ADVERTISEMENT

ಮೊದಲ ಓದಿನಲ್ಲಿ ಡಾ. ಜಿ.ವಿ.ಡಿಯವರ ವಾರುಣಿ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2010, 11:30 IST
Last Updated 20 ಡಿಸೆಂಬರ್ 2010, 11:30 IST

ಕನ್ನಡ ಪ್ರಾಧ್ಯಾಪಕರಾದ ಡಾ.ಜಿ.ವಿ.ದಾಸೇಗೌಡರು ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಹತ್ತಾರು ಪುಸ್ತಕಗಳನ್ನು ಪ್ರಕಟಿಸಿದವರು. ಲಲಿತ ಪ್ರಬಂಧ ಪ್ರಕಾರದಲ್ಲಿನ ಅವರ ಕೊಯಿಲು ‘ವಾರುಣಿ’. ಇಪ್ಪತ್ತೊಂದು ಪ್ರಬಂಧಗಳನ್ನು ಹೊಂದಿರುವ ಈ ಸಂಕಲನ ವಸ್ತು ವೈವಿಧ್ಯದಿಂದ ಹಾಗೂ ಸುಲಲಿತ ಭಾಷೆಯಿಂದ ಗಮನಸೆಳೆಯುತ್ತದೆ.

ಲೇಖಕರ ಸಮೃದ್ಧ ಜೀವನದ್ರವ್ಯ ಹಾಗೂ ಬದುಕಿನ ಕುರಿತ ಆರೋಗ್ಯಕರ ನೋಟ ಈ ಪ್ರಬಂಧಗಳಲ್ಲಿ ಎದ್ದುಕಾಣುತ್ತದೆ. ಸಣ್ಣಸಣ್ಣ ವಿವರಗಳ ಮೂಲಕವೇ ಬದುಕಿನ ಸತ್ಯಗಳನ್ನು ಲೇಖಕರು ಮನಗಾಣಿಸುತ್ತಾರೆ. ಗ್ರಾಮೀಣ ಜೀವನ ದರ್ಶನವೂ, ಮೌಲ್ಯಗಳ ಪರಾಮರ್ಶೆಯೂ ಇಲ್ಲಿದೆ. ‘ಬೆಳೆ ಕೊಯ್ಲು’, ‘ಹಾವು ಬಂತು ಹಾವು’ ‘ಚುನಾವಣಾ ಕರ್ತವ್ಯದಲ್ಲಿ’ ರೀತಿಯ ಪ್ರಬಂಧಗಳು ಪ್ರಬಂಧಕಾರರ ಬರವಣಿಯ ಸೊಗಸು ಹಾಗೂ ಭಾಷೆಯ ಸುಲಲಿತ ಬಳಕೆಗೆ ಉತ್ತಮ ಉದಾಹರಣೆಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.