ADVERTISEMENT

ಅನಿರೀಕ್ಷಿತ ಕಥೆಗಳು ಪುಸ್ತಕ ವಿಮರ್ಶೆ: ‘ರೋಮಾಂಚನಕಾರಿ ಕಥೆಗಳು’

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2025, 23:31 IST
Last Updated 30 ಆಗಸ್ಟ್ 2025, 23:31 IST
<div class="paragraphs"><p>ಅನಿರೀಕ್ಷಿತ ಕಥೆಗಳು</p></div>

ಅನಿರೀಕ್ಷಿತ ಕಥೆಗಳು

   

ಇಂಗ್ಲಿಷ್ ಓದುಗರನ್ನು ಬರಹದ ಮೂಲಕ ಚಕಿತಗೊಳಿಸಿದ ರೊಆಲ್ಡ್‌ದಾಹ್ಲ್ ಅವರ ಸಣ್ಣಕಥೆಗಳು ‘Tales of Unexpected’ ಕೃತಿ ಕನ್ನಡದಲ್ಲಿ ‘ಅನಿರೀಕ್ಷಿತ ಕಥೆಗಳು’ ಎಂದು ಪ್ರಕಟವಾಗಿದೆ. ಶೀರ್ಷಿಕೆಯೇ ಹೇಳುವಂತೆ ಇಲ್ಲಿನ ಕಥೆಗಳಲ್ಲಿ ಅನಿರೀಕ್ಷಿತ ತಿರುವುಗಳಿವೆ‌. ಓದುಗನನ್ನು ಕುತೂಹಲಕ್ಕೆ ಹಚ್ಚಿ, ಕಥೆ ಮುಗಿಯುವವರೆಗೂ ಉದ್ವೇಗ ಹೆಚ್ಚಿಸುತ್ತದೆ. ಕೊನೆಯಲ್ಲಿ ಹೀಗೆ ಇರಬಹುದು ಎಂದು ಊಹಿಸಿದರೆ ಅದನ್ನು ಇಲ್ಲಿನ ಕಥೆಗಳು ಸುಳ್ಳು ಮಾಡುತ್ತವೆ. ಓದಿದ ಬಳಿಕ ಉಂಟಾಗುವ ರೋಮಾಂಚನ ಭಾವ ವಿಶೇಷ ಬಗೆಯದು.

ಪತ್ತೆದಾರಿ ಕಾದಂಬರಿ ಓದುವಾಗ ಉಂಟಾಗುವ ಕುತೂಹಲ, ರೋಮಾಂಚನ, ಉದ್ವೇಗ ಪುಸ್ತಕದುದ್ದಕ್ಕೂ ಅನುಭವವಾಗುತ್ತದೆ. ಅದರೆ ಇಲ್ಲಿನ ಕಥೆಗಳಿಗೆ ಯಾವುದನ್ನೂ ಪತ್ತೆ ಮಾಡುವ ಉಮೇದು ಇಲ್ಲ. ದಾಹ್ಲ್ ಅವರ ನಿರೂಪಣಾ ಶೈಲಿ ನಿಮ್ಮ ಓದಿಗೆ ವಿಶಿಷ್ಟ ಅನುಭವ ನೀಡುತ್ತದೆ.‌ ಜೆ.ವಿ ಕಾರ್ಲೊ ಅವರ ಸೊಗಸಾದ ಅನುವಾದ, ಮೂಲ ಕಥೆಗಳೇನೋ ಎಂದೆನಿಸಿಬಿಡುತ್ತದೆ. ಓದುಗರು ಮೆಚ್ಚಿಕೊಳ್ಳವಂತೆ ದಾಹ್ಲರನ್ನು ಕಾರ್ಲೊ ಕನ್ನಡಕ್ಕೆ‌ ಪರಿಚಯಿಸಿದ್ದಾರೆ‌.

ADVERTISEMENT

ಇಲ್ಲಿನ ಕಥೆಗಳಲ್ಲಿರುವ ಅನಿರೀಕ್ಷಿತ ತಿರುವುಗಳೇ ಓದುಗರ ಪಾಲಿಗೆ ರಸಪಾಕ. ಕಥಾವಸ್ತು, ಕಥೆ ಕಟ್ಟುವ ದಾಹ್ಲರ ಕಸುಬುದಾರಿಗೆ ಪುಸ್ತಕದ ಹೆಚ್ಚುಗಾರಿಕೆ. ವಿಶಿಷ್ಟ ಬಗೆಯ ಕಥೆ ನಿರೂಪಣಾ ಶೈಲಿ ಓದುಗರ ಭಾವವನ್ನು ಕ್ಷಣ ಕ್ಷಣಕ್ಕೆ ಬದಲಿಸುತ್ತದೆ. ಅಚ್ಚರಿಯ ಅಂತ್ಯ ಓದುಗನನ್ನು ಚಿಕಿತಗೊಳಿಸುತ್ತದೆ.

ಕಥೆಯ ಆರಂಭದಲ್ಲಿ ಬರುವ ಸನ್ನಿವೇಶಗಳು ಸಾಮಾನ್ಯ ಅನಿಸಿದರೂ, ಮಧ್ಯದಲ್ಲಿ ವಿಚಿತ್ರ ತಿರುವು ಪಡೆದುಕೊಂಡು ಕೊನೆಗೆ ಅಸಾಮಾನ್ಯ ಪರಿಸ್ಥಿತಿ ನಿರ್ಮಿಸುತ್ತದೆ. ನಮಗೆ ತಿಳಿದಿರುವ ಸನ್ನಿವೇಶಗಳನ್ನು ವಿಶಿಷ್ಟವಾಗಿ ಚಿತ್ರಿಸಿರುವುದೇ‌, ಇಲ್ಲಿನ ಕಥೆಗಳನ್ನು ಬೇರೆ ಕಥೆಗಳಿಗಿಂತ ಭಿನ್ನವಾಗಿಸಿದೆ. ಇಲ್ಲಿನ ಕಥೆಗಳ ಕಲಾತ್ಮಕತೆಯನ್ನು ಮೆಚ್ಚಬೇಕೇ ವಿನಃ ಇಲ್ಲಿ ತಾತ್ವಿಕತೆಯನ್ನು ಹುಡುಕಕೂಡದು. ಬದುಕಿನ ಬಗೆಗಿನ ಪಾಠಗಳನ್ನು ಓದುಗರು ಹೆಕ್ಕಬಹುದು. ಎಲ್ಲಾ ತೆರನಾದ ಓದುಗರಿಗೆ ಈ ಪುಸ್ತಕ ಪಥ್ಯವಾಗಬಲ್ಲದು.

ಅನಿರೀಕ್ಷಿತ ಕಥೆಗಳು

ಲೇ: ರೊಆಲ್ಡ್‌ದಾಹ್ಲ್

ಕನ್ನಡಕ್ಕೆ: ಜೆ.ವಿ. ಕಾರ್ಲೊ

ಪ್ರ: ಸೃಷ್ಟಿ ಪಬ್ಲಿಕೇಷನ್ಸ್

ಸಂ: 9845096668

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.