ADVERTISEMENT

ನೀರಿನ ಶ್ರೀವ್

​ಪ್ರಜಾವಾಣಿ ವಾರ್ತೆ
Published 11 ಜೂನ್ 2011, 19:30 IST
Last Updated 11 ಜೂನ್ 2011, 19:30 IST
ನೀರಿನ ಶ್ರೀವ್
ನೀರಿನ ಶ್ರೀವ್   

ಶ್ರೀವ್ ಪ್ರಬೇಧಗಳಲ್ಲಿ ನೀರಿನಲ್ಲಿ ವಾಸಿಸುವ ಶ್ರೀವ್ ಅತ್ಯಂತ ದೊಡ್ಡ ಪ್ರಾಣಿ. ಹೆಗ್ಗಣಗಳ ಜಾತಿಗೆ ಸೇರಿದ ಈ ಶ್ರೀವ್‌ಗೆ ಉದ್ದ ಮೂಗಿನ ಇಲಿ ಎಂದು ಕೂಡ ಹೆಸರಿದೆ. ಭಾರತ, ಮಲಯಾ, ಸುಮಾತ್ರಾ, ಜಪಾನ್, ಚೈನಾಗಳಲ್ಲಿ ವಿವಿಧ ರೀತಿಯ ನೀರಿನ ಶ್ರೀವ್‌ಗಳು ಕಂಡುಬರುತ್ತವೆ.

ಅವುಗಳಿಗೆ ಕೊಂಚ ಮಾತ್ರದ ವ್ಯತ್ಯಾಸಗಳೂ ಇವೆ.ನೀರಿನಲ್ಲಿ ವಾಸಿಸುವ ಈ ಶ್ರೀವ್‌ಗಳ ಜೊಲ್ಲಿನಲ್ಲಿ ಸ್ತಂಬ್ಧಗೊಳಿಸಿ ಕೊಲ್ಲುವ ಒಂದು ರೀತಿಯ ವಿಷ ಇರುತ್ತದೆ. ತನ್ನ ಆಹಾರಗಳಾದ ಮೀನು ಮತ್ತು ಕಪ್ಪೆಗಳನ್ನು ಶ್ರೀವ್‌ಗಳು ಹಿಡಿದ ತಕ್ಷಣ ಅವು ಸ್ತಂಬ್ಧಗೊಂಡು ಸಾಯುತ್ತವೆ.

ಒಂದು ವಯಸ್ಕ ಶ್ರೀವ್‌ನಲ್ಲಿ 200 ಪ್ರಾಣಿಗಳನ್ನು ಕೊಲ್ಲುವಷ್ಟು ವಿಷ ತುಂಬಿರುತ್ತದೆ. ಅದು ಮೂರು ಗಂಟೆಗಳಲ್ಲಿಯೇ ತಾನು ತಿಂದ ಸಂಪೂರ್ಣ ಆಹಾರವನ್ನು ಜೀರ್ಣಿಸಿಕೊಳ್ಳುವುದರಿಂದ ಬೆಳಗಿನಿಂದ ಸಂಜೆವರೆಗೆ ತಿನ್ನುತ್ತಲೇ ಇರುತ್ತದೆ.

ನ್ಯೂಗಿನಿ, ಆಸ್ಟೇಲಿಯಾ ಮತ್ತು ನ್ಯೂಜಿಲೆಂಡ್ ಹೊರತುಪಡಿಸಿ ಉಳಿದೆಲ್ಲಾ ದೇಶಗಳಲ್ಲಿ ಬಗೆಬಗೆಯ ಶ್ರೀವ್‌ಗಳು ಕಾಣಸಿಗುತ್ತವೆ. ಸಮುದ್ರಕ್ಕೆ ಸೇರುತ್ತಿರುವ ರಾಸಾಯನಿಕಗಳಿಂದ ಈ ಶ್ರೀವ್‌ಗಳ ಸಂಖ್ಯೆ ಗಣನೀಯವಾಗಿ ಕುಸಿಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.