ADVERTISEMENT

ಕುವೆಂಪು ಪದ ಸೃಷ್ಟಿ: ಕೂರ್ಗೆಲಸ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2023, 23:30 IST
Last Updated 2 ಡಿಸೆಂಬರ್ 2023, 23:30 IST
<div class="paragraphs"><p>ಕುವೆಂಪು</p></div>

ಕುವೆಂಪು

   

ಕೂರ್ಗೆಲಸ

ಕೂರ್ಗೆಲಸ (ನಾ). ಕ್ರೂರವಾದ ಕೆಲಸ; ಕೆಟ್ಟಕೆಲಸ (ಕೂರ್ + ಕೆಲಸ)

ADVERTISEMENT

ಕೈಕೆಯ ತಂದೆ ಕೇಕೆಯ ಮಹಾರಾಜನು ಒಂದು ದಿನ ಬೇಟೆಯ ಕ್ರೂರವಾದ ಕೆಲಸದಿಂದ ಹಿಂತಿರುಗುತ್ತಿರುತ್ತಾನೆ. ಅದನ್ನು ಕವಿ ‘ಕೂರ್ಗೆಲಸ’ ಎಂಬ ಪದ ರೂಪಿಸಿ ಚಿತ್ರಿಸಿದ್ದಾರೆ. ಆ ಕೆಟ್ಟ ಕೆಲಸದಿಂದ ಹಿಂತಿರುಗಿ ಬರುವಾಗ ಅನಾಥ ಶಿಶುರೋದನ ಕೇಳಿ ಅವನಲ್ಲಿ ಕರುಣೆ ಉಂಟಾಗುತ್ತದೆ.‌‌

ಪಳುವೆ ತಾನಳುವಂತೆ

ಗೋಳಿಟ್ಟುದೊಂದು ಶಿಶುರೋದನಂ. ಕೂರ್ಗೆಲಸದಿಂ

ಪಿಂತಿರುಗುತಿರ್ದ ಪಾರ್ಥಿವನೊಳುದಿಸಿತು ಕರುಣೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.