದರಂತೆ,ಚಿಂತೆಯಲ್ಲಿ ಮುಳುಗಿರುವ ನಗ್ನ ವ್ಯಕ್ತಿಯ 1.89 ಮೀಟರ್‌ ಎತ್ತರದ ಪ್ರತಿಮೆಯನ್ನು ನಿರ್ಮಾಣ ಮಾಡಿ 1904ರಲ್ಲಿ ಅದನ್ನು ಪ್ರದರ್ಶನಕ್ಕಿಟ್ಟ. ಈ ಪ್ರತಿಮೆಯು ದಿನಬೆಳಗಾಗುವುದರಲ್ಲಿ ರೋಡಿನ್‌ ಖ್ಯಾತಿಯನ್ನು ಆಕಾಶದೆತ್ತರಕ್ಕೆ ಏರಿತು. ಬಲಿಷ್ಠವಾದ ಅಂಗ ಸೌಷ್ಠವ ಇರುವ ಈ ಪ್ರತಿಮೆಯು ಜಗತ್ತಿನಲ್ಲೇ ಅತಿ ಹೆಚ್ಚು ಜನರ ಮೆಚ್ಚುಗೆ ಗಳಿಸಿದ ಕಲಾಕೃತಿ ಎಂಬ ಖ್ಯಾತಿಗೆ ಪಾತ್ರವಾಯಿತು.

ಇದೇ ಕಲಾಕೃತಿಯ 28 ಪ್ರತಿಗಳನ್ನು ನಿರ್ಮಿಸಲಾಗಿದ್ದು, ಅವುಗಳನ್ನು ಫ್ರಾನ್ಸ್‌ನ ವಿವಿಧ ಮ್ಯೂಸಿಯಂಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸ್ಥಾಪಿಸಲಾಗಿದೆ. ರೋಡಿನ್‌ ನೆಲೆಸಿದ್ದ ಪ್ಯಾರಿಸ್‌ನ ಮನೆಯ ಮುಂದಿನ ಉದ್ಯಾನದಲ್ಲೂ ಒಂದು ಪ್ರತಿಯನ್ನು ಇಡಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.