ADVERTISEMENT

ಕಾವ್ಯ ಕಾರಣ

​ಪ್ರಜಾವಾಣಿ ವಾರ್ತೆ
Published 11 ಮೇ 2019, 20:00 IST
Last Updated 11 ಮೇ 2019, 20:00 IST
   

ಕಂಬಾರ ಕಾವ್ಯ ಕಾರಣ‌

ಸಂಪಾದನೆ: ಡಾ.ಸರಜೂಕಾಟ್ಕರ್‌

ಪ್ರ: ಯಾಜಿ ಪ್ರಕಾಶನ, ಹೊಸಪೇಟೆ

ADVERTISEMENT

ಮೊ: 94810 42400

ಕಂಬಾರರು ಕಾವ್ಯ ಕೃಷಿಗೆ ತಮ್ಮದೆ ಆದ ಮಾರ್ಗವನ್ನು ಅನ್ವೇಷಿಸಿ, ಈ ಹಿಂದಿನ ಜನಪದ ಕಾವ್ಯವವನ್ನು ಹಿಗ್ಗಿಸಿ ಅದಕ್ಕೆ ಹೊಸ ಅರ್ಥ ನೀಡಿದವರು. ಜನಪದ ಮಿಥ್‌ಗಳನ್ನು ಹೊಸ ರೀತಿಯಲ್ಲಿ ಹೇಳಿದವರು. ಹಳೆಯ ಮಿಥ್‌ಗಳನ್ನು ಭಂಗಿಸಿ, ಅವುಗಳಿಗೆ ಆಧುನಿಕತೆಯ ಸ್ಪರ್ಶ ನೀಡಿದರು. ಇಂತಹ ಬಹುಮುಖ ಪ್ರತಿಭೆ ಕಂಬಾರರ ಕಾವ್ಯವನ್ನು ನಂತರದ ಪೀಳಿಗೆಯ ಕವಿ, ಲೇಖಕರು ಈ ಕೃತಿಯಲ್ಲಿ ಹೊಸ ಬಗೆಯಲ್ಲಿ ಅರ್ಥೈಸಿದ್ದಾರೆ. ಒಬ್ಬ ಶ್ರೇಷ್ಠ ಕವಿಯ ಕಾವ್ಯವನ್ನು ಹೊಸ ತಲೆಮಾರಿನವರು ಯಾವ ರೀತಿ ನೋಡಿದ್ದಾರೆಂಬುದನ್ನು ಇಲ್ಲಿನ ಬರಹಗಳು ತೆರೆದಿಡುತ್ತವೆ. ಕಂಬಾರರ ಪುತ್ರಿ ಜಯಶ್ರೀ ಸೇರಿದಂತೆ ನಾಡಿನ 26 ಮಂದಿ ಹಿರಿಯ– ಕಿರಿಯ ಕವಿಗಳು ಒಂದೊಂದು ಕವನದ ಕುರಿತು ದಾಖಲಿಸಿರುವ ಅನಿಸಿಕೆಗಳು ಈ ಕೃತಿಯಲ್ಲಿ ಅಡಕವಾಗಿವೆ. ಇದೊಂದು ಸಂಗ್ರಹ ಯೋಗ್ಯ ಕೃತಿ ಎಂದರೆ ಅತಿಶಯವಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.