ADVERTISEMENT

ಡಬ್ಲು.ಬಿ. ಯೇಟ್ಸ್ ಕವಿಯ ಎಪ್ಪತ್ತು ಕವನಗಳು

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2020, 19:30 IST
Last Updated 15 ಫೆಬ್ರುವರಿ 2020, 19:30 IST
   

‘ಅನ್ಯರ ಜತೆಗಿನ ಜಗಳದಿಂದ ನಾವು ಮಾಡುವುದು, ವಾಕ್ಚತುರತೆ, ಆದರೆ ನಮ್ಮೊಡನೆ ನಮ್ಮ ಜಗಳದಿಂದ ರಚಿಸುವುದು, ಕವಿತೆ’ ಎಂದು ಹೇಳಿದ ಪ್ರಸಿದ್ಧ ಕವಿ ಡಬ್ಲು.ಬಿ. ಯೇಟ್ಸ್‌ನ ಎಪ್ಪತ್ತು ಕವಿತೆಗಳ ಕನ್ನಡ ಅನುದಾದ ಪುಸ್ತಕ ಪ್ರಕಟಗೊಂಡಿದೆ. ಪ್ರೊ.ವಿ. ಕೃಷ್ಣಮೂರ್ತಿ ರಾವ್ ಅವರು ಕವಿತೆಗಳ ಅನುವಾದ ಮಾಡಿದ್ದಾರೆ. ಈ ಕೃತಿಯಲ್ಲಿ ಯೇಟ್ಸ್‌ನ 13 ಕವನ ಸಂಕಲನಗಳಿಂದ ಆಯ್ದ ಕವಿತೆಗಳ ಅನುವಾದವಿದೆ. ಪ್ರತಿ ಕವನ ಸಂಕಲನದಿಂದ ಮೂರು ಅಥವಾ ಏಳು ಕವಿತೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಅನುವಾದದ ಜತೆಗೆ, ಕವನ ಸಂಕಲನಗಳ ಕುರಿತ ಟಿಪ್ಪಣಿಗಳನ್ನು ನೀಡಿದ್ದಾರೆ. ಕವನದ ಚೌಕಟ್ಟು, ಕವನದ ಕುರಿತು ಯೇಟ್ಸ್ ಮಾತನಾಡಿದ ಕೆಲವು ಭಾಗಗಳನ್ನು ಈ ಟಿಪ್ಪಣಿಯಲ್ಲಿ ಕೊಡಲಾಗಿದೆ. ಜತೆಗೆ, ಕವಿತೆಗಳೊಂದಿಗಿನ ಲೇಖಕನ ಅನುಸಂಧಾನದ ಅನುಭವಗಳನ್ನು ಇಲ್ಲಿ ಹಿಡಿದಿಡುವ ಪ್ರಯತ್ನವನ್ನು ಟಿಪ್ಪಣಿಗಳಲ್ಲಿ ಕೃತಿಕಾರ ಮಾಡಿದ್ದಾರೆ. ಕವಿತೆಗಳಲ್ಲಿ ಕನ್ನಡದ ಓದುಗರಿಗೆ ಬರುವ ಸಾಂಸ್ಕೃತಿಕ ಭಿನ್ನತೆ ಇರುವ ಅಂಶಗಳ ಕುರಿತೂ ಲೇಖಕ ಅಡಿಟಿಪ್ಪಣಿಗಳನ್ನು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.