ADVERTISEMENT

ಪ್ರಪಂಚ ಪರಿಚಯ

ಎನ್.ವಾಸುದೇವ್
Published 29 ಡಿಸೆಂಬರ್ 2012, 19:59 IST
Last Updated 29 ಡಿಸೆಂಬರ್ 2012, 19:59 IST
ಪ್ರಪಂಚ ಪರಿಚಯ
ಪ್ರಪಂಚ ಪರಿಚಯ   

1) ಎತ್ತರದಲ್ಲೂ, ಗಾತ್ರದಲ್ಲೂ ವಿಶ್ವದಾಖಲೆಗಳನ್ನೇ ಸೃಷ್ಟಿಸಿರುವ `ಸೆಕ್ಪೋಯಾ' ಪ್ರಭೇದಗಳ ಒಂದು ವೃಕ್ಷ (ಚಿತ್ರ - 1) ರಲ್ಲಿದೆ. ಸೆಕ್ಪೋಯಾ ವೃಕ್ಷಗಳ ನೆಲೆ ಯಾವ ಭೂಖಂಡಕ್ಕೆ ಸೀಮಿತವಾಗಿದೆ?
ಅ) ಯೂರೋಪ್ ಬ) ಉತ್ತರ ಅಮೆರಿಕ
ಕ) ಆಫ್ರಿಕ ಡ) ಆಸ್ಟ್ರೇಲಿಯಾ

2) ಹುಲಿಯಿಂದ ಹಿಡಿದು ಮನೆ ಬೆಕ್ಕಿನವರೆಗೆ ಪ್ರಸ್ತುತ ಧರೆಯಲ್ಲಿ 37ಮಾರ್ಜಾಲ ಪ್ರಭೇದಗಳಿವೆ (ಚಿತ್ರ - 1); ಪ್ರತಿ  ಪ್ರಭೇದದ ಬೆಕ್ಕಿಗೂ ಅದರದ್ದೇ ವೈಶಿಷ್ಟ್ಯ ಕೂಡ ಇದೆ. ಈ ಕೆಳಗಿನ ವಿಶಿಷ್ಟ ಲಕ್ಷಣ ಪ್ರತಿಯೊಂದೂ ಯಾವ ಬೆಕ್ಕಿಗೆ ಸಂಬಂಧಿಸಿದೆ - ಗುರುತಿಸಬಲ್ಲಿರಾ?
ಅ) ಅತ್ಯಂತ ದೊಡ್ಡ ಗಾತ್ರದ ಬೆಕ್ಕು
ಬ) ಗುಂಪು ಜೀವನ ನಡೆಸುವ ಏಕೈಕ ಬೆಕ್ಕು
ಕ) ಅತ್ಯಂತ ವೇಗದ ಓಟಗಾರ ಬೆಕ್ಕು
ಡ) ಅತ್ಯಧಿಕ `ಜನಸಂಖ್ಯೆ'ಯನ್ನು ಹೊಂದಿರುವ ಬೆಕ್ಕು

3) ಸುಂದರ ರೂಪದ ಸುಪ್ರಸಿದ್ಧ ಹಕ್ಕಿಯೊಂದು (ಚಿತ್ರ - 3) ರಲ್ಲಿದೆ. ಈ ಹಕ್ಕಿ ಗೊತ್ತೇ?
ಅ) ಬಿಳಿ ಕೊಕ್ಕರೆ ಬ) ಪಾರಿವಾಳ
ಕ) ಪೆಂಗ್ವಿನ್ ಡ) ಆಲ್‌ಬಟ್ರಾಸ್

4) ಕಡಲ ತಳದ ಕೆಲ ಪ್ರದೇಶಗಳಲ್ಲಿ ಭೂ ಒಡಲಿನಿಂದ ಕುಡಿವ ಜಲವನ್ನೂ ಖನಿಜಾಂಶಗಳನ್ನೂ ನಿರಂತರ ಉಕ್ಕಿಸುತ್ತಿರುವ ಸೃಷ್ಟಿಗಳಲ್ಲೊಂದು (ಚಿತ್ರ - 4) ರಲ್ಲಿದೆ. ಇಂಥ ನಿರ್ಮಿತಿಗಳ ಹೆಸರೇನು?
ಅ) ಜ್ವಾಲಾಮುಖಿ ಬ) ಗೀಸರ್
ಕ) ಬ್ಲ್ಯಾಕ್ ಸ್ಮೋಕರ್ಸ್‌ ಡ) ಹಾಟ್ ಸ್ಪಾಟ್

5) ಮತ್ಸ್ಯ ಸಾಮ್ರಾಜ್ಯದ `ಅತ್ಯಂತ ಬೃಹತ್ ಮೀನು' (ಚಿತ್ರ - 5) ರಲ್ಲಿದೆ. ಈ ಮತ್ಸ್ಯ ಯಾವುದು?
ಅ) ವ್ಹೇಲ್ ಶಾರ್ಕ್ ಬ) ನೀಲಿ ತಿಮಿಂಗಿಲ
ಕ) ಆನೆ ಮೀನು ಡ) ದಿ ಗ್ರೇಟ್ ವೈಟ್ ಶಾರ್ಕ್

6) ನಮ್ಮ ಹಿಮಾಲಯ ಪರ್ವತ ಪಂಕ್ತಿಯ ಹಿಂಬದಿಯಲ್ಲಿ ಸಿಲುಕಿ, ಹಾಗಾಗಿ ಮಳೆ ಮಾರುತಗಳಿಂದ ಮರೆಯಾಗಿ ಮರುಭೂಮಿಯೇ ಆಗಿರುವ ಪ್ರದೇಶದ ಒಂದು ದೃಶ್ಯ (ಚಿತ್ರ - 6) ರಲ್ಲಿದೆ. ಈ ಪ್ರಸಿದ್ಧ ಮರುಭೂಮಿ ಯಾವುದು?
ಅ) ಥಾರ್  ಬ) ಗೋಬಿ
ಕ) ನಾಮಿಬ್  ಡ) ಅಟಕಾಮ

7) ನಮ್ಮ ಸೌರವ್ಯೆಹದಲ್ಲಿ ನೆಪ್ಚೂನ್ ಗ್ರಹದಾಚೆಗಿನ ಬೃಹತ್ ಕಾಯ `ಪ್ಲೂಟೋ'ದ ಅಧ್ಯಯನಕ್ಕೆ ಸಾಗಿರುವ ವಿಶೇಷ ವ್ಯೋಮನೌಕೆ (ಚಿತ್ರ - 7) ರಲ್ಲಿದೆ. ಈ ವೋಮನೌಕೆಯ ಹೆಸರೇನು?
ಅ) ಪಾತ್ ಫೈಂಡರ್ ಬ) ಮೆಸೆಂಜರ್ ಕ) ವಾಯೇಜರ್ ಡ) ನ್ಯೂ ಹೊರೈಜನ್ಸ್

8) ರತ್ನಗಳ ಗುಂಪಿಗೇ ಸೇರಿದ `ನೀಲ' ಹರಳುಗಳು (ಚಿತ್ರ - 8) ರಲ್ಲಿದೆ. ನೀಲಮಣಿ (ಸಫೈರ್) ಗಳಲ್ಲಿನ ಮೂಲ ಖನಿಜ ಇವುಗಳಲ್ಲಿ ಯಾವುದು?
ಅ) ಕಾರ್ಬನ್ ಬ) ಕ್ವಾರ್ಟ್ಜ್
ಕ) ಕೋರಂಡಂ ಡ) ಟೋಪಾಜ್

9) ಕಡಲ ತಳದ ಕೆಸರಲ್ಲಿ ಕಿಕ್ಕಿರಿದು ಹರಡಿರುವ ಮೃತ ಮೃದ್ವಂಗಿಗಳ ಚಿಪ್ಪುಗಳ ರಾಶಿಯನ್ನು (ಚಿತ್ರ - 9) ರಲ್ಲಿ ಗಮನಿಸಿ. ಇಂಥ ಚಿಪ್ಪುಗಳಿಂದ ರೂಪುಗೊಳ್ಳುವ `ಶಿಲೆ' ಯಾವುದು ಗೊತ್ತೇ?
ಅ) ಸುಣ್ಣ ಶಿಲೆ ಬ) ಜೇಡಿ ಶಿಲೆ
ಕ) ಮರಳು ಶಿಲೆ ಡ) ಗ್ರಾನೈಟ್ ಶಿಲೆ

10) ಸುಂದರ ವರ್ಣಗಳ ಆಕಾರಗಳ ವಿಶ್ವಪ್ರಸಿದ್ಧ `ಟ್ಯೂಲಿಪ್' ಹೂ ತೋಟದ ದೃಶ್ಯ (ಚಿತ್ರ - 10) ರಲ್ಲಿದೆ. ಟ್ಯೂಲಿಪ್ ಹೂಗಳಿಗೆ, ಈ ಹೂಗಳ ಕೃಷಿಗೆ - ಉತ್ಪಾದನೆಗೆ ಯಾವ ರಾಷ್ಟ್ರ ಅತ್ಯಂತ ವಿಖ್ಯಾತ?
ಅ) ಜರ್ಮನಿ ಬ) ಯು. ಕೆ.
ಕ) ಹಾಲೆಂಡ್ ಡ) ಜಪಾನ್

11) ವೃಕ್ಷ ಕಾಂಡಗಳ ಚಿತ್ರವೊಂದು ಇಲ್ಲಿದೆ (ಚಿತ್ರ - 11) ವೃಕ್ಷ ಕಾಂಡಗಳ ಯಾವ ಲಕ್ಷಣದ ಮೂಲಕ ಆಯಾ ವೃಕ್ಷದ ವಯಸ್ಸನ್ನು ನಿರ್ಧರಿಸಬಹುದು?
ಅ) ಕಾಂಡದ ಉದ್ದ ಬ) ಕಾಂಡದ ವ್ಯಾಸ
ಕ) ತೊಗಟೆಯ ದಪ್ಪ ಡ) ಉಂಗುರಗಳ ಸಂಖ್ಯೆ

12) ನಿರ್ದಿಷ್ಟ ಅವಧಿಗೊಮ್ಮೆ ನಿರ್ದಿಷ್ಟ ಕಾಲದವರೆಗೆ ನಮ್ಮ ಭೂಮಿಗೆ ಶೀತ ಆವರಿಸಿ, ಭೂಭಾಗದ ಬಹುಪ್ರದೇಶವನ್ನು ಹಿಮಹಾಸು ಆವರಿಸುವ ವಿದ್ಯಮಾನವೊಂದಿದೆ ಗೊತ್ತೇ (ಚಿತ್ರ - 12) ಅಂಥ ಕಾಲಾವಧಿಯ ಹೆಸರೇನು?
ಅ) ಹಿಮ ಯುಗ ಬ) ಶೀತ ಯುಗ
ಕ) ಪ್ರಳಯ ಯುಗ ಡ) ಭೂ ಯುಗ

13) `ಲೇಸರ್'ನ ಸಹಾಯದಿಂದ ಶಸ್ತ್ರಚಿಕಿತ್ಸೆಯನ್ನು ನಡೆಸುತ್ತಿರುವ ದೃಶ್ಯವೊಂದು (ಚಿತ್ರ -13) ರಲ್ಲಿದೆ. ಅದು ಸರಿ. `ಲೇಸರ್'ನ ಪೂರ್ಣ ಹೆಸರನ್ನು ತಿಳಿಸಬಲ್ಲಿರಾ?

ಉತ್ತರಗಳು:
1) ಬ - ಉತ್ತರ ಅಮೆರಿಕ
2) ಅ - ಹುಲಿ; ಬ - ಸಿಂಹ; ಕ - ಚಿಟಾ; ಡ - ಮನೆ ಬೆಕ್ಕು
3) ಡ - ಆಲ್‌ಬಟ್ರಾಸ್
4) ಕ - ಬ್ಲ್ಯಾಕ್ ಸ್ಮೋಕರ್ಸ್‌
5) ಅ - ವ್ಹೇಲ್ ಶಾರ್ಕ್
6) ಬ - ಗೋಬಿ ಮರುಭೂಮಿ
7) ಡ - ನ್ಯೂ ಹೊರೈಜನ್ಸ್
8) ಕ - ಕೋರಂಡಂ
9) ಅ - ಸುಣ್ಣ ಶಿಲೆ
10) ಕ - ಹಾಲೆಂಡ್
11) ಡ - ಉಂಗುರಗಳ ಸಂಖ್ಯೆ
12) ಅ - ಹಿಮಯುಗ
13) ಲೈಟ್ ಆಂಪ್ಲಿಫಿಕೇಶನ್ ಬೈ ಸ್ಟಿಮ್ಯುಲೇಟೆಡ್ ನಿಮಿಶನ್ ಆಫ್ ರೇಡಿಯೇಶನ್
 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.