
ಪ್ರಜಾವಾಣಿ ವಾರ್ತೆಅಳಿಲದು ಏರಿದೆ
ಹಲಸಿನ ಮರ
ಹಸಿರು ಕಾಯಿ
ಗೊಂಚಲಲ್ಲಿ
ಎಲೆಯ ಬೆರಳು
ಬಳಸಿದೆ
ಮಗುವಾ ತಾಯಿ
ತಬ್ಬಿದ ಹಾಗೆ
ಟೊಂಗೆ ಟೊಂಗೆ
ಹಿಡಿದಿದೆ
ಹಣ್ಣದು ಎಲ್ಲೆಂದು
ಹುಡುಕಿದೆ
ಕಾಯಿ ಕಂಡು
ಸಿಡುಕಿದೆ
ಹುಳು ಹುಪ್ಪಟೆ
ನಲುಗಿರಲು
ಅಳಿಲಾ ಮನ
ಮಿಡುಕಿದೆ
ಎಲೆಯ ರೀತೀಲಿ
ರಸದಾ ಹಣ್ಣು
ನೆನೆ ನೆನೆದು
ಚಪ್ಪರಿಸಿದೆ
ಹಣ್ಣನು ಹುಡುಕಲು
ಅಳಿಲಾ ಗಮನ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.