ADVERTISEMENT

ಕುವೆಂಪು ಪದ ಸೃಷ್ಟಿ: ವಜ್ರನಿದ್ರೆ, ಪ್ರೇಮರಾಹು

ಜಿ.ಕೃಷ್ಣಪ್ಪ
Published 10 ಆಗಸ್ಟ್ 2025, 1:30 IST
Last Updated 10 ಆಗಸ್ಟ್ 2025, 1:30 IST
<div class="paragraphs"><p>ಕುವೆಂಪು</p></div>

ಕುವೆಂಪು

   
ವಜ್ರನಿದ್ರೆ

ವಜ್ರನಿದ್ರೆ (ನಾ). ಗಾಢವಾದ ನಿದ್ದೆ

ಮಹೇಂದ್ರಾಚಲದ ಬಂಡೆಗಳನ್ನು ಕುರಿತು ಹೇಳುವಾಗ ಕುವೆಂಪು ಅವರು ಅವು ಎಚ್ಚರಗೊಳ್ಳದೆ ಇರುವ ಸ್ಥಿತಿಯನ್ನು ‘ವಜ್ರನಿದ್ರೆ’ ಪದದಿಂದ ಹೀಗೆ ಬಣ್ಣಿಸಿದ್ದಾರೆ:

ADVERTISEMENT

‘ಘನಿತ ಮೌನಂ ವಜ್ರನಿದ್ರೆಯಿಂದೆಳ್ಚರದೊ

ಪೇಳೆಂಬೊಲಾ ಬಂಡೆ ಬಿದ್ದಿದ್ದುವಲ್ಲಲ್ಲಲ್ಲಿ!’ 

ಪ್ರೇಮರಾಹು

ಶತ್ರುಘ್ನನು ರವಿಕುಲದ ಸುಖವನ್ನು ತಿಂದ ಮಂಥರೆಯನ್ನು ದಾರಿಯಲ್ಲಿ ಕಂಡು ಗೂನು ಬಿರಿಯುವಂತೆ ಬಡಿಯುವನು. ಆ ಗೋಳ್ದನಿ ಕೇಳಿ ಅಲ್ಲಿಗೆ ಬಂದ ಭರತನಿಗೆ ಅವಳು ‘ರಕ್ಷಿಸೋ’ ಎಂದು ಕೈ ನೀಡಿ ಬರುವಳು. ಆ ಚಿತ್ರಣದಲ್ಲಿ ಕುವೆಂಪು ಅವಳನ್ನು ‘ಪ್ರೇಮರಾಹು’ ಎಂದು ಕರೆದಿದ್ದಾರೆ. ಆ ನುಡಿ ಅವಳ ಪ್ರೇಮದಲ್ಲಿಯ ರಾಹುನಡೆಯನ್ನು ಸಮರ್ಥವಾಗಿ ಅಭಿವ್ಯಕ್ತಿಸಿದೆ.

‘ತನ್ನಂ ಮರೆವುಗಲ್ಕೋಡಿ

ಕೈನೀಡಿ ಬರುತಿರ್ದಳಂ ಆ ಪ್ರೇಮರಾಹುವಂ

ತೊಲಗಿಸುತ್ತ’

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.