ADVERTISEMENT

ಕುವೆಂಪು ಪದ ಸೃಷ್ಟಿ: ಬಾಳ್ಗನಸು

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2024, 23:53 IST
Last Updated 2 ಮಾರ್ಚ್ 2024, 23:53 IST
<div class="paragraphs"><p>ಕುವೆಂಪು</p></div>

ಕುವೆಂಪು

   


ಬಾಳ್ಗನಸು

ಬಾಳ್ಗನಸು (ನಾ). (ಆಲಂ) ಜೀವನದಲ್ಲಿ ಒಳ್ಳೆಯದನ್ನು ಬಯಸಿ ಕಲ್ಪಿಸಿಕೊಂಡಿರುವ ಬದುಕಿನ ಭವಿಷ್ಯ.

ADVERTISEMENT

(ಬಾಳ್ + ಕನಸು)

ಭರತನು ಮಾವನ ಮನೆಯಿಂದ ಹಿಂತಿರುಗಿ ಬರುವಷ್ಟರಲ್ಲಿ ತಂದೆ ದಶರಥನು ಮೃತನಾಗಿರುತ್ತಾನೆ. ತಂದೆಯ ಉಬ್ಬಿದ ಮೈಯನ್ನು ಎಳ್ಳಿನ ಎಣ್ಣೆಯ ಬಾನಿಯಿಂದ ತೆಗೆಯುವುದನ್ನು ನೋಡಿ ಅವನ ಮನ ಅಳುಕುತ್ತದೆ. ಅವನ ಮನದ ಭಾವವನ್ನು ಚಿತ್ರಿಸಿರುವ ಕವಿಯು – ಜೀವನದಲ್ಲಿ ಒಳ್ಳೆಯದನ್ನು ಬಯಸಿ ಕಲ್ಪಿಸಿಕೊಂಡಿರುವ ಬದುಕಿನ ಭವಿಷ್ಯವನ್ನು ಕಾವ್ಯಾಲಂಕಾರ ನುಡಿ ‘ಬಾಳ್ಗನಸು’ ರೂಪಿಸಿ - ಬದುಕಿನ ಜೀವದ್ರವ್ಯವನ್ನು ಕುಲುಕಾಡಿಸಿದ್ದಾರೆ.

ಭರತನಿಗೆ ಸಂತೋಷನಂದನ ಕಲ್ಪತರುವಿನಿಂದ ಜೋಲುವ ವಾತ್ಸಲ್ಯ ಭಾವದ ಹೆಜ್ಜೇನು ಹುಟ್ಟಿಯಂತೆ ಸುಖವಾಗಿದ್ದವನು ತಂದೆ ದಶರಥ. ಅವನು ಇಂದು ಚಟ್ಟದ ಕೆಟ್ಟಾಸೆ ಬೀಡಿನಲ್ಲಿದ್ದಾನೆ. ಅದು ಭರತನಿಗೆ ತನ್ನ ‘ಬಾಳ್ಗನಸು’ಗಳಿಗೆಲ್ಲ ಕೊನೆಯ ಸುಡುಗಾಡಿನಂತೆ ಕಾಣುತ್ತಿದೆ. ಹಾಗಿರುವಾಗ ಆ ಬಾಲಋಷಿ ಭರತನು ಆ ಶವದಲ್ಲಿ ಪಿತೃದೇವನನ್ನು ಕಾಣಲು ಸಾಧ್ಯವೆ?


ಸಂತೋಷನಂದನದ ಕಲ್ಪತರುವಿಂ ಜೋಲ್ವ

ವಾತ್ಸಲ್ಯ ಭಾವದಾ ಹೆಜ್ಜೇನು ಹುಟ್ಟಿಯೋಲ್

ಸುಖದ ಮಾರ್ಗಿದತ್ತೊ ತಾನದೆ ಇಂದು ಸೂಡಿನೊಲ್,

ಕೆಟ್ಟಾಸೆ ಬೀಡಿನೊಲ್, ಬಾಳ್‍ಗನಸುಗಳಿಗೆಲ್ಲ

ಕೊನೆಯ ಸುಡುಗಾಡಿನೊಲ್ ಕಾಣುತಿರೆ, ಬಾಲಋಷಿ

ಭರತನಾ ಶವದೊಳರಸುವನೆ ಪಿತೃದೇವನಂ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.