ADVERTISEMENT

ಮೊದಲ ಓದು : ಜಲದ ಕಣ್ಣು

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2013, 19:59 IST
Last Updated 16 ಫೆಬ್ರುವರಿ 2013, 19:59 IST
ಮೊದಲ ಓದು : ಜಲದ ಕಣ್ಣು
ಮೊದಲ ಓದು : ಜಲದ ಕಣ್ಣು   

ಜಲದ ಕಣ್ಣು
(ರೈತ ನಾಯಕ ಡಾಕ್ಟ್ರು ವೆಂಕಟರೆಡ್ಡಿ ಹೋರಾಟ ಕಥನ ಮತ್ತು ಇತರೆ ಬರಹಗಳು)
ಸಂ: ಕೆ. ವೆಂಕಟೇಶ್, ಮಂಜುನಾಥ್ ಎಂ. ಅದ್ದೆ
ಪು: 172; ಬೆ: ರೂ. 150; ಪ್ರ: ನೆಲದವ್ವ ಪ್ರಕಾಶನ, ನಂ. 118/1, ಕೊತ್ತನೂರು, ಎಸ್. ಒ.ಸಿ ಅಂಚೆ, ಜೆ.ಪಿ. ನಗರ 8ನೇ ಹಂತ, ಬೆಂಗಳೂರು- 76
 

ರೈತ, ದಲಿತ ಹಾಗೂ ಕನ್ನಡಪರ ಹೋರಾಟಗಾರರಾದ ಡಾ. ವೆಂಕಟರೆಡ್ಡಿ ಅಕಾಲದಲ್ಲಿ ಕಣ್ಮರೆಯಾದರು. ಅವರ ಹೋರಾಟದ, ಜೀವಪರ ಬದುಕಿನ ಹಾದಿಯನ್ನು ದಾಖಲಿಸುವ ಪ್ರಯತ್ನವನ್ನು ಈ ಪುಸ್ತಕದಲ್ಲಿನ ಲೇಖಕರು ಮಾಡಿದ್ದಾರೆ.

ವೆಂಕಟರೆಡ್ಡಿ ಅವರ ಗೆಳೆಯರು, ಆತ್ಮೀಯರು ಇಲ್ಲಿ ಬರೆದಿದ್ದಾರೆ. ವೈಚಾರಿಕ ಒಳನೋಟದ, ಹೋರಾಟವನ್ನೇ ಬದುಕನ್ನಾಗಿಸಿಕೊಂಡ ಅಪರೂಪದ ವ್ಯಕ್ತಿಯನ್ನು ಇಲ್ಲಿನ ಎಲ್ಲ ಲೇಖನಗಳು ಚಿತ್ರಿಸುತ್ತವೆ.

ಮೂಲತಃ ಬಳ್ಳಾರಿಯವರಾದ ವೆಂಕಟರೆಡ್ಡಿ ದೊಡ್ಡಬಳ್ಳಾಪುರದಲ್ಲಿ ತಮ್ಮ ವೈದ್ಯ ವೃತ್ತಿಯನ್ನು ಆರಂಭಿಸಿ ಕರ್ನಾಟಕದ ಹಲವು ಚಳವಳಿಗಳಲ್ಲಿ ಉತ್ಸಾಹದಿಂದ ತೊಡಗಿಕೊಂಡಿದ್ದ ವ್ಯಕ್ತಿ. ಗೋಕಾಕ್ ಚಳವಳಿಯೂ ಸೇರಿದಂತೆ ಬೆಂಗಳೂರಿನಲ್ಲಿ ನಡೆದ ಹಲವಾರು ಹೋರಾಟಗಳಲ್ಲಿ ತೊಡಗಿಕೊಂಡವರು. ರೈತನಾಯಕ ಎಂ.ಡಿ. ನಂಜುಂಡಸ್ವಾಮಿ ಅವರ ವಿಚಾರಗಳಿಂದ ಆಕರ್ಷಿತರಾಗಿ, ಅವರೊಂದಿಗೆ ಅನೇಕ ರೈತಪರ ಹೋರಾಟಗಳನ್ನು ಮಾಡಿದ್ದಾರೆ. ಇಂಥ `ಹೋರಾಟಗಾರ ವೈದ್ಯ'ರ ಬಗ್ಗೆ ಮಂಜುನಾಥ್ ಅದ್ದೆ, ಎ.ಓ. ಆವಲಮೂರ್ತಿ, ವಿ.ಎಲ್. ಪ್ರಕಾಶ್, ಟಿ.ಎನ್. ಪ್ರಭುದೇವ್ ಮತ್ತಿತರರು ಬರೆದಿದ್ದಾರೆ. ಈ ಬರಹಗಳು ವೆಂಕಟರೆಡ್ಡಿ ಅವರ ಬದುಕನ್ನು ತಮ್ಮ ಪುಟ್ಟ ವ್ಯಾಪ್ತಿಯಲ್ಲೇ ದೊಡ್ಡ ವ್ಯಕ್ತಿತ್ವವೊಂದರ ಚಿತ್ರವನ್ನು ಕೊಡುತ್ತವೆ.

ಪುಸ್ತಕದ ಇನ್ನೊಂದು ಭಾಗ ದೇವನೂರ ಮಹಾದೇವ, ನಟರಾಜ್ ಹುಳಿಯಾರ್, ಕೆ.ವಿ.ನಾರಾಯಣ್ ಅವರ ರೈತಚಳವಳಿಗಳ ಕುರಿತಾದ ಬರಹಗಳನ್ನು ಒಳಗೊಂಡಿದೆ. ಇವೆಲ್ಲವುಗಳಿಂದಾಗಿ ಇಲ್ಲಿ ಕರ್ನಾಟಕದ ಚಳವಳಿಗಳ ಒಂದು ಸ್ಥೂಲನೋಟ ಓದುಗರಿಗೆ ಒಂದೆಡೆ ಸಿಕ್ಕಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT