ADVERTISEMENT

‘ಲೆಜೆಂಡ್ಸ್ ಆಫ್ ಎ ಸ್ಟಾರ್ಟ್‌ಅಪ್‌-ಗೈ’ ಕಾದಂಬರಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2019, 19:52 IST
Last Updated 12 ಮಾರ್ಚ್ 2019, 19:52 IST
ಪ್ರಾಚಿ
ಪ್ರಾಚಿ   

ಭಾರತದ ಪ್ರಮುಖ ಸಾಹಸ ಪ್ರವಾಸದ ಮಹಿಳಾ ಉದ್ಯಮಿ, ಪ್ರಶಸ್ತಿ ವಿಜೇತ ಲೇಖಕಿ ಪ್ರಾಚಿ ಗಾರ್ಗ್ ಅವರ ಕಾದಂಬರಿ ‘ಲೆಜೆಂಡ್ಸ್ ಆಫ್ ಎ ಸ್ಟಾರ್ಟ್‌ಅಪ್‌-ಗೈ’ ಇತ್ತೀಚೆಗೆ ಬಿಡುಗಡೆಯಾಗಿದೆ.

ರೆಸಿಡೆನ್ಸಿ ರಸ್ತೆಯಲ್ಲಿರುವ ಸಪ್ನ ಬುಕ್‌ಹೌಸ್‌ನಲ್ಲಿ ಈ ಕಾದಂಬರಿಯನ್ನು ಬಿಡುಗಡೆ ಮಾಡಲಾಯಿತು. ಲೇಖಕಿ ಜತೆಗೆ ಅವರ ಸಾಹಸ ಪ್ರವಾಸದ ಕಥನ, ಪುಸ್ತಕದ ಬಗ್ಗೆ ಸಂವಾದವನ್ನು ಏರ್ಪಡಿಸಲಾಗಿತ್ತು. ಪ್ರಾಚಿ ತಮ್ಮ ಯಶೋಗಾಥೆ, ಪುಸ್ತಕ ಬರೆಯುವ ಪ್ರಕ್ರಿಯೆಗಳ ಬಗ್ಗೆ ಮಾಹಿತಿ ಹಂಚಿಕೊಂಡರು. ಪ್ರಾಚಿ ‘ಘೂಮೋಫಿರ್‌’ನ ಸಂಸ್ಥಾಪಕಿ. ಮಹಿಳೆಯೇ ಸಂಪೂರ್ಣವಾಗಿ ನಡೆಸಿಕೊಂಡು ಬರುತ್ತಿರುವ ಈ ಸಂಸ್ಥೆ ಮಹಿಳಾ ಪ್ರವಾಸಿಗರನ್ನು ಉತ್ತೇಜಿಸುವ ಸಂಸ್ಥೆಯಾಗಿದೆ.

‘ಲೆಜೆಂಡ್ಸ್ ಆಫ್ ಎ ಸ್ಟಾರ್ಟ್‌ಅಪ್‌-ಗೈ’ ಕಾದಂಬರಿ: ಒಬ್ಬ ಹುಟ್ಟು ಶ್ರೀಮಂತ ತನ್ನದೇ ಆದ ಪದಗಳಲ್ಲಿ ಮತ್ತು ವಂಶಾವಳಿಯ ನೆರಳುಗಳಿಂದ ತನ್ನ ಅಸ್ತಿತ್ವಕ್ಕೆ ಅರ್ಥವನ್ನು ತರಲು ತನ್ನ ನಿರ್ದಿಷ್ಟ ಸ್ಥಾನದ ಬಗ್ಗೆ ಬರೆಯಲು ನಿರ್ಧರಿಸುತ್ತಾನೆ. ಒಬ್ಬ ಉದ್ಯಮಿಯ ವಿಕಸನದ ಬಗ್ಗೆ ಈ ಕಾದಂಬರಿ ವಿವರವನ್ನು ನೀಡುತ್ತದೆ. ಉದ್ಯಮಿಯ ಸವಾಲುಗಳ ಬಗ್ಗೆ ಮತ್ತು ಆ ಸವಾಲುಗಳನ್ನು ಎದುರಿಸುವ ಬಗೆಯ ಕುರಿತು ಕಾದಂಬರಿ ಬೆಳಕು ಚೆಲ್ಲುತ್ತದೆ.

ADVERTISEMENT

ಪ್ರಾಚಿ ಅವರ ಕೃತಿಗಳು: ಅವರು ಈ ಹಿಂದೆ ‘ಸೂಪರ್ ವುಮೆನ್’ ಪುಸ್ತಕ ಬರೆದಿದ್ದರು. ಅದರಲ್ಲಿ ಮಹಿಳಾ ಉದ್ಯಮಿಗಳ ಯಶೋಗಾಥೆಯನ್ನು ಬಿಂಬಿಸಿದ್ದರು. ‘ಸೂಪರ್ ಕಪಲ್ಸ್’ ಕೃತಿಯಲ್ಲಿ ಇಬ್ಬರೂ ಉದ್ಯಮಿಗಳಾಗಿದ್ದು, ಸಂಬಂಧ ಮತ್ತು ಕೆಲಸವನ್ನು ಹೇಗೆ ಸಮತೋಲಿತವಾಗಿ ಸರಿದೂಗಿಸಿಕೊಂಡು ಹೋಗುತ್ತಾರೆ ಎಂಬುದನ್ನು ವಿವರಿಸಿದ್ದರು. ‘ಸೂಪರ್‌ ಸಿಬ್ಲಿಂಗ್ಸ್‌’ನಲ್ಲಿ ಸಹೋದರಿಯರು ಸೇರಿ ಸ್ಟಾರ್ಟಪ್ ಆರಂಭಿಸಿದ ಕತೆಯನ್ನು ಹೆಣೆದುಕೊಟ್ಟಿದ್ದರು.

ತಮ್ಮ ಹೊಸ ಕೃತಿಯ ಬಗ್ಗೆ ಮಾತನಾಡಿದ ಪ್ರಾಚಿ ಗಾರ್ಗ್, ‘ನನ್ನ ಕೃತಿ ಬಿಡುಗಡೆಗಾಗಿ ಬೆಂಗಳೂರಿಗೆ ಬಂದಿರುವುದು ಸಂತಸ ತಂದಿದೆ. ನನ್ನ ಹೃದಯ ಮತ್ತು ಆತ್ಮ ಈ ಕೃತಿಯಲ್ಲಿ ಹಾಸುಹೊಕ್ಕಾಗಿದೆ. ಹೆಮ್ಮೆಯ ಓದುಗರು ಖುಷಿಪಡುತ್ತಾರೆ ಎಂಬ ವಿಶ್ವಾಸವಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.