ADVERTISEMENT

ಹಕ್ಕಿಯ ‘ಡ್ರಮ್’ ಪ್ರೀತಿ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2017, 19:30 IST
Last Updated 16 ಸೆಪ್ಟೆಂಬರ್ 2017, 19:30 IST
ಹಕ್ಕಿಯ ‘ಡ್ರಮ್’ ಪ್ರೀತಿ
ಹಕ್ಕಿಯ ‘ಡ್ರಮ್’ ಪ್ರೀತಿ   

ಗಿಳಿಗಳ ಪ್ರಭೇದಕ್ಕೆ ಸೇರಿದ ‘ಪಾಮ್ ಕಾಕಟೂ’ ಎಂಬ ಗಂಡುಹಕ್ಕಿಯ ಕೊಕ್ಕು ದೊಡ್ಡದಾಗಿದೆ. ಮರದಿಂದ ದೊಡ್ಡ ಕಡ್ಡಿಯನ್ನೇ ಕೀಳುವಷ್ಟು ಸಾಮರ್ಥ್ಯ ಆ ಕೊಕ್ಕಿಗೆ ಇದೆ. ಅದು ಕಡ್ಡಿಯನ್ನು ಕಿತ್ತು, ಮರದ ಟೊಳ್ಳಾದ ಭಾಗಕ್ಕೆ ಜೋರಾಗಿ ಬಡಿಯತೊಡಗುತ್ತದೆ. ಆ ಶಬ್ದ ಒಂದು ಕಿ.ಮೀ. ದೂರದವರೆಗೆ ಕೇಳುತ್ತದೆ. ಗಿಳಿಯು ಯಾಕೆ ಹೀಗೆ ಡ್ರಮ್ ಬಾರಿಸುತ್ತದೆ ಎನ್ನುವುದನ್ನು ಪತ್ತೆಹಚ್ಚಲು ವಿಜ್ಞಾನಿಗಳು ತಲೆಕೆಡಿಸಿಕೊಳ್ಳುತ್ತಿದ್ದಾರೆ.

*


ರಕ್ತ ಮರುಪೂರಣ
ಮನುಷ್ಯನ ದೇಹದ ರಕ್ತವನ್ನು ಮೊದಲು ಬದಲಿಸಿದಾಗ ಪಕ್ಷಿಯ ರಕ್ತವನ್ನು ಮರುಪೂರಣ ಮಾಡಲಾಗಿತ್ತು. ಫ್ರಾನ್ಸ್‌ನ ರಾಜ ಹದಿನಾಲ್ಕನೇ ಲೂಯಿಸ್‌ನ ವೈದ್ಯ ಡಾ. ಜೀನ್ ಬ್ಯಾಪ್ಟಿಸ್ಟ್‌ ಡೆನಿಸ್ 1667ರ ಜೂನ್‌ 15ರಂದು 15 ವರ್ಷದ ಹುಡುಗನೊಬ್ಬನಿಗೆ ಕುರಿಯ ರಕ್ತವನ್ನು ಮರುಪೂರಣ ಮಾಡಿದ. ಸಂಕೀರ್ಣವಾದ ಶಸ್ತ್ರಚಿಕಿತ್ಸೆಯ ನಂತರವೂ ಹುಡುಗ ಬದುಕಿ ಉಳಿದ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.