ADVERTISEMENT

ಕಪಾಟು

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2019, 19:45 IST
Last Updated 31 ಆಗಸ್ಟ್ 2019, 19:45 IST
ಕಪಾಟು
ಕಪಾಟು   

ವಿಮರ್ಶಕ ಕೆ.ನರಸಿಂಹಮೂರ್ತಿ ಅವರು ಕನ್ನಡದ ಶ್ರೇಷ್ಠ ಕಥೆಗಳಲ್ಲಿ ಆಯ್ದ 12 ಕಥೆಗಳನ್ನು ಈ ಕೃತಿಯಲ್ಲಿ ಸಂಪಾದಿಸಿಕೊಟ್ಟಿದ್ದಾರೆ. ಈ ಕೃತಿ ಈಗ ಮರುಮುದ್ರಣಗೊಂಡು ಓದುಗರ ಕೈಸೇರುತ್ತಿದೆ. ಸಾಹಿತ್ಯದ ವಿದ್ಯಾರ್ಥಿಗಳಿಗೆ ಅತ್ಯಂತ ‌ಉಪಯುಕ್ತವಾದ ಕೃತಿ. ಅಲ್ಲದೆ, ಕಥಾಪ್ರಿಯರ ಓದುವ ಆಸಕ್ತಿಯನ್ನು ತಣಿಸುವಷ್ಟು ಸಾಮರ್ಥ್ಯ ಈ ಕಥೆಗಳಲ್ಲಿವೆ. ಬಸವರಾಜ ಕಟ್ಟೀಮನಿಯವರ ‘ಗಿರಿಜಾ ಕಂಡ ಸಿನಿಮಾ’, ಚದುರಂಗರ ‘ನಾಲ್ಕು ಮೊಳ ಭೂಮಿ’, ಅನುಪಮಾ ಅವರ ‘ದೇವರೇ ಬರಲಿಲ್ಲ’, ಎಲ್‌.ಎಸ್‌.ಶೇಷಗಿರಿರಾವ್‌ ಅವರ ‘ಮುಯ್ಯಿ’, ಸದಾಶಿವ ಅವರ ‘ನಲ್ಲಿಯಲ್ಲಿ ನೀರು ಬಂದಿತು!!!’ ಕಥೆಗಳು ಮತ್ತೆ ಮತ್ತೆ ಓದಿಸಿಕೊಳ್ಳುತ್ತವೆ. ಅಲ್ಲಲ್ಲಿಕಾಗುಣಿತ ದೋಷಗಳು ಉಳಿದಿರುವುದನ್ನು ಹೊರತುಪಡಿಸಿದರೆ, ಪ್ರತಿಯೊಬ್ಬರ ಮನೆಯ ಕಪಾಟಿನಲ್ಲಿ ಇರಲೇಬೇಕಾದ ಕೃತಿ ಇದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.