ADVERTISEMENT

ಮೊದಲ ಓದು: ಕನಸುಗಳನ್ನು ಬೆನ್ನಟ್ಟುವ ಕ್ಯಾಡ್ಬರೀಸ್‌ನ ಪಯಣ

​ಪ್ರಜಾವಾಣಿ ವಾರ್ತೆ
Published 17 ಜನವರಿ 2026, 23:30 IST
Last Updated 17 ಜನವರಿ 2026, 23:30 IST
   

ಕನಸುಗಳ‌ ಬೆನ್ನಟ್ಟಿ ಹೋಗುವ ಪ್ರಶಾಂತ ಅಲಿಯಾಸ್ ಕ್ಯಾಡ್ಬರೀಸ್‌ನ ಕನಸು ಮತ್ತು ವಾಸ್ತವವೇ ಪೂರ್ಣೇಶ್ ಅವರ ‘ಕ್ಯಾಡ್ಬರೀಸ್‌ನ ಕ್ಯಾಬ್ - ಡೈರೀಸ್’ ಎನ್ನುವ ಕಿರು ಕಾದಂಬರಿ.

ಕಾದಂಬರಿಯ ಕಥಾವಸ್ತು ಕೇವಲ ಅದರ ಕಥಾನಾಯಕನ ಕಥೆಯಂತೆ ಅನಿಸದೆ, ಕನಸಿನ ಬೆನ್ನತ್ತಿರುವ ಎಲ್ಲರ ಕಥೆಯಂತೆ ಭಾಸವಾಗುತ್ತದೆ. ಹೊಸ ಶೈಲಿಯ ನಿರೂಪಣೆಯ ಜೊತೆಗೆ ಹೊಸ ಕಾಲದ ಓದುಗರಿಗೆ ಹಿತ ಎನಿಸುವ ಬರವಣಿಗೆ ಕಾದಂಬರಿಯಲ್ಲಿದೆ.

ಕನಸುಗಳು, ಅದರ ಹಿಂದೆ ಓಡುವ ಜನರು, ಆಧುನಿಕ ಜೀವನ ಶೈಲಿ, ನಗರಗಳ ಟ್ರಾಫಿಕ್, ಕಾರ್ಪೋರೇಟ್ ವ್ಯವಸ್ಥೆ, ಜೀವನದ ಭಾಗವಾಗಿರೋ ಸಿನಿಮಾ ಹಾಡುಗಳು, ಬದುಕಿನ ಭಿನ್ನ‌ ಆಯಾಮಗಳನ್ನು ಈ ಕಾದಂಬರಿ ತೆರೆದಿಡುತ್ತದೆ.

ADVERTISEMENT

ಕೆಲವೇ ಪಾತ್ರಗಳಿರುವ ಕಾದಂಬರಿಯಲ್ಲಿ, ಪಾತ್ರ ಮತ್ತು ಸಂದರ್ಭಕ್ಕೆ ಅನುಗುಣವಾಗಿ ಭಾಷಾ ಶೈಲಿಯು ಕೂಡ ಬದಲಾಗುತ್ತದೆ. ಒಂದೇ ಗುಕ್ಕಿನಲ್ಲಿ ಓದಿ ಮುಗಿಸಬಹುದು.

ಪುಸ್ತಕದ ಹಿನ್ನುಡಿಯಲ್ಲಿ ಲೇಖಕ ಜಯರಾಮಚಾರಿ ಅವರು 'ಈ ಕಿರು ಕಾದಂಬರಿ ಮನುಷ್ಯನ ಪ್ರೀತಿ, ಪ್ರೇಮ, ಬದುಕು, ಭಯ, ಜೀವನ ಪ್ರೀತಿ ಇಂಥದ್ದೇ ಭಾವಗಳನ್ನಿಟ್ಟುಕೊಂಡ ಬಲು ಚೆಂದವಾಗಿ ನೇಯ್ದ ಕತೆ' ಎಂದು ಅಭಿಪ್ರಾಯಪಟ್ಟಿದ್ದಾರೆ. ಪುಸ್ತಕ‌ ಓದಿದ ನಂತರ ಓದುಗನಿಗೂ ಈ ಅನುಭವವಾಗುತ್ತದೆ.

ಪುಸ್ತಕ: ಕ್ಯಾಡ್ಬರೀಸ್‌ನ ಕ್ಯಾಬ್ - ಡೈರೀಸ್

ಲೇಖಕ: ಪೂರ್ಣೇಶ್

ಪ್ರಕಾಶನ: ಕೆ.ಕೆ.‌ ನರೇಟಿವ್ಸ್ (ಸ್ವ ಪ್ರಕಾಶನ)

ಪುಟ ಸಂಖ್ಯೆ: 94

ಬೆಲೆ: ₹120

ಫೋನ್ ನಂ: +91 99452 96542

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.