ADVERTISEMENT

ನೀಲಿ ನರಿ

Published 3 ಆಗಸ್ಟ್ 2013, 19:59 IST
Last Updated 3 ಆಗಸ್ಟ್ 2013, 19:59 IST
ನೀಲಿ ನರಿ
ನೀಲಿ ನರಿ   

ನಮ್ಮ ತಾತಾ ಹೇಳಿರೋ ಕತೇನ ನಾನು ನಿಮಗೆ ಹೇಳ್ತೀನಿ.
ಒಂದು ದಿನ ನರಿಗೆ ತುಂಬಾ ಹಸಿವಾಗಿರುತ್ತೆ. ಅದು ಕಾಡಿನಲ್ಲಿ ಆಹಾರ ಹುಡುಕುತ್ತೆ, ಆದರೆ ಏನೂ ಸಿಗಲ್ಲ. ಹಾಗೇ ಹೋಕ್ತಾ ಹೋಕ್ತಾ ಒಂದು ಕೋಳಿ ಸಿಗುತ್ತೆ. ಅದು ಯಾರೋ ಸಾಕಿರೋ ಕೋಳಿ, ನರಿ ಅದನ್ನು ತಿನ್ನಕ್ಕೆ ಬರುತ್ತೆ, ಅದು ಕೋ ಕೋ ಎಂದು ಕೂಗುತ್ತೆ. ಆಗ ಅದನ್ನ ಸಾಕಿದೋರು ನರೀನ ಹೊಡಿಯಕ್ಕೆ ಬರ್ತಾರೆ, ನರಿ ಓಡಿ ಓಡಿ ತಪ್ಪಿಸಿಕೊಂಡು ನೀಲಿ ಬಣ್ಣ ಇರೋ ಡ್ರಮ್ ಒಳಗೆ ಬೀಳುತ್ತೆ.

ಆಮೇಲೆ ಅಲ್ಲಿಂದ ಎದ್ದು ಬರುತ್ತೆ ನರಿ ಮೈ ನೀಲಿ ಆಗಿರುತ್ತೆ. ಅದು ಆಗ ಒಂದು ಉಪಾಯ ಮಾಡುತ್ತೆ, ಕಾಡಿಗೆ ಮತ್ತೆ ಬಂದು ಮಂಗನನ್ನು ಕರೆದು “ನಾನು ದೇವಲೋಕದಿಂದ ಬಂದಿದ್ದೀನಿ. ದೇವರು ಈ ಕಾಡಿಗೆ ನನ್ನನ್ನೇ ರಾಜ ಎಂದು ಹೇಳಿದ್ದಾನೆ. ಈಗ ನಾನೇ ರಾಜ” ಎನ್ನುತ್ತೆ. ಮಂಗ ಈ ಮಾತನ್ನು ಸಿಂಹಕ್ಕೆ ಹೇಳುತ್ತೆ. ಸಿಂಹ ಒಪ್ಪಿಕೊಳ್ಳುತ್ತೆ. ಹೀಗೆ ನರಿ ರಾಜ ಆಗಿರುತ್ತೆ.

ಒಂದು ದಿನ ಚಳಿಗಾಲದಲ್ಲಿ ಬೇರೆ ನರಿಗಳು ಊಳಿಡುತ್ತವೆ. ಅದನ್ನ ಕೇಳಿ ರಾಜ ನರೀನೂ ಕೂಗುತ್ತೆ. ಆಗ ಇದರ ಮೋಸ ಸಿಂಹಕ್ಕೆ ತಿಳಿಯುತ್ತೆ. ಸಿಂಹ ನರಿಯನ್ನು ಸಾಯಿಸಿ ಮತ್ತೆ ತಾನೇ ರಾಜನಾಗುತ್ತಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.