ADVERTISEMENT

Pottery Art: ಬದುಕು ಬೆಳಗುವ ಹಣತೆಗಳು...

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2025, 23:30 IST
Last Updated 18 ಅಕ್ಟೋಬರ್ 2025, 23:30 IST
ಇವೇ ನೋಡಿ ನಮ್ಮ ಬದುಕು ಬೆಳಗುವ ದೀಪಗಳು 
ಇವೇ ನೋಡಿ ನಮ್ಮ ಬದುಕು ಬೆಳಗುವ ದೀಪಗಳು    

ಚಿತ್ರಗಳು: ತಾಜುದ್ದೀನ್‌ ಆಜಾದ್‌

ಚಿತ್ರಗಳು: ತಾಜುದ್ದೀನ್‌ ಆಜಾದ್‌

ಕಲಬುರಗಿ ಜಿಲ್ಲೆಯ ಮೇಳಕುಂದಾ ಕೆ. ಗ್ರಾಮಕ್ಕೆ ಭೇಟಿ ಕೊಟ್ಟಾಗ ವೈವಿಧ್ಯಮಯ ವಿನ್ಯಾಸದ ಹಣತೆಗಳು ಸ್ವಾಗತ ಕೋರಿದಂತೆ ಭಾಸವಾಯಿತು. ಅಲ್ಲಿ ಒಂದಕ್ಕಿಂತ ಮತ್ತೊಂದು ಹಣತೆ ಆಕರ್ಷಕ, ಅತ್ಯಾಕರ್ಷಕ.

ಈ ಊರಲ್ಲಿ ಮೂವತ್ತಕ್ಕೂ ಅಧಿಕ ಕುಟುಂಬಗಳು ಕುಂಬಾರಿಕೆಯಲ್ಲಿ ತೊಡಗಿವೆ. ಇವರೆಲ್ಲರೂ ಮರಾಠ ಕುಂಬಾರರು. ವರ್ಷವಿಡೀ ಇದೇ ಕಾಯಕ. ಇದರಲ್ಲಿ ಕೈಗೆ ಸಿಗುವ ದುಡಿಮೆಯಲ್ಲೇ ಬದುಕಿನ ಬಂಡಿ ಸಾಗುತ್ತಿದೆ.

ADVERTISEMENT

ಊರಿನ ಹೃದಯಭಾಗದಲ್ಲೇ ವಾಸವಿರುವ ಈ ಕುಟುಂಬಗಳು ಮಣ್ಣಿನಲ್ಲಿ ಹಣತೆಗಳು, ಮತ್ತಿತರ ಕಲಾಕೃತಿಗಳಿಗೆ ಜೀವ ಕೊಡುತ್ತ, ತಮ್ಮ ಜೀವನವನ್ನೂ ಕಟ್ಟಿಕೊಂಡಿವೆ. ಒಂದಲ್ಲ, ಎರಡಲ್ಲ, ಹತ್ತಾರು ಬಗೆಯ ಹಣತೆಗಳು ಇಲ್ಲಿ ರೂಪ ಪಡೆಯುತ್ತಿವೆ. ಹಣತೆಗಳು ಮಾತ್ರವಲ್ಲ; ಮಣ್ಣಿನ ತಟ್ಟೆಗಳು, ಮಣ್ಣಿನಮೂರ್ತಿಗಳನ್ನೂ ಮಾಡಲಾಗುತ್ತದೆ.

ಇದು ಫ್ಯಾಷನ್‌ ಯುಗ. ಈ ಕಾಲಘಟ್ಟದಲ್ಲಿ ಕುಂಬಾರಿಕೆ ನೇಪಥ್ಯಕ್ಕೆ ಸರಿಯುತ್ತಿದೆ ಎನ್ನುವುದು ಅಲ್ಲಗಳೆಯಲಾಗದ ಮಾತು. ಹೀಗಿದ್ದರೂ ಅನೇಕ ಸವಾಲುಗಳ ಮಧ್ಯೆಯೂ
ಈ ಕುಟುಂಬಗಳು ತಮ್ಮ ಕುಲಕಸುಬು ಮುಂದುವರಿಸಿಕೊಂಡು ಹೊರಟಿವೆ. ಈ ವೃತ್ತಿ ಮಾಡುವವರಲ್ಲಿ ಪುರುಷರಷ್ಟೇ ಅಲ್ಲ; ಮಕ್ಕಳು, ಮಹಿಳೆಯರು ಮತ್ತು ಹಿರಿಯರೂ ಕಾಣಸಿಗುತ್ತಾರೆ.  

ಸುಟ್ಟ ಹಣತೆಗಳನ್ನು ಮಾರಾಟಕ್ಕೆ ಸಜ್ಜುಗೊಳಿಸುತ್ತಿರುವುದು
ಕುಂಬಾರನ ಕೈಯಲ್ಲಿ ಜೀವತಳೆದ ಹಣತೆ
ಮಣ್ಣಿನ ಹಣತೆಗಳು ಗಟ್ಟಿಯಾಗುವುದು ಹೀಗೆ...

ಇಲ್ಲಿ ಜೀವತಳೆದ ಮಣ್ಣಿನ ಹಣತೆಗಳು ಬೀದರ್‌, ಕಲಬುರಗಿ, ರಾಯಚೂರು ಜಿಲ್ಲೆಗಳು ಅಲ್ಲದೆ ಮಹಾರಾಷ್ಟ್ರದ ಸೊಲ್ಲಾಪುರ, ಆಂಧ್ರ ಪ್ರದೇಶದಲ್ಲೂ ಮಾರಾಟವಾಗುತ್ತವೆ.
ಎಂದಿನಂತೆ ಈ ವರ್ಷವೂ ಲಕ್ಷಾಂತರ ಹಣತೆಗಳು ಇಲ್ಲಿ ಸಿದ್ಧವಾಗಿವೆ. ರಾಜ್ಯ ಮತ್ತು ಹೊರ ರಾಜ್ಯಗಳ ಮನೆ–ಮನಗಳನ್ನು ಬೆಳಗಲು ಸಜ್ಜಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.